ಬಿಜೆಪಿ ವರಿಷ್ಠರು ಯತ್ನಾಳ್ರನ್ನು ಉಚ್ಚಾಟಿಸಿದ್ದಾರೆ ಮತ್ತು ನಾವು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ: ಕುಮಾರ ಬಂಗಾರಪ್ಪ
ಯತ್ನಾಳ್ ಒಬ್ಬ ಹಿರಿಯ ರಾಜಕಾರಣಿ, ತಮ್ಮ ಸಮರ್ಥನೆ ಮಾಡಿಕೊಳ್ಳುವುದು ಅವರಿಗೆ ಗೊತ್ತಿದೆ, ಅವರು ನಮ್ಮೆಲ್ಲರಿಗೆ ಈಗ ಸ್ನೇಹಿತ, ಅವರು ಹೊಸ ಪಕ್ಷ ಕಟ್ಟುವ ಬಗ್ಗೆ ಮತಾಡಿಲ್ಲ, ವಿಜಯದಶಮಿವರೆಗೆ ರಾಜ್ಯದೆಲ್ಲೆಡೆ ಸುತ್ತಿ ಜನಾಭಿಪ್ರಾಯ ಸಂಗ್ರಹಿಸುವ ಮಾತಾಡಿದ್ದಾರೆ, ಅವರೇನಾದರೂ ಹೊಸ ಪಕ್ಷ ಕಟ್ಟಿದರೆ ತಾವ್ಯಾರೂ ಅವರ ಜೊತೆ ಹೋಗಲ್ಲ ಎಂದು ಕುಮಾರ ಬಂಗಾರಪ್ಪ ಹೇಳಿದರು.
ಬೆಂಗಳೂರು, ಏಪ್ರಿಲ್ 4: ಪ್ರಮುಖ ಭಿನ್ನಮತೀಯ ಮತ್ತು ರೆಬೆಲ್ ಶಾಸಕನೆಂದು ಗುರುತಿಸಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ಪಕ್ಷದಿಂದ ಉಚ್ಚಾಟಿಸಿದರೂ ಅವರ ಜೊತೆಗಿದ್ದ ಭಿನ್ನಮತೀಯರು ಪ್ರತ್ಯೇಕವಾಗಿ ಸಭೆ ನಡೆಸುವುದನ್ನು ಮುಂದುವರಿಸಿದ್ದಾರೆ, ತಮ್ಮ ಮನೆಯಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಕುಮಾರ ಬಂಗಾರಪ್ಪ, ವಕ್ಫ್ ಹೋರಾಟದಲ್ಲಿ ಯತ್ನಾಳ್ ಪ್ರಮುಖ ಪಾತ್ರ ವಹಿಸಿದ್ದು ನಿಜ, ಆದರೆ ಅವರನ್ನು ಈಗ ಪಕ್ಷದಿಂದ ವರಿಷ್ಠರು ಉಚ್ಚಾಟಿಸಿದ್ದಾರೆ, ವರಿಷ್ಠರ ನಿರ್ಣಯಕ್ಕೆ ತಾವು ಬದ್ಧರಾಗಿರುತ್ತೇವೆ ಮತ್ತು ಅವರ ನಿರ್ಣಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಕುಮಾರ ಬಂಗಾರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ, ರಾಜ್ಯಾಧ್ಯಕ್ಷನ ಬದಲಾವಣೆ ಇಲ್ಲ: ರೇಣುಕಾಚಾರ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ