Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಪಾಕಿಸ್ತಾನ ನಡುವೆ ಸೂಪರ್ ಸಂಡೇಯ ರೋಚಕ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ರೆಡಿಯಾಗಿದ್ದೀರಾ?

ಭಾರತ-ಪಾಕಿಸ್ತಾನ ನಡುವೆ ಸೂಪರ್ ಸಂಡೇಯ ರೋಚಕ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ರೆಡಿಯಾಗಿದ್ದೀರಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 22, 2025 | 12:22 PM

ಬಾಂಗ್ಲಾ ವಿರುದ್ಧ ಆಡಿದ ಪಂದ್ಯದಲ್ಲಿ ಶುಭ್ಮನ್ ಗಿಲ್ ಜಬಾಬ್ದಾರಿಯುತ ಶತಕ ಬಾರಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಕೆಎಲ್ ರಾಹುಲ್ ಮತ್ತು ನಾಯಕ ರೋಹಿತ್ ಶರ್ಮರಿಂದ ಉತ್ತಮ ಕಾಂಟ್ರಿಬ್ಯೂಷನ್ ಗಳು ಬಂದವು. ಆದರೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಸ್ಪರ್ಶ ಚಿಂತೆಗೆ ಕಾರಣವಾಗಿದೆ. ಓಡಿಐಗಳಲ್ಲಿ ಇವತ್ತಿಗೂ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಅನ್ನೋದು ನಿರ್ವಿವಾದಿತ. ಪಾಕಿಸ್ತಾನದ ವಿರುದ್ಧ ಆವರು ತಮ್ಮ ಎಂದಿನ ಆಟವಾಡಲಿ ಅಂತ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ.

ಬೆಂಗಳೂರು: ನಾಳೆಯ ಸಂಡೇ ನಿಸ್ಸಂದೇಹವಾಗಿ ಸೂಪರ್ ಸಂಡೇ. ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ತನ್ನ ಎರಡನೇ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ಆಡಲಿದೆ. ಎರಡು ದೇಶಗಳ ನಡುವೆ ನಡೆಯುವ ಸೆಣಸಾಟ ಕ್ರಿಕೆಟ್ ಇತಿಹಾಸದ ರೋಚಕ ಅಧ್ಯಾಯಗಳಲ್ಲಿ ಒಂದು. ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಗೂ ಏಷ್ಯಾದ ದಿಗ್ಗಜ ತಂಡಗಳ ನಡುವಿನ ಹೋರಾಟದಷ್ಟು ಕದನ ಕುತೂಹಲ, ಜನಪ್ರಿಯತೆ ಇಲ್ಲ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಸೋಲಿಸಿ ಶುಭಾರಂಭ ಮಾಡಿದ್ದರೆ ಪಾಕಿಸ್ತಾನಕ್ಕೆ ಪ್ರಥಮ ಚುಂಬನಂ ದಂತಭಗ್ನಂ ಆಗಿದೆ, ನ್ಯೂಜಿಲೆಂಡ್ ವಿರುದ್ಧ ಅದು ಸೋತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಟೀಮ್ ಇಂಡಿಯಾ ಕೈಯಲ್ಲಿ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿ ಭವಿಷ್ಯ