“ಬ್ಯಾನ್ ರಮ್ಮಿ ಮತ್ತು ಡ್ರೀಮ್ 11 ಇನ್ ಇಂಡಿಯಾ” ಇಳಕಲ್ ಸೀರೆ ಮೇಲೆ ನೇಯ್ದು ಮೋದಿಗೆ ಮನವಿ
ಬಾಗಲಕೋಟೆಯ ಇಳಕಲ್‌ನ ಮೇಘರಾಜ್ ಗುದ್ದಟ್ಟಿ ಅವರು "ಬ್ಯಾನ್ ರಮ್ಮಿ ಮತ್ತು ಡ್ರೀಮ್ 11" ಎಂದು ನೇಯ್ದ ಇಳಕಲ್ ಸೀರೆಯ ಮೇಲೆ ನೇಯ್ದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಆನ್‌ಲೈನ್ ಜೂಜಿನಿಂದಾಗಿ ಅನೇಕ ಕುಟುಂಬಗಳು ಮತ್ತು ಯುವಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸೀರೆಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸುವ ಯೋಜನೆಯಲ್ಲಿದ್ದಾರೆ.
ಬಾಗಲಕೋಟೆ, ಫೆಬ್ರವರಿ 22: “ಬ್ಯಾನ್ ರಮ್ಮಿ ಮತ್ತು ಡ್ರೀಮ್ 11” ಅಂತ ಇಂಗ್ಲೀಷ್ನಲ್ಲಿ ಇಳಕಲ್ ಸೀರೆ ಮೇಲೆ ನೇಯುವ ಮೂಲಕ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಮೇಘರಾಜ್ ಗುದ್ದಟ್ಟಿ ಅವರು ಪ್ರಧಾನಿ ಮೋದಿಯವರಿಗೆ ವಿನೂತನವಾಗಿ ಮನವಿ ಮಾಡಿದ್ದಾರೆ. ಆನ್ ಲೈನ್ ಜೂಜಾಟದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಈ ಜೂಜಾಟ ಬ್ಯಾನ್ ಮಾಡಬೇಕೆಂದು ಈ ರೀತಿಯಾಗಿ ಮನವಿ ಮಾಡಿಕೊಂಡಿದ್ದೇನೆ ಎಂದು ಮೇಘರಾಜ್ ಹೇಳಿದ್ದಾರೆ. ಈ ಸೀರೆಯನ್ನು ಮೇಘರಾಜ್ ಅವರು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸುವ ಯೋಚನೆಯಲ್ಲಿದ್ದಾರೆ.
ಮೇಘರಾಜ್ ಈ ಹಿಂದೆ ಇಳಕಲ್ ಸೀರೆಯಲ್ಲಿ ಆಯೋದ್ಯ ಶ್ರೀರಾಮ ಮಂದಿರ ನೇಯ್ದಿದ್ದರು. ಸೂರ್ಯಯಾನ-3 ಯಶಸ್ವಿಯಾದಾಗ ವಿಜ್ಞಾನಿಗಳಿಗೆ ಶುಭಾಶಯ ಎಂದು ಸೀರೆಯಲ್ಲಿ ನೇಯ್ದಿದ್ದರು. ಅಲ್ಲದೇ, ಪುನೀತ್ ರಾಜಕುಮಾರ್ಅವರ ಕೊನೆಯ ಚಿತ್ರ ಜೇಮ್ಸ್ ಶತದಿನ ಆಚರಿಸಲಿ ಎಂದು ಸೀರೆಯಲ್ಲಿ ನೇಯ್ದು ಶುಭಹಾರೈಸಿದ್ದರು. ಹಾಗೇ ಕಾಂತಾರ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಗಲಿ ಎಂದು ಸೀರೆಯಲ್ಲಿ ನೇಯ್ದಿದ್ದರು.