Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 4 ತಿಂಗಳು ಹಿಂದೆ ಮಾವನ ಮಗನನ್ನು ಮದುವೆಯಾಗಿದ್ದ ಲಕ್ಷ್ಮಿಗೆ ಸಾಯಲು ಯಾವ ಕಾರಣವೂ ಇರಲಿಲ್ಲ

ಕೇವಲ 4 ತಿಂಗಳು ಹಿಂದೆ ಮಾವನ ಮಗನನ್ನು ಮದುವೆಯಾಗಿದ್ದ ಲಕ್ಷ್ಮಿಗೆ ಸಾಯಲು ಯಾವ ಕಾರಣವೂ ಇರಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 11, 2025 | 8:56 PM

ಘಟನೆ ನಡೆದಿರೋದು ಬೈಲಹೊಂಗಲ ತಾಲ್ಲೂಕಿನ ಇಂಚಲ ಗ್ರಾಮದಲ್ಲಿ. ಲಕ್ಷ್ಮಿ ಕ್ರಿಮಿನಾಶಕ ಮಾತ್ರೆ ಸೇವಿಸಿದಾಗ ಮನೆಯಲ್ಲಿ ಒಬ್ಬರೇ ಇದ್ದರಂತೆ. ಗಂಡ ಕೆಲಸಕ್ಕೆ ಹೋಗಿದ್ದರೆ ಕುಟುಂಬದ ಇತರ ಸದಸ್ಯರು ಮದುವೆಯೊಂದಕ್ಕೆ ಹೋಗಿದ್ದರಂತೆ. ಲಕ್ಷ್ಮಿಯನ್ನು ಕೂಡಲೇ ಬೈಲಹೊಂಗಲ ಆಸ್ಪತ್ರೆ ನಂತರ ಬೆಳಗಾವಿಯ ಬಿಮ್ಸ್​​ಗೆ ಕರೆತರಲಾಗಿದೆಯಾದರೂ ಅವರು ಉಳಿದಿಲ್ಲ, ಪೋಸ್ಟ್​ಮಾರ್ಟಂ ರಿಪೋರ್ಟ್ ಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಯುತ್ತಿದ್ದಾರೆ.

ಬೆಳಗಾವಿ, ಏಪ್ರಿಲ್ 11: ಕೇವಲ 4 ತಿಂಗಳು ಹಿಂದೆ ಸೋದರಮಾವನ ಮಗನನ್ನು ಮದುವೆಯಾಗಿದ್ದ 22-ವರ್ಷದ ಯುವತಿ ಲಕ್ಷ್ಮಿ ಹೂಗಾರ್ ಗೆ ಅದ್ಯಾವ ಸಮಸ್ಯೆ ಕಾಡುತ್ತಿತ್ತೋ? ಅವರ ಪತಿ ಮತ್ತು ವೃತ್ತಿಯಲ್ಲಿ ಸೇಲ್ಸ್​ಮನ್ ಆಗಿರುವ ಮಂಜುನಾಥ್ (Manjunath) ಹೇಳುವ ಲಕ್ಷ್ಮಿಗೆ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಲು ಬಲವಾದ ಕಾರಣ ಯಾವುದೂ ಇರಲಿಲ್ಲ. ಲಕ್ಷ್ಮಿಯ ತಂದೆಯೇ ಹೇಳುವ ಪ್ರಕಾರ ಗಂಡನ ಮನೆಯಲ್ಲಿ ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಸಮಸ್ಯೆ ಇರಲಿಲ್ಲ. ಲಕ್ಷ್ಮಿಗೆ ಆಗಾಗ್ಗೆ ಜ್ವರ ಬರುತ್ತಿತ್ತಂತೆ ಮತ್ತು ಅದಕ್ಕಾಗಿ ವೈದ್ಯರಿಂದ ಔಷಧಿಯನ್ನು ಮಂಜುನಾಥ ಮನೆಯವರು ಮಾಡಿಸುತ್ತಿದ್ದರು. ಎಲ್ಲ ಸರಿಯಿದ್ದರೂ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಿಸ್ಟ್ರಿಯಾಗಿ ಕಾಣುತ್ತಿದೆ.

ಇದನ್ನೂ ಓದಿ:  ಹಾಸನ: ದ್ವಿತೀಯ ಪಿಯುಸಿಯಲ್ಲಿ ಶೇ 79 ಅಂಕ ಬಂದಿದ್ರೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ