ಯತ್ನಾಳ್ಗೆ ತಾಕತ್ತಿದ್ದರೆ ಬಿಜೆಪಿಗೆ ರಾಜೀನಾಮೆ ನೀಡಿ ಚುನಾವಣೆ ಗೆದ್ದು ತೋರಿಸಲಿ: ವಿಜಯಾನಂದ್ ಕಾಶಪ್ಪನವರ್
ಬಸನಗೌಡ ಯತ್ನಾಳ್ ಅವರು, ಪಾದಯಾತ್ರೆ ಸಮಯದಲ್ಲಿ ಯಡಿಯೂರಪ್ಪರನ್ನು ತರಾಟೆಗೆ ತೆಗೆದುಕೊಂಡಾಗ ನೀವು ಖುಷಿ ಪಟ್ಟೀರಲ್ಲ ಎಂದಾಗ ಕಾಶಪ್ಪನವರ್, ಅವರು ಈಗಲೂ ಯಡಿಯೂರಪ್ಪ ಮಾತ್ರ ಯಾಕೆ ಎಲ್ಲರನ್ನೂ ಬಯ್ಯುತ್ತಾರೆ, ಬಸವಣ್ಣನವರನ್ನೂ ಅವರು ಬಿಟ್ಟಿಲ್ಲ, ಯತ್ನಾಳ್ ಸಂಸ್ಕೃತಿಯನ್ನು ಚೆನ್ನಾಗಿ ಬಲ್ಲೆ, ಎಷ್ಟು ಸಂಸ್ಕಾರವಂತರು ಅಂತಲೂ ಬಲ್ಲೆ ಎಂದು ಹೇಳಿದರು.
ಹುಬ್ಬಳ್ಳಿ, ಏಪ್ರಿಲ್ 11: ಪಂಚಮಸಾಲಿ ಸಮಾಜದ ಮುಖಂಡರ ಸಭೆಯ ನಂತರ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ವಿಜಯಾನಂದ್ ಕಾಶಪ್ಪನವರ್, ಪಂಚಮಸಾಲಿ ಸಮುದಾಯಕ್ಕೆ ಎರಡು ಪೀಠಗಳಿರಬಹುದು ಆದರೆ ಸಮುದಾಯ ಮಾತ್ರ ಒಂದೇ ಮತ್ತು ಅದು ಬಹಳ ದೊಡ್ಡದು, ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು. ನಾನೇ ಮುಂದಿನ ಸಿಎಂ ಎಂದು ಹೇಳಿಕೊಂಡು ತಿರುಗುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ಗೆ ತಾಕತ್ತಿದ್ದರೆ ಬಿಜೆಪಿಗೆ ರಾಜೀನಾಮೆ ಕೊಟ್ಟ ಆಚೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲಿ, ತಾನು ಸಹ 50 ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದೇನೆ, ಜನ ಇವರ ಹಣೆಬರ ಬರೆಯುತ್ತಾರೆ ಎಂದು ಕಾಶಪ್ಪನವರ್ ಹೇಳಿದರು.
ಇದನ್ನೂ ಓದಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಕಾವಿ ಸಾಕಾಗಿದೆ, ಖಾದಿ ಬೇಕಾಗಿದೆ: ವಿಜಯಾನಂದ್ ಕಾಶಪ್ಪನವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ