AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ: ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆ ಸಾಧ್ಯತೆ

ಹಾಲಿನ ಬೆಲೆ ಏರಿಕೆ ನಂತರ ಕರ್ನಾಟಕದಲ್ಲಿ ಅನೇಕ ಹೋಟೆಲ್​ಗಳು ಕಾಫಿ ಹಾಗೂ ಚಹಾ ದರ ಏರಿಕೆ ಮಾಡಿವೆ. ಇದೀಗ ಕಾಫಿ ಪುಡಿಯ ದರಗಳು ಕೂಡ ಹೆಚ್ಚಾಗುತ್ತಿದ್ದು, ಪರಿಣಾಮವಾಗಿ ಒಂದು ಕಪ್ಪು ಕಾಫಿ ಬೆಲೆ ಐದು ರೂಪಾಯಿ ಎಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಾಫಿ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ: ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Feb 14, 2025 | 11:27 AM

Share

ಬೆಂಗಳೂರು, ಫೆಬ್ರವರಿ 14: ನೀವು ಕಾಫಿ ಪ್ರಿಯರೇ? ಹಾಗಾದಾರೆ ಈ ತಿಂಗಳ ಅಂತ್ಯದ ವೇಳೆಗೆ ನಿನ್ನ ಜೇಬಿಗೆ ಅದು ಮತ್ತಷ್ಟು ಹೊರೆಯಾಗುವ ಎಲ್ಲ ಸಾಧ್ಯತೆಗಳಿವೆ. ಒಂದು ಕಪ್ ಕಾಫಿಯ ಬೆಲೆ 5 ರೂ.ಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾಫಿ ಪುಡಿಯ ದರ ಹೆಚ್ಚಳವಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ವರದಿಯಾಗಿದೆ.

ರೋಸ್ಟರ್‌ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿಯ ಬೆಲೆ ಫೆಬ್ರವರಿ ಅಂತ್ಯದ ವೇಳೆಗೆ ಪ್ರತಿ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುತ್ತದೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ ಮತ್ತೆ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುತ್ತದೆ. ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳ ಸದಸ್ಯರು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಎರಡನೇ ಬೆಲೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಕಾಫಿ ಮಂಡಳಿಯ ಮೂಲಗಳು ತಿಳಿಸಿವೆ.

ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆ ಸಾಧ್ಯತೆ

ಪ್ರತಿ ಕೆಜಿ ಕಾಫಿ ಪುಡಿಯ ಬೆಲೆ 800-850 ರೂ.ಗಳಿಂದ 1,000-1,100 ರೂ.ಗಳಿಗೆ ಏರಿಕೆಯಾದಾಗ, ಕಾಫಿ ಮಾರಾಟಗಾರರಿಗೆ ಒಂದು ಕಪ್ ಕಾಫಿಯ ಬೆಲೆಯನ್ನು ಸುಮಾರು 5 ರೂ.ಗಳಷ್ಟು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಚಿಕೋರಿ ಮಿಶ್ರಣವು ಗುಣಮಟ್ಟ ಮತ್ತು ಸುವಾಸನೆಯ ಮೇಲೆ ಪರಿಣಾಮ ಬೀರುವುದರಿಂದ ನಾವು ಅದರ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಅಸೋಸಿಯೇಷನ್ ​​ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಯಾವ ಕಾಫಿಗೆ ಎಷ್ಟಿದೆ ದರ?

ಕಾಫಿ ಬೆಲೆ ನಿರಂತರವಾಗಿ ಹೆಚ್ಚುತ್ತಿವೆ. 2024 ರ ಜನವರಿಯಿಂದ ರೋಬಸ್ಟಾ ಬೆಲೆಗಳು ಕೆಜಿಗೆ 200 ರೂ.ಗಳಿಂದ 520 ರೂ.ಗಳಿಗೆ ಏರಿಕೆಯಾಗಿದೆ. ಅಲ್ಲದೆ, 2024 ರ ಜನವರಿ ಮತ್ತು 2025 ರ ಫೆಬ್ರವರಿ ನಡುವೆ ಅರೇಬಿಕಾ ಕಾಫಿ ಬೆಲೆ ಕೆಜಿಗೆ 290 ರೂ.ಗಳಿಂದ 750 ರೂ.ಗಳಿಗೆ ಏರಿಕೆಯಾಗಿದೆ.

ಚಿಕೋರಿ ಮಿಶ್ರಣ ಹೆಚ್ಚಳ ಅಸಾಧ್ಯ

ಕರ್ನಾಟಕದಲ್ಲಿ ಸುಮಾರು 500 ರೋಸ್ಟರ್‌ಗಳಿವೆ. ಅವುಗಳಲ್ಲಿ ಸುಮಾರು 300 ಬೆಂಗಳೂರಿನಲ್ಲಿವೆ. ಕಾಫಿಯೊಂದಿಗೆ ಶೇ 49 ರಷ್ಟು ಚಿಕೋರಿಯನ್ನು ಮಿಶ್ರಣ ಮಾಡಲು ಅವಕಾಶವಿದೆ. ಆದರೆ ರೋಸ್ಟರ್‌ಗಳು ಬೇಡಿಕೆಯನ್ನು ಅವಲಂಬಿಸಿ ಶೇ 15-20 ಕ್ಕಿಂತ ಹೆಚ್ಚು ಮಿಶ್ರಣ ಮಾಡುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Black Tea Vs Black Coffee : ಬ್ಲಾಕ್ ಟೀಗಿಂತ ಬ್ಲಾಕ್ ಕಾಫಿ ಆರೋಗ್ಯಕ್ಕೆ ಉತ್ತಮ ಏಕೆ? ಇದೆ ಕಾರಣಗಳಂತೆ

2001 ರಿಂದಲೂ ನಿರಂತರವಾಗಿ ಕಾಫಿ ಬೆಲೆ ಹೆಚ್ಚುತ್ತಲೇ ಇದೆ. ಈಗ ಅದು ಶೇ 80 ರಷ್ಟು ಹೆಚ್ಚಾಗಿದೆ ಎಂದು ಕರ್ನಾಟಕದ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಡಾ. ಕೆಜಿ. ಜಗದೀಶ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿ ಕಾಫಿ ದರ ಏರಿಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ