Cauvery Water Dispute: ‘ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ, ಆದರೆ ಡ್ಯಾಂ ತುಂಬುವ ಹಂತದಲ್ಲಿದೆ’ ಎಂದ ಡಿ.ಕೆ ಶಿವಕುಮಾರ್
ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಂತ್ರಿ ಡಿ.ಕೆ. ಶಿವಕುಮಾರ್, ನಾವು ಇನ್ನು ತಮಿಳುನಾಡಿಗೆ ಪ್ರತ್ಯೇಕವಾಗಿ ನೀರು ಹರಿಸಿಲ್ಲ. ಡ್ಯಾಂ ಸಂಪೂರ್ಣವಾಗಿ ತುಂಬುವ ಹಂತಕ್ಕೆ ತಲುಪಿದೆ. ಡ್ಯಾಂ ಭರ್ತಿಯಾದರೆ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಹರಿಬಿಡುವುದು ಅನಿವಾರ್ಯವಾಗುತ್ತದೆ. ನೀರು ಜಲಾಶಯದ ಸಾಮರ್ಥ್ಯ ಮೀರಿ ಹರಿಯುವಾಗ ಅದನ್ನು ತಡೆದು ಹಿಡಿದಿಟ್ಟುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರು, ಆಗಸ್ಟ್ 01: ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆಯ ಕಾವು ಏರುತ್ತಿರುವಾಗಲೇ, ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಪ್ರತಿಕ್ರಿಯಿಸಿರುವ ಮುಖ್ಯಂತ್ರಿ ಡಿ.ಕೆ. ಶಿವಕುಮಾರ್, ನಾವು ಇನ್ನು ತಮಿಳುನಾಡಿಗೆ ಪ್ರತ್ಯೇಕವಾಗಿ ನೀರು ಹರಿಸಿಲ್ಲ. ಡ್ಯಾಂ ಸಂಪೂರ್ಣವಾಗಿ ತುಂಬುವ ಹಂತಕ್ಕೆ ತಲುಪಿದೆ. ಡ್ಯಾಂ ಭರ್ತಿಯಾದರೆ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಹರಿಬಿಡುವುದು ಅನಿವಾರ್ಯವಾಗುತ್ತದೆ. ನೀರು ಜಲಾಶಯದ ಸಾಮರ್ಥ್ಯ ಮೀರಿ ಹರಿಯುವಾಗ ಅದನ್ನು ತಡೆದು ಹಿಡಿದಿಟ್ಟುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಅಲ್ಲದೆ ತಮಿಳುನಾಡು ಈಗಾಗಲೇ ಸುಪ್ರೀಂಕೋರ್ಟ್‌ಗೆ ಹೋಗಲು ಸಿದ್ಧತೆ ನಡೆಸಿದೆ. ಸದ್ಯ ಕಾವೇರಿಯಲ್ಲಿ 36 ರಿಂದ 39 ಕ್ಯೂಸೆಕ್ ನೀರು ಹರಿಯುತ್ತಿದೆ. ತಮಿಳುನಾಡು 3,600 ಕ್ಯೂಸೆಕ್ ನೀರನ್ನು ಕೇಳಿದೆ. ವಿರೋಧ ಪಕ್ಷದ ನಾಯಕರೊಂದಿಗೆ ಮತ್ತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ನಾಳೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜಲಾಶಯಗಳು ಭರ್ತಿಯಾಗುತ್ತಿರುವುದರಿಂದ ನೀರನ್ನು ಹೊರಬಿಡಲೇಬೇಕಾಗುತ್ತದೆ. ನೀರು ಬಿಡಬಾರದು ಎಂದು ಯಾರೂ ಜಲಾಶಯದ ಬಳಿ ಹೋಗಬೇಡಿ ಅಥವಾ ನದಿಗೆ ಇಳಿಯಬೇಡಿ. ಹರಿವು ತೀವ್ರವಾಗಿದ್ದು, ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗುವ ಅಪಾಯವಿದೆ. ಪ್ರತಿಯೊಬ್ಬರ ಜೀವವೂ ಅತ್ಯಂತ ಅಮೂಲ್ಯವಾದದ್ದು, ಯಾರೂ ಇಂತಹ ಸಾಹಸಕ್ಕೆ ಮುಂದಾಗಬೇಡಿ ಎಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Aug 01, 2026 12:25 PM
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು

