Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಸಿಎಂ ಕಾನೂನು ಸಲಹೆಗಾರರ ವಿರುದ್ಧ ಗಂಭೀರ ಆರೋಪ

ಬೆಂಗಳೂರಿನ ನಾಗವಾರದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ರಾಜಕೀಯ ಪ್ರೇರಿತ ಎಫ್ಐಆರ್​ನಿಂದ ಮನನೊಂದಿದ್ದಾಗಿ ತಿಳಿಸಿದ್ದಾರೆ. ಕಾರ್ಯಕರ್ತ ವಿರುದ್ಧ ಕಾಂಗ್ರೆಸ್ ಶಾಸಕರೊಬ್ಬರ ಬಗ್ಗೆ ಅಪಹಾಸ್ಯ ಪೋಸ್ಟ್ ಮಾಡಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿತ್ತು. ಸದ್ಯ ಘಟನಾ ಸ್ಥಳಕ್ಕೆ ಹೆಣ್ಣೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಸಿಎಂ ಕಾನೂನು ಸಲಹೆಗಾರರ ವಿರುದ್ಧ ಗಂಭೀರ ಆರೋಪ
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ
Follow us
ಗಂಗಾಧರ​ ಬ. ಸಾಬೋಜಿ
| Updated By: ರಮೇಶ್ ಬಿ. ಜವಳಗೇರಾ

Updated on:Apr 04, 2025 | 2:28 PM

ಬೆಂಗಳೂರು, ಏಪ್ರಿಲ್​ 04: ಎಫ್​​ಐಆರ್​ ದಾಖಲಿಸಿದ್ದಕ್ಕೆ ಮನನೊಂದು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ನಾಗವಾರದ ಕಚೇರಿಯಲ್ಲಿ ನಡೆದಿದೆ. ವಿನಯ್ ಸೋಮಯ್ಯ(35) ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್​ನೋಟ್ ಪೋಸ್ಟ್ ಮಾಡಿದ್ದ ವಿನಯ್, ರಾಜಕೀಯ ಪ್ರೇರಿತ FIRನಿಂದ ಮನನೊಂದಿದ್ದೇನೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು. ಸದ್ಯ ವಿನಯ್ ಸೋಮಯ್ಯ ಆತ್ಮಹತ್ಯೆ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ಮೃತ ವಿನಯ್​ ವಾಟ್ಸ್​ಆ್ಯಪ್​ ಗ್ರೂಪ್​​ ಒಂದರ ಅಡ್ಮಿನ್ ಆಗಿದ್ದರು. ಆ ಗ್ರೂಪ್​ನಲ್ಲಿ ಇತ್ತೀಚೆಗೆ ಕಾಂಗ್ರೆಸ್​ ಶಾಸಕರೊಬ್ಬರ ಬಗ್ಗೆ ಅಪಹಾಸ್ಯ ಪೋಸ್ಟ್ ಮಾಡಿರುವ ಆರೋಪ ಕೇಳಿಬಂದಿತ್ತು. ಹಾಗಾಗಿ ಕಾಂಗ್ರೆಸ್ ಮುಖಂಡ ಓರ್ವ ನೀಡಿದ ದೂರು ಆಧರಿಸಿ ವಿನಯ್ ವಿರುದ್ಧ ಮಡಿಕೇರಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಬಳಿಕ ವಿನಯ್ ನಿರೀಕ್ಷಣಾ ಜಾಮೀನು ಕೂಡ ಪಡೆದಿದ್ದರು. ಬಳಿಕ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಿನ್ನೆ ರಾತ್ರಿ ಪೋಸ್ಟ್ ಮಾಡಿದ್ದರು.

ಡೆತ್​​ನೋಟ್​ನಲ್ಲಿ ಏನಿದೆ?

ನನ್ನ ಆತ್ಮಹತ್ಯೆಗೆ ವಿರಾಜಪೇಟೆ ಶಾಸಕ ಪೊನ್ನಣ್ಣ ಆಪ್ತ ತೆನ್ನೀರಾ ಮಹೀನಾ ಕಾರಣ ಎಂದು ವಿನಯ್​ ಡೆತ್​​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ್ದಾರೆ. ನನ್ನ ಮೇಲೆ ಎಫ್​ಐಆರ್ ದಾಖಲಿಸಿ ಕಿಡಿಗೇಡಿ ಎಂದು ಕೊಡಗು ಜಿಲ್ಲೆಯಲ್ಲಿ ನನ್ನ ಬಗ್ಗೆ ತೆನ್ನೀರಾ ಅಪಪ್ರಚಾರ ಮಾಡಿದ್ದಾನೆ. ತೆನ್ನೀರಾ ಈ ಹಿಂದೆಯೂ ಹಲವರ ಆತ್ಮಹತ್ಯೆಗೆ ಕಾರಣವಾಗಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ
Image
ಸಾಕಾ, ಬೇಕಾ... ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ, ಚಹಾ ದರ ಹೆಚ್ಚಳ
Image
ಕಲ್ಯಾಣ ಕರ್ನಾಟಕ ರೈತರ 7 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ
Image
ಹಾಲಿನ ಬೆಲೇಲಿ ರೈತರಿಗೆ ಸಿಗೋದೆಷ್ಟು, ಸರ್ಕಾರದ ಪಾಲೆಷ್ಟು? ಇಲ್ಲಿದೆ ವಿವರ
Image
ಜೇಬಿಗೆ ಬೀಳಲಿದೆ ಕತ್ತರಿ: ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆ ಸಾಧ್ಯತೆ

ಇದನ್ನೂ ಓದಿ: Anwar Manippady: ಅನ್ವರ್ ಮಾಣಿಪ್ಪಾಡಿಗೆ ವಿದೇಶಿ ವ್ಯಕ್ತಿಗಳಿಂದ ಬೆದರಿಕೆ ಕರೆ, ವಕ್ಫ್ ಮಸೂದೆಗೆ ಅನುಮೋದನೆ ಬೆನ್ನಲ್ಲೇ ಕೃತ್ಯ

ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ದಾಖಿಲಿಸಿದರು. ಜಾಮೀನು ಸಿಕ್ಕಿದ್ದರು ನನ್ನ ಸ್ನೇಹಿತನ ಮನೆಗೆ ಹೋಗಿ ಪೊಲೀಸರು ವಿಚಾರಿಸಿದ್ದಾರೆ. ವಿರಾಜಪೇಟೆ ಶಾಸಕ ಪೊನ್ನಣ್ಣ ಆದೇಶದಂತೆ ಇದೆಲ್ಲಾ ಮಾಡಿದ್ದಾರೆ. ಯಾರೋ ಹಾಕಿದ ಫೋಟೋಗೆ ನಮ್ಮ ಮೇಲೆ ಎಫ್​ಐಆರ್​ ಮಾಡಿದ್ದಾರೆ. ನಮ್ಮ ಮೇಲೆ ರೌಡಿಶೀಟ್​​​ ಓಪನ್ ಮಾಡುವ ಹುನ್ನಾರ ನಡೆದಿದೆ. ಇವರಿಗೆ ಸರಿಯಾದ ಶಿಕ್ಷೆಯಾದರೆ ನನ್ನ ಸಾವಿಗೆ ನ್ಯಾಯ ಸಿಗುತ್ತೆ ಎಂದು ವಿನಯ್​ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯವಲ್ಲ: ಜಿ.ಪರಮೇಶ್ವರ್

ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಡಿಸಿಪಿ ತನಿಖೆ ಮಾಡುತ್ತಾರೆ. ವರದಿಯಲ್ಲಿ ಏನು ಬರುತ್ತೋ ಅದರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯ ಇರುವುದಿಲ್ಲ. ಪರಿಶೀಲನೆ ನಡೆಸಿ ಸತ್ಯಾಂಶ ಇದ್ದರೇ ಕ್ರಮ ತೆಗೆದುಕೊಳ್ಳುತ್ತೇವೆ. ಅಂಥದ್ದೇನಾದರೂ ಯಾರದ್ದಾದ್ರು ಪ್ರಭಾವ ಇದ್ದರೆ ಪರಿಶೀಲಿಸುತ್ತೇವೆ. ಎಫ್​ಐಆರ್​ ಆದ ತಕ್ಷಣ ಪೊಲಿಸರು ತನಿಖೆ ಆರಂಭಿಸುತ್ತಾರೆ. ತನಿಖೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ತಾರೆ ಎಂದು ತಿಳಿಸಿದ್ದಾರೆ.

ವಿನಯ್​ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ: ತೆನ್ನೀರ ಮಹಿನಾ

ಮಡಿಕೇರಿಯಲ್ಲಿ ಟಿವಿ9ಗೆ ಕಾಂಗ್ರೆಸ್ ವಕ್ತಾರ ತೆನ್ನೀರ ಮಹಿನಾ ಹೇಳಿಕೆ ನೀಡಿದ್ದು, ವಿನಯ್​ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ. ವಿನಯ್ ಯಾರೆಂಬುದು ನನಗೆ ಗೊತ್ತಿಲ್ಲ. ಇದುವರೆಗೂ ನಾನು ಭೇಟಿ ಆಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bangalore Karaga: ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಶುರು, ಯಾವಾಗ ಏನೇನು ಕಾರ್ಯಕ್ರಮ? ಇಲ್ಲಿದೆ ವಿವರ

ಶಾಸಕ ಪೊನ್ನಣ್ಣ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದರ ವಿರುದ್ಧ ನಾನು ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಹೈಕೋರ್ಟ್​ನಿಂದ ಬಿಜೆಪಿಯವರು ತಡೆಯಾಜ್ಞೆಯನ್ನು ತಂದಿದ್ದರು. ಅಲ್ಲಿಗೆ ಆ ಪ್ರಕರಣವನ್ನು ನಾವು ಬಿಟ್ಟುಬಿಟ್ಟಿದ್ದೆವು. ಆತ್ಮಹತ್ಯೆಗೆ ಬಿಜೆಪಿಯವರೇ ಏನೋ ಕುಮ್ಮಕ್ಕು ನೀಡಿರಬೇಕು. ವಿನಯ್​ ಸೋಮಯ್ಯ ಆತ್ಮಹತ್ಯೆ ಕೇಸ್​ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.

ವಿನಯ್ ಆತ್ಮಹತ್ಯೆ ಹಿಂದೆ ನನ್ನ ಆಪ್ತ ತೆನ್ನೀರಾ ಕೈವಾಡ ಇಲ್ಲ: ಶಾಸಕ ಎ.ಎಸ್.ಪೊನ್ನಣ್ಣ

ಬೆಂಗಳೂರಿನಲ್ಲಿ ಟಿವಿ9ಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿಕೆ ನೀಡಿದ್ದು, ಆತ್ಮಹತ್ಯೆಗೆ ಶರಣಾದ ವಿನಯ್​ ಯಾರೆಂದು ನನಗೆ ಗೊತ್ತಿಲ್ಲ. ವಿನಯ್ ಆತ್ಮಹತ್ಯೆ ಹಿಂದೆ ನನ್ನ ಆಪ್ತ ತೆನ್ನೀರಾ ಕೈವಾಡ ಇಲ್ಲ. ತೆನ್ನೀರಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ತೆನ್ನೀರಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇರ್ತಾರೆ. ನನ್ನ ವಿರುದ್ಧ ಹೇಳಿಸಿ ಯಾರೋ ಆರೋಪ ಮಾಡಿಸಿರಬಹುದು. ವಿನಯ್​ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಆತ್ಮಹತ್ಯೆ ನನಗೆ ಬೇಸರ ತಂದಿದೆ ಎಂದಿದ್ದಾರೆ.

ಮಾಜಿ ಸಂಸದ ಪ್ರತಾಪ್​ ಸಿಂಹ ಪೋಸ್ಟ್

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಗ್ರೂಪ್​ನಲ್ಲಿ ಮಾಡಿದ್ದ ಕಡೆಯ ಮೆಸೇಜ್​ಯನ್ನು ಮಾಜಿ ಸಂಸದ ಪ್ರತಾಪ್​ ಸಿಂಹ ತಮ್ಮ ಸೊಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟೆ

ಕರ್ನಾಟಕದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:52 pm, Fri, 4 April 25

ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ