AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಸುಷ್ಮಾ ಚಕ್ರೆ
|

Updated on: May 03, 2025 | 4:04 PM

ಪಾಕಿಸ್ತಾನ ಸೇನೆಯ ಹೇಳಿಕೆಯ ಪ್ರಕಾರ, ಕಾರ್ಯಾಚರಣೆಯ ಸಿದ್ಧತೆಯನ್ನು ನಿರ್ಣಯಿಸಲು ಮತ್ತು ಕ್ಷಿಪಣಿಯ ಸುಧಾರಿತ ಸಂಚರಣೆ ವ್ಯವಸ್ಥೆ ಮತ್ತು ಸುಧಾರಿತ ಕುಶಲತೆ ಸೇರಿದಂತೆ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳನ್ನು ಮೌಲ್ಯೀಕರಿಸಲು ಈ ಉಡಾವಣೆಯನ್ನು ನಡೆಸಲಾಯಿತು. ಪಾಕಿಸ್ತಾನ ಸೇನಾ ಕಾರ್ಯತಂತ್ರದ ಪಡೆಗಳ ಕಮಾಂಡರ್, ಕಾರ್ಯತಂತ್ರದ ಯೋಜನೆಗಳ ವಿಭಾಗ ಮತ್ತು ಸೇನಾ ಕಾರ್ಯತಂತ್ರದ ಪಡೆಗಳ ಕಮಾಂಡ್‌ನ ಹಿರಿಯ ಅಧಿಕಾರಿಗಳು, ಪಾಕಿಸ್ತಾನದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ತರಬೇತಿ ಉಡಾವಣೆ ವೇಳೆ ಹಾಜರಿದ್ದರು.

ಇಸ್ಲಮಾಬಾದ್, ಮೇ 3: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಬೆನ್ನಲ್ಲೇ ಯುದ್ಧದ ಆತಂಕ ಹೆಚ್ಚಾಗಿದೆ. ಇದರ ನಡುವೆ ಪಾಕಿಸ್ತಾನ (Pakistan) ಇಂದು ಅಬ್ದಾಲಿ ವೆಪನ್ ಸಿಸ್ಟಮ್ ನ ಯಶಸ್ವಿ ತರಬೇತಿ ಉಡಾವಣೆಯನ್ನು ನಡೆಸಿತು. ಪಾಕಿಸ್ತಾನದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. 450 ಕಿ.ಮೀ ವ್ಯಾಪ್ತಿಯ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಅಬ್ದಾಲಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿದೆ. ಪಹಲ್ಗಾಮ್ ಉಗ್ರರ ದಾಳಿ (Pahalgam Terror Attack) ನಂತರ ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಇದು ಎಕ್ಸ್ ಇಂಡಸ್ ನ ಭಾಗವಾಗಿ 450 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಪಾಕಿಸ್ತಾನ ಇಂದು 450 ಕಿ.ಮೀ ವ್ಯಾಪ್ತಿಯ ಮೇಲ್ಮೈಗೆ ಹಾರುವ ಕ್ಷಿಪಣಿಯಾದ ಅಬ್ದಾಲಿ ವೆಪನ್ ಸಿಸ್ಟಮ್‌ನ ಯಶಸ್ವಿ ತರಬೇತಿ ಉಡಾವಣೆಯನ್ನು ಘೋಷಿಸಿತು. ಪಾಕಿಸ್ತಾನ ಸೇನಾ ಕಾರ್ಯತಂತ್ರದ ಪಡೆಗಳ ಕಮಾಂಡರ್, ಕಾರ್ಯತಂತ್ರದ ಯೋಜನೆಗಳ ವಿಭಾಗ ಮತ್ತು ಸೇನಾ ಕಾರ್ಯತಂತ್ರದ ಪಡೆಗಳ ಕಮಾಂಡ್‌ನ ಹಿರಿಯ ಅಧಿಕಾರಿಗಳು, ಪಾಕಿಸ್ತಾನದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ತರಬೇತಿ ಉಡಾವಣೆ ವೇಳೆ ಹಾಜರಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ