ಹತ್ತತ್ತು ರೂಪಾಯಿ ಕಡಿಮೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ; ಅಸಮಾಧಾನ ಹೊರಹಾಕಿದ ನಮ್ಮ ಮೆಟ್ರೋ ಪ್ರಯಾಣಿಕರು
ಮೊದಲು ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡುತ್ತಿದ್ದವರು ನಮ್ಮ ಮೆಟ್ರೋ ಸೇವೆ ಶುರುವಾದ ಮೇಲೆ ಬಸ್ಸುಗಳಲ್ಲಿ ಪ್ರಯಾಣಿಸುವುದನ್ನು ನಿಲ್ಲಿಸಿದರು. ಆದರೆ ಬಿಎಂಅರ್ಸಿಎಲ್ ಮೊನ್ನೆ ಟಿಕೆಟ್ ದರಗಳನ್ನು ಹೆಚ್ಚು ಕಡಿಮೆ ದುಪ್ಪಟ್ಟುಗೊಳಿಸಿದ ಬಳಿಕ ಅವರೆಲ್ಲ ವಾಪಸ್ಸು ಬಿಎಂಟಿಸಿ ಕಡೆ ವಾಲುತ್ತಿದ್ದಾರೆ. ನಮ್ಮ ಮೆಟ್ರೋಗಳಲ್ಲಿ ಪ್ರಯಾಣ ಕೇವಲ ಸ್ಥಿತಿವಂತರಿಗೆ ಮಾತ್ರ ಅನ್ನುವಷ್ಟು ಟಿಕೆಟ್ ದರಗಳು ದುಬಾರಿಯಾಗಿವೆ.
ಬೆಂಗಳೂರು: ನಮ್ಮ ಮೆಟ್ರೋ ಟ್ರೈನು ಪ್ರಯಾಣ ದರಗಳನ್ನು ಪರಿಷ್ಕೃತಗೊಳಿಸಿದರೂ ಪ್ರಯಾಣಿಕರು ತೃಪ್ತರಾಗಿಲ್ಲ. ನಮ್ಮ ಬೆಂಗಳೂರು ಪ್ರತಿನಿಧಿ ಕೆಲವು ಪ್ರಯಾಣಿಕರೊಂದಿಗೆ ಮಾತಾಡಿದ್ದು ಅವರೆಲ್ಲ ಪರಿಷ್ಕೃತ ದರಗಳ ಬಗ್ಗೆಯೂ ಅಸಮಾಧಾನ ಮತ್ತು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಹತ್ತತ್ತು ರೂಪಾಯಿ ಕಡಿಮೆ ಮಾಡಿದರೆ ಏನು ಕಮ್ಮಿ ಮಾಡಿದಂತಾಯಿತು? ಸಂಬಳ ಪಡೆಯುವ ವರ್ಗದವರಾದರೆ ಹೇಗೋ ಮ್ಯಾನೇಜ್ ಮಾಡುತ್ತಾರೆ, ಅದರೆ ವಿದ್ಯಾರ್ಥಿಗಳು ಹೇಗೆ ನಿಭಾಯಿಸಿಯಾರು ಎಂದು ನಿಯಮಿತವಾಗಿ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಮಹಿಳೆಯೊಬ್ಬರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಶೇ 30 ರ ವರೆಗೆ ಇಳಿಕೆ: ಆದರೆ ಎಲ್ಲೆಡೆಯೂ ಅಲ್ಲ!