ಕಲಬುರಗಿ: ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿ ಅಂಗಡಿಗೆ ನುಗ್ಗಿದ ಡೀಸೆಲ್ ಟ್ಯಾಂಕರ್!
ಚಾಲಕನೊಬ್ಬನ ಸಣ್ಣ ನಿರ್ಲಕ್ಷ್ಯ, ಅಜಾಗರೂಕತೆ ಕಲಬುರಗಿಯಲ್ಲಿ ಭಾರಿ ದುರಂತಕ್ಕೆ ಕಾರಣವಾಗುವುದರಲ್ಲಿ ಇತ್ತು. ಅದೃಷ್ಟವಶಾತ್, ಸಂಭಾವ್ಯ ದುರಂತ ತಪ್ಪಿದೆ. ಆದರೆ ಅಂಗಡಿಯೊಂದು ಸಂಪೂರ್ಣ ಜಖಂಗೊಂಡಿದೆ. ಇದಕ್ಕೆಲ್ಲ ಡೀಸೆಲ್ ಟ್ಯಾಂಕರ್ ಚಾಲಕನ ಹಿಂದೆ ಚಲಿಸಿದ್ದೇ ಕಾರಣ! ಅದ್ಹೇಗೆ ಸಾಧ್ಯ ಅಂತೀರಾ? ವಿಡಿಯೋ ಇಲ್ಲಿದೆ ನೋಡಿ.
ಕಲಬುರಗಿ, ಫೆಬ್ರವರಿ 14: ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಡಿಸೆಲ್ ಟ್ಯಾಂಕರ್ ಅಂಗಡಿಯೊಂದಕ್ಕೆ ನುಗ್ಗಿದೆ. ಟ್ಯಾಂಕರ್‌ನ ಹ್ಯಾಂಡ್‌ಬ್ರೇಕ್ ಹಾಕದೇ ನಿಲ್ಲಿಸಿದ್ದ ಚಾಲಕ ಕಿರಾಣಿ ಅಂಗಡಿಗೆ ಹೋಗಿದ್ದ. ಈ ವೇಳೆ ಡ್ರೈವರ್ ಹಿಂದೆಯೇ ಡೀಸೆಲ್ ಟ್ಯಾಂಕರ್ ಕಿರಾಣ ಅಂಗಡಿಗೆ ನುಗ್ಗಿದೆ. ವಿಜಪ್ಪಗೌಡ ಎಂಬವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಕಿರಾಣ ಅಂಗಡಿ ಸಂಪೂರ್ಣ ಜಖಂಗೊಂಡಿದೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ