ಕಂಡಕ್ಟರ್ ಮೇಲೆ ಹಲ್ಲೆ, ನಾಲ್ವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ: ಮಾರ್ಟಿನ್ ಮಾಬನಿಯಾಂಗ್
ಭಾಷೆಗೆ ಸಂಬಂಧಿಸಿದಂತೆ ಹಲ್ಲೆ ನಡೆದಿರುವುದು ನಿಜ, ಆರೋಪಿಯು ತನಗೆ ಕನ್ನಡ ಬರಲ್ಲ ಬೇರೆ ಭಾಷೆಯಲ್ಲಿ ಮಾತಾಡಿ ಅಂತ ಹೇಳಿದ ಅಂತ ದೂರುದಾರ ಹೇಳಿದ್ದಾರೆ. ಕಣ್ಮರೆಯಾಗಿರುವ ಆರೋಪಿಗಳ ಪತ್ತೆಗಾಗಿ ಇನ್ಸ್ಪೆಕ್ಟರ್ ಗಳ ನೇತೃತತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಕಮೀಶನರ್ ಹೇಳಿದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದು ಅಭಿನಂದನೀಯ.
ಬೆಳಗಾವಿ: ನಿನ್ನೆ ಜಿಲ್ಲೆಯ ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸ್ ಕಮೀಶನರ್ ಯಡಾ ಮಾರ್ಟಿನ್ ಮಾಬನಿಯಾಂಗ್ ಸುದ್ದಿಗೋಷ್ಠಿಯೊಂದನ್ನು ನಡೆಸಿ ವಿವರಗಳನ್ನು ನೀಡಿದರು. ಬಸ್ ಪಾಸ್ ವಿಷಯದಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದೆ, ಅರೋಪಿಯ ಸಹೋದರ ಮತ್ತು ಅವನ ಸಂಗಡಿಗರು ಬಸ್ಸು ಬಾಳೆಕುಂದ್ರಿ ತಲುಪಿದ ಬಳಿಕ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ, ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಪರಾರಿಯಾಗಿರುವ ಉಳಿದ ಅರೋಪಿಗಳಿಗಾಗಿ ಶೋಧಕಾರ್ಯ ನಡೆದಿದೆ ಎಂದು ಮಾರ್ಟಿನ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮರಾಠಿ ಯುವಕರಿಂದ ಗೂಂಡಾಗಿರಿ: ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ