ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ಪಾದಯಾತ್ರೆ ಮಾಡುತ್ತಿದ್ದೇನೆ: ಬಿ ಶ್ರೀರಾಮುಲು
ಪಕ್ಷದ ಸಂಘಟನೆ ಬಲಪಡಿಸಬೇಕು, ರಾಜ್ಯದಲ್ಲಿ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪದೊಂದಿಗೆ ಪಾದಯಾತ್ರೆ ನಡೆಸುತ್ತಿರುವುದಾಗಿ ಮಾಜಿ ಸಚಿವ ಶ್ರೀರಾಮುಲು ಹೇಳಿದರು. ಸಂಘಟನಾತ್ಮಕವಾಗಿ ಪಕ್ಷವನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ ಎನ್ನುವ ಅವರು ಸಹ ಬಿಜೆಪಿ ರಾಜ್ಯಧ್ಯಕ್ಷ ಬದಲಾಗಬೇಕು ಎನ್ನುತ್ತಾರೆ ಮತ್ತು ತಾನೂ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಾರೆ.
ಬಳ್ಳಾರಿ: ಬಿಜೆಪಿ ನಾಯಕ ಬಿ ಶ್ರೀರಾಮುಲು ತಮ್ಮ ಹಿಂದಿನ ಆಪ್ತಮಿತ್ರ ಗಾಲಿ ಜನಾರ್ಧನ ರೆಡ್ಡಿಯವರೊಂದಿಗಿನ ಜಟಾಪಟಿಯ ನಂತರ ಸದಾ ಸುದ್ದಿಯಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಿಂದ ಕೊಟ್ಟೂರುವರೆಗೆ ರಥೋತ್ಸವದ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡುತ್ತಿರುವ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರೀಯ ಶಿಸ್ತು ಸಮಿತಿ ನೀಡಿದ ಶೋಕಾಸ್ ನೋಟೀಸ್ಗೆ ಉತ್ತರ ನೀಡಿದ್ದಾರೆ, ಅವರೇನು ಉತ್ತರ ನೀಡಿದ್ದಾರೆ ಅನ್ನೋದು ಪಕ್ಷದ ಆಂತರಿಕ ವಿಷಯ, ಪಕ್ಷದ ಆಂತರಿಕ ಸಮಸ್ಯೆಗಳನ್ನು ವರಿಷ್ಠರು ಮತ್ತು ರಾಜ್ಯದ ನಾಯಕರು ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ರಾಜ್ಯಾದ್ಯಂತ ಯಾತ್ರೆ ಮಾಡುವೆ: ಮಾಜಿ ಸಚಿವ ಶ್ರೀರಾಮುಲು