ಹನುಮಂತನ ಗುಣಗಾನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Hanumanthu: ಬಿಗ್ಬಾಸ್ ವಿಜೇತ ಹನುಮಂತು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವದ ಎರಡನೇ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹನುಮಂತನ ಸಾಧನೆಯನ್ನು ಕೊಂಡಾಡಿದರು.
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವದ ಎರಡನೇ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಿಗ್ಬಾಸ್ ವಿಜೇತ, ಗಾಯಕ ಹನುಮಂತು ಭಾಗಿಯಾಗಿದ್ದರು. ಹನುಮಂತು ವೇದಿಕೆಗೆ ಬರುತ್ತಿದ್ದಂತೆ ಭಾರಿ ಕರತಾಡನ ಪ್ರೇಕ್ಷಕರಿಂದ ವ್ಯಕ್ತವಾಯ್ತು. ಹನುಮಂತು, ವಿವಿಧ ಜನಪದ, ಸಿನಿಮಾ ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹನುಮಂತನ ಸಾಧನೆಯನ್ನು ಕೊಂಡಾಡಿದರು. ಕುರಿ ಕಾಯುವ ಯುವಕನಾಗಿದ್ದು, ಪರಿಶ್ರಮದಿಂದ ತಮ್ಮ ಸಮುದಾಯವನ್ನು, ಕುಟುಂಬವನ್ನು ಮೇಲಕ್ಕೆ ತಂದಿದ್ದಾನೆ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ