ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಸರಿಸಿ ಬೇರೆಯವರ ನೇಮಕಾತಿ ನಿಶ್ಚಿತ ಎಂದ ಕುಮಾರ ಬಂಗಾರಪ್ಪ
ತಮ್ಮ ತಂಡ ಪದೇಪದೆ ದೆಹಲಿಗೆ ತೆರಳಿ ವರಿಷ್ಠರಿಗೆ ತೊಂದರೆ ನೀಡುತ್ತಿಲ್ಲ, ರಾಜ್ಯ ಬಿಜೆಪಿ ಘಟಕದಲ್ಲಿರುವ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲ ನಾವು ಹೋಗಿದ್ದು, ಸಮಸ್ಯಗಳ ಮನವರಿಕೆ ಅವರಿಗೆ ಆಗಿದೆ ಎಂದು ಹೇಳಿದ ಕುಮಾರ್ ಬಂಗಾರಪ್ಪ, ರಾಜ್ಯಾಧ್ಯಕ್ಷರ ಬದಲಾವಣೆ ನಿಶ್ಚಿತ, ತಮ್ಮ ತಂಡ ನಡೆಸುತ್ತಿರುವ ಹೋರಾಟದ ಪ್ರಮುಖ ಅಂಶಗಳಲ್ಲಿ ಅದೂ ಒಂದಾಗಿದೆ ಎಂದರು.
ಬೆಂಗಳೂರು: ಗುರುವಾರ ತಮ್ಮ ಮನೆಯಲ್ಲಿ ಭಿನ್ನರ ಮೀಟಿಂಗ್ ನಡೆದಿರುವುದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಶಾಸಕ ಕುಮಾರ ಬಂಗಾರಪ್ಪ ಹಲವಾರು ವಿಷಯಗಳನ್ನು ಹೇಳಿದರು. ರಮೇಶ್ ಜಾರಕಿಹೊಳಿಯನ್ನು ವಿಜಯೇಂದ್ರ ಬಣದಿಂದ ಸೆಳೆಯುವ ಪ್ರಯತ್ನ ನಡೆದಿದೆ ಅನ್ನೋದು ಸುಳ್ಳು, ಯಡಿಯೂರಪ್ಪ ತನ್ನೊಂದಿಗೆ ಮಾತಾಡಿದ್ದಾರೆನ್ನುವುದು ಸುಳ್ಳು ಮತ್ತು ನಿನ್ನೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮಗೆ ನೀಡಿದ ನೋಟೀಸನ್ನು ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಿಸಿದರು ಅಂತ ವರದಿಯಾಗಿದ್ದು ಸಹ ಸುಳ್ಳು, ಅಸಲಿಗೆ ಅವರು ತಮ್ಮ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ದೇವಸ್ಥಾನಕ್ಕೆ ಒಯ್ದು ಪೂಜೆ ಮಾಡಿಸಿದರು, ಎಲ್ಲರೂ ಹೋದರೆ ಕತೆ ಕಟ್ಟುತ್ತಾರೆ ಅಂತ ಅವರೊಬ್ಬರೇ ಹೋಗಿದ್ದು, ಪರಿಸರ ಮಂಡಳಿಗೆ ಅಧ್ಯಕ್ಷರಾಗಿ ಬಂದಿರುವ ಪಿಎಒ ನರೇಂದ್ರ ಸ್ವಾಮಿಯವರಿಂದ ಯತ್ನಾಳ್ ಅವರಿಗೆ ನೆರವಾಗಿದೆ ಎಂದು ಕುಮಾರ್ ಬಂಗಾರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರ ಬಂಗಾರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ, ರಾಜ್ಯಾಧ್ಯಕ್ಷನ ಬದಲಾವಣೆ ಇಲ್ಲ: ರೇಣುಕಾಚಾರ್ಯ