ಕಳ್ಳರ ಹಾವಳಿ ತಡೆಯಲು ಮಹಿಳೆಯರ ರಾತ್ರಿ ಗಸ್ತು
ಮುಧೋಳದ ಜಯನಗರದಲ್ಲಿ ಕಳ್ಳತನದ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಮಹಿಳೆಯರು ರಾತ್ರಿ ಗಸ್ತು ತಿರುಗಲು ಆರಂಭಿಸಿದ್ದಾರೆ. ಪೊಲೀಸರ ಸಹಾಯದಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅವರು ಕೈಯಲ್ಲಿ ಕೋಲು ಹಿಡಿದು ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ.ಇತ್ತೀಚೆಗೆ ಕಳ್ಳತನದ ಅನುಮಾನದ ಮೇಲೆ ಇಬ್ಬರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಈ ಘಟನೆಗಳು ಮುಧೋಳದಲ್ಲಿ ಸುರಕ್ಷತಾ ಕ್ರಮಗಳ ಅಗತ್ಯವನ್ನು ಎತ್ತಿಹಿಡಿಯುತ್ತವೆ.
ಬಾಗಲಕೋಟೆ, ಫೆಬ್ರವರಿ 14: ಕಳ್ಳರನ್ನು ಹಿಡಿಯಲು ಮಹಿಳೆಯರು ರಾತ್ರಿ ಗಸ್ತು ಹಾಕಲು ಆರಂಭಿಸಿದರು. ಮುಧೋಳ ಜಯನಗರದ ಮಹಿಳೆಯರು ರಾತ್ರಿ ಪೂರ್ತಿ ಓಣಿಯಲ್ಲಿ ರೌಂಡ್ಸ್ ಆಗುತ್ತಿದ್ದಾರೆ. ಇತ್ತೀಚೆಗೆ ಮುಧೋಳದಲ್ಲಿ ಹೆಚ್ಚಾದ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ತಿರುಗುವ ಪೊಲೀಸರ ಜೊತೆ ಸಹಕರಿಸಲು ಮಹಿಳೆಯರು ಕೈಯಲ್ಲಿ ಕೋಲು ಹಿಡಿದು ರಸ್ತೆಗೆ ಇಳಿದಿದ್ದಾರೆ. ಕಳ್ಳತನ ಸಂಶಯದ ಮೇಲೆ ಸ್ಥಳೀಯರು ಇಬ್ಬರ ಮೇಲೆ ಹಲ್ಲೆ ಮಾಡಿ ಕಳಿಸಿದ್ದಾರೆ.
Latest Videos