AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diabetes: ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ಶುಗರ್ ಟೆಸ್ಟ್​ ಮಾಡಿಸಿಕೊಳ್ಳಿ..

Health Tips: ಮಧುಮೇಹ ಶುರುವಾದಾಗ ದೇಹದ ತೂಕ ಅನಿರೀಕ್ಷಿತವಾಗಿ ಕಡಿಮೆಯಾಗುತ್ತ ಹೋಗುತ್ತದೆ. ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಸಕ್ಕರೆ ಅಂಶ ಸಂಗ್ರಹವಾದರೆ ಅದನ್ನು ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಾಗುವುದಿಲ್ಲ.

Diabetes: ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ಶುಗರ್ ಟೆಸ್ಟ್​ ಮಾಡಿಸಿಕೊಳ್ಳಿ..
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Mar 09, 2021 | 3:37 PM

Share

ಮಧುಮೇಹ, ಸದ್ದಿಲ್ಲದೆ ದೇಹ ಹೊಕ್ಕಿಬಿಡುವ ಒಂದು ಕಾಯಿಲೆ. ಇದು ಒಂದು ಸಲ ಶುರುವಾದ ಮೇಲೆ ಜೀವನಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು. ಸಿಹಿ ಬಿಡಬೇಕು.. ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ವ್ಯಾಯಾಮ, ವಾಕಿಂಗ್​, ಯೋಗಗಳನ್ನೂ ಅಳವಡಿಸಿಕೊಂಡರೆ ಇನ್ನೂ ಉತ್ತಮ. ಮಧುಮೇಹ ನಿಭಾಯಿಸುವುದು ತೀರ ಕಿರಿಕಿರಿ ಹೌದಾದರೂ ಜೀವನ, ಆಹಾರ ಕ್ರಮದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ ಅದೇನೂ ಮಹಾನ್ ಕಷ್ಟವಲ್ಲ. ಆದರೆ ಅದೆಷ್ಟೋ ಮಂದಿಗೆ ಡಯಾಬಿಟಿಸ್​ ಶುರುವಾಗಿದ್ದೇ ಗೊತ್ತಾಗುವುದಿಲ್ಲ. ಹಾಗಾಗಿ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ಬಗ್ಗೆ ಸ್ವಲ್ಪ ಗಮನ ಇರಲಿ.. ಇಂತಹ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಒಂದು ಬಾರಿ ವೈದ್ಯರ ಬಳಿ ಹೋಗಿ, ಡಯಾಬಿಟಿಸ್​ ಟೆಸ್ಟ್​ ಮಾಡಿಸಿಕೊಳ್ಳಿ..

ಅತಿಯಾದ ಆಯಾಸ ಸರಿಯಾಗಿ ಆಹಾರ ಸೇವನೆ ಮಾಡುತ್ತಿದ್ದು, ಅಗತ್ಯ ಇರುವಷ್ಟು ವಿಶ್ರಾಂತಿ ಪಡೆಯುತ್ತಿದ್ದರೂ ನಿಮಗೆ ತುಂಬ ಬಳಲಿಕೆ, ಆಯಾಸ ಆಗುತ್ತಿದ್ದರೆ ಅದು ಮಧುಮೇಹದ ಲಕ್ಷಣವೇ ಆಗಿರಬಹುದು. ಯಾಕೆಂದರೆ ಡಯಾಬಿಟಿಸ್​ ಶುರುವಾಗುವ ಹಂತದಲ್ಲಿ ದೇಹ ಹೆಚ್ಚು ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಇದೇ ಕಾರಣಕ್ಕೆ ನೀವು ಎಷ್ಟೇ ವಿಶ್ರಾಂತಿ ಮಾಡಿದ್ದರೂ ಮತ್ತೆ ಮತ್ತೆ ಆಯಾಸ ಉಂಟಾಗುತ್ತದೆ.

ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುತ್ತದೆ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ನಮ್ಮ ಮೂತ್ರಪಿಂಡಗಳಿಗೆ ಅದನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ಆ ಸಕ್ಕರೆ ಅಂಶಗಳು ಮೂತ್ರದಲ್ಲಿ ಸಂಗ್ರಹವಾಗುತ್ತವೆ. ಹೀಗಾದಾಗ ಪದೇಪದೆ ಮೂತ್ರವಿಸರ್ಜನೆ ಮಾಡಬೇಕು ಎನ್ನಿಸುತ್ತದೆ. ಅಷ್ಟೇ ಅಲ್ಲ, ಇದು ಬ್ಯಾಕ್ಟೀರಿಯಾ, ಯೀಸ್ಟ್ ಸೋಂಕಿಗೂ ಕಾರಣವಾಗಬಹುದು. ಒಮ್ಮೆ ನೀವೂ ಹೀಗೆ ಪದೇಪದೆ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ ಯಾವುದಕ್ಕೂ ಶುಗರ್​ ಟೆಸ್ಟ್ ಮಾಡಿಸಿಕೊಂಡುಬಿಡಿ.

ಬೇಗನೇ ತೂಕ ಕಡಿಮೆಯಾಗುತ್ತದೆ ಮಧುಮೇಹ ಶುರುವಾದಾಗ ದೇಹದ ತೂಕ ಅನಿರೀಕ್ಷಿತವಾಗಿ ಕಡಿಮೆಯಾಗುತ್ತ ಹೋಗುತ್ತದೆ. ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಸಕ್ಕರೆ ಅಂಶ ಸಂಗ್ರಹವಾದರೆ ಅದನ್ನು ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಾಗುವುದಿಲ್ಲ. ಶುಗರ್​ ಪ್ರಮಾಣ ಹೆಚ್ಚಾದಾಗ ನಾವೆಷ್ಟೇ ಆಹಾರ ತಿಂದರೂ ಅದರಲ್ಲಿ ಅಂಶಗಳನ್ನು ನಮ್ಮ ದೇಹ ಹೀರಿಕೊಳ್ಳುವುದಿಲ್ಲ. ಇದು ದೇಹದಲ್ಲಿನ ಆರೋಗ್ಯಕರ ಕೊಬ್ಬನ್ನೂ ಕರಗಿಸಲು ಶುರುಮಾಡುತ್ತದೆ. ಹೀಗಾದಾಗ ತೂಕ ಸಹಜವಾಗಿಯೇ ಕಡಿಮೆಯಾಗುತ್ತದೆ. ನೀವು ತೂಕ ಇಳಿಸಿಕೊಳ್ಳಲು ಏನೂ ಮಾಡದೆಯೇ ಸಣ್ಣವಾಗುತ್ತಿದ್ದರೆ ಅದು ಮಧುಮೇಹವೇ ಇರಬಹುದು.

ದೃಷ್ಟಿ ಕುಂದುತ್ತದೆ ದೇಹದಲ್ಲಿ ಒಮ್ಮೆಲೇ ಸಕ್ಕರೆ ಪ್ರಮಾಣ ಹೆಚ್ಚುವುದರಿಂದ ದೃಷ್ಟಿ ಸಮಸ್ಯೆ ಎದುರಾಗಬಹುದು. ದೃಷ್ಟಿ ಕುಂದಬಹುದು..ಕಣ್ಣು ಬ್ಲರ್​ ಆಗಬಹುದು. ಇನ್ನು ಅತಿಯಾದ ಶುಗರ್​​ನಿಂದ ದೃಷ್ಟಿ ಪೂರ್ತಿಯಾಗಿ ಹೋಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಒಮ್ಮೆ ನಿಮಗೆ ಕಣ್ಣು ಮಂಜಾಗುತ್ತಿದೆ. ಕಾಣಿಸುವ ಮಟ್ಟ ಸ್ವಲ್ಪ ಕಡಿಮೆ ಆಗಿದೆ ಅಂದರೆ ಕೂಡಲೇ ಹೋಗಿ ಶುಗರ್​ ಟೆಸ್ಟ್​ ಮಾಡಿಸಿಕೊಳ್ಳುವುದು ಒಳಿತು.

ಚರ್ಮದ ಬಣ್ಣದ ಕಂದುತ್ತದೆ ದೇಹದಲ್ಲಿ ಹೆಚ್ಚಾದ ಸಕ್ಕರೆ ಅಂಶ ಚರ್ಮದ ಬಣ್ಣವನ್ನು ಕಂದಿಸಬಹುದು. ಅದರಲ್ಲೂ ಕುತ್ತಿಗೆಯ ಸುತ್ತ, ಕೀಲು ಭಾಗಗಳಲ್ಲಿ, ಕಾಲುಗಳ ಬಣ್ಣ ಸ್ವಲ್ಪ ಮಟ್ಟಿಗೆ ಕಪ್ಪಾಗಬಹುದು. ಹೀಗಾದಾಗ ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.

ದೇಹದಲ್ಲಿ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸಕ್ಕರೆ ಅಂಶ ಇರಬೇಕು. ಅದು ಮಿತಿಮೀರಿದರೆ ಅನೇಕ ತೊಂದರೆಗಳು ಉಂಟಾಗುತ್ತವೆ. ಅಂಗಾಂಗಳ ವೈಫಲ್ಯವೂ ಆಗಬಹುದು. ಒಂದು ಸಣ್ಣ ಗಾಯವಾದರೂ ರಕ್ತಸ್ರಾವ ನಿಲ್ಲಿಸಲು ಹರಸಾಹಸ ಪಡಬೇಕಾಗಬಹುದು. ಮಧುಮೇಹ ಲಿವರ್​ಗೆ ಸಂಬಂಧಪಟ್ಟ ಕಾಯಿಲೆ ಎಂದು ಹೇಳಲಾಗುತ್ತಾದರೂ ಅದು ನಿರ್ದಿಷ್ಟವಾಗಿ ಇಂಥದ್ದೇ ಕಾರಣಕ್ಕೆ ಬರುತ್ತದೆ ಎಂದು ಹೇಳಲಾಗದು. ಇದು ಸಣ್ಣ ಕಾಯಿಲೆ ಎಂದು ನಿರ್ಲಕ್ಷ್ಯ ಮಾಡಬಾರದು. ಹಾಗೇ ಶುಗರ್​ ಬಂದಾಕ್ಷಣ ಜೀವನವೇ ಮುಗಿದುಹೋಯಿತು ಎಂದು ಭಾವಿಸುವುದೂ ಬೇಡ..ಅದು ಗಂಭೀರ ಸ್ಥಿತಿಗೆ ಹೋಗದಂತೆ ನಿಯಂತ್ರಿಸುವುದು ನಮ್ಮ ಕೈಯಲ್ಲೇ ಇರುತ್ತದೆ.

ಇದನ್ನೂ ಓದಿ: ‘5 A Day’: ಎರಡು ಹಣ್ಣು – ಮೂರು ತರಕಾರಿ.. ಪ್ರತಿದಿನವೂ ಸೇವಿಸುವುದರಿಂದ ಆರೋಗ್ಯ ವೃದ್ಧಿ!

Published On - 3:19 pm, Tue, 9 March 21

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್