ವೀರಶೈವ ಲಿಂಗಾಯುತರ ಸಂಖ್ಯೆ ಜಾಸ್ತಿಯಿದೆ, ಮತ್ತೊಮ್ಮೆ ಜಾತಿ ಗಣತಿ ಮಾಡಿಸಬೇಕು: ವೀಣಾ ಕಾಶಪ್ಪನವರ್
ತಮ್ಮ ಪತಿ ಕಾಶಪ್ಪನವರ್ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ನಡೆಯುತ್ತಿರುವ ಮಾತಿನ ಯುದ್ಧದ ಬಗ್ಗೆ ವೀಣಾ ಕಾಮೆಂಟ್ ಮಾಡಲಿಲ್ಲ. ಅದು ಅವರವರ ವೈಯಕ್ತಿಕ ವಿಚಾರ, ಯತ್ನಾಳ್ ಪ್ರತಿದಿನ ಹೇಳಿಕೆ ನೀಡುತ್ತಿರುವುದನ್ನು ಗಮನಿಸುತ್ತಿದ್ದೇನೆ, ಅದೇನೆ ಇದ್ದರೂ ಗುರುಗಳು ಅವರಿಗೆ ಮಾರ್ಗದರ್ಶನ ಮಾಡಬೇಕು, ತನಗೆ ನೀಡಿರುವ ಜವಾಬ್ದಾರಿ ನಿಭಾಯಿಸುವುದಷ್ಟೇ ತನ್ನ ಕೆಲಸ ಎಂದು ವೀಣಾ ಹೇಳಿದರು.
ದಾವಣಗೆರೆ, ಮೇ 3: ಕಾಂಗ್ರೆಸ್ ನಾಯಕಿ ಮತ್ತು ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಪ್ರದಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಜನ ಗಣತಿಯ ಜೊತೆ ಜಾತಿ ಗಣತಿ ಸಹ ಮಾಡಿಸಲು ನಿರ್ಧಾರ ತೆಗೆದುಕೊಂಡಿರುವುದನ್ನು ಸ್ವಾಗತಿಸಿದರು. ರಾಜ್ಯ ಸರ್ಕಾರ ಮಾಡಿಸಿರುವ ಜಾತಿ ಗಣತಿ ಸರಿಯಿಲ್ಲ ಅಂತ ಹೇಳಲಾಗುತ್ತಿದೆ, ಅದನ್ನು ಮತ್ತೊಮ್ಮೆ ಮಾಡಿಸಿದರೆ ಚೆನ್ನಾಗಿರುತ್ತದೆ. ಯಾಕೆಂದರೆ, ಆ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು 65ಲಕ್ಷ ಇದ್ದಾರೆ ಅಂತ ಹೇಳಲಾಗುತ್ತಿದೆ, ಅದರೆ ವಾಸ್ತವದಲ್ಲಿ ಉಪ ಪಂಗಡಗಳನ್ನು ಸೇರಿಸಿದರೆ ಲಿಂಗಾಯತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಿದ ವೀಣಾ ಈ ನಿಟ್ಟಿನಲ್ಲಿ ತಮ್ಮ ರಾಷ್ಟ್ರೀಯ ಅಧ್ಯಕ್ಷರು ತೆಗೆದುಕೊಳ್ಳುವ ನಿಲುವಿಗೆ ಬದ್ಧರಾಗಿರುತ್ತೇವೆ ಎಂದರು.
ಇದನ್ನೂ ಓದಿ: ಯತ್ನಾಳ್ಗೆ ತಾಕತ್ತಿದ್ದರೆ ಬಿಜೆಪಿಗೆ ರಾಜೀನಾಮೆ ನೀಡಿ ಚುನಾವಣೆ ಗೆದ್ದು ತೋರಿಸಲಿ: ವಿಜಯಾನಂದ್ ಕಾಶಪ್ಪನವರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್

