ಎದುರಾಳಿಗಳನ್ನು ಹೀಯಾಳಿಸಲು ರಾಜಕೀಯ ಮುಖಂಡರಿಂದ ಸಾಮಾಜಿಕ ಜಾಲತಾಣಗಳ ದುರುಪಯೋಗ: ಕೆ ರಾಮರಾಜನ್, ಎಸ್ಪಿ
ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಎದುರಾಳಿಗಳನ್ನು ಮನಬಂದಂತೆ ಹೀಯಾಳಿಸುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿ ರಾಮರಾಜನ್ ಕಳವಳ ವ್ಯಕ್ತಪಡಿಸಿದರು. ಎಲ್ಲ ಮೂರು ಪಕ್ಷಗಳ ಮುಖಂಡರು ಇಂಥ ಚಟುವಟಿಕೆಗಳಲ್ಲಿ ತೊಡಗಿದ್ದಾರೆ, ಇದಕ್ಕೆ ಕಡಿವಾಣ ಹಾಕುವ ಅವಶ್ಯಕತೆಯಿದೆ, ಅದಕ್ಕಾಗಿ ಒಂದು ಹೊಸ ಕಾನೂನನ್ನೇ ರೂಪಿಸಬೇಕಾಗಬಹುದು ಎಂದರು.
ಮಡಿಕೇರಿ, ಏಪ್ರಿಲ್ 4: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನ್ನೀರಾ ಮಹೀನ್ ಮತ್ತು ಇಬ್ಬರು ಶಾಸಕರಕ ವಿರುದ್ಧ ನಗರದ ಜನರಲ್ ತಿಮ್ಮಯ್ಯ ಸರ್ಕಲ್ ನಲ್ಲಿ (Timmaiah Circle ) ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಧರಣಿ ವಾಪಸ್ಸು ಪಡೆಯುವಂತೆ ಮನವೊಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೊಡಗಿನ ಎಸ್ಪಿ ಕೆ ರಾಮರಾಜನ್, ತಪ್ಪಿತಸ್ಥರ ವಿರುದ್ಧ ಪೊಲೀಸ್ ಕ್ರಮ ಜರುಗಿಸಲಿದೆ, ಅದರೆ ವಿನಯ್ ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅಲ್ಲಿನ ಪೊಲೀಸರು ತನಿಖೆ ಮಾಡುತ್ತಾರೆ, ಅವರು ಇಲ್ಲಿಗೆ ಬಂದಾಗ ಮಡಿಕೇರಿ ಪೊಲೀಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಸಿಎಂ ಕಾನೂನು ಸಲಹೆಗಾರರ ವಿರುದ್ಧ ಗಂಭೀರ ಆರೋಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ