Black Tea Vs Black Coffee : ಬ್ಲಾಕ್ ಟೀಗಿಂತ ಬ್ಲಾಕ್ ಕಾಫಿ ಆರೋಗ್ಯಕ್ಕೆ ಉತ್ತಮ ಏಕೆ? ಇದೆ ಕಾರಣಗಳಂತೆ
ಚುಮುಚುಮು ಚಳಿಯಲ್ಲಿ ಹೆಚ್ಚಿನವರು ಬಿಸಿ ಬಿಸಿ ಕಾಫಿ ಅಥವಾ ಟೀ ಕುಡಿಯಲು ಇಷ್ಟ ಪಡುತ್ತಾರೆ. ಈ ಪಾನೀಯಗಳು ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಅದಲ್ಲದೇ, ದಿನವನ್ನು ಆರಂಭಿಸಲು ಅಗತ್ಯವಾದ ಎನರ್ಜಿಯನ್ನು ಒದಗಿಸುತ್ತದೆ. ಆದರೆ ಬ್ಲಾಕ್ ಕಾಫಿಯು ಹಾಗೂ ಬ್ಲಾಕ್ ಟೀಗಿಂತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ. ಹಾಗಾದ್ರೆ ಬ್ಲಾಕ್ ಕಾಫಿ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿದೆ ಎನ್ನುವ ಮಾಹಿತಿ ಇಲ್ಲಿದೆ.
ಮೈಕೊರೆಯುವ ಚಳಿಯಲ್ಲಿ ಯಾರಾದರೂ ಒಂದು ಕಪ್ ಕಾಫಿ ತಂದು ಕೊಟ್ಟರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಅತಿಯಾದ ಕಾಫಿ ಹಾಗೂ ಟೀ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ತಿಳಿದಿರುವ ವಿಚಾರ. ಆದರೆ ಹಾಲು ಬೆರೆಸಿದ ಕಾಫಿ ಹಾಗೂ ಟೀ ಕುಡಿಯುವುದಕ್ಕಿಂತ, ಡಿಕಾಕ್ಷನ್ ಕುಡಿಯುವುದಕ್ಕೂ ಬಹಳ ವ್ಯತ್ಯಾಸವಿದೆ. ನಿಮಗೆ ನಿತ್ಯವು ಬ್ಲಾಕ್ ಕಾಫಿ ಅಥವಾ ಬ್ಲಾಕ್ ಟೀ ಕುಡಿಯುವ ಅಭ್ಯಾಸವಿರಬಹುದು. ಆದರೆ ಈ ಕೆಲವು ಕಾರಣಗಳಿಂದ ಆರೋಗ್ಯಕ್ಕೆ ಬ್ಲಾಕ್ ಕಾಫಿಯು ಆರೋಗ್ಯಕ್ಕೆ ಉತ್ತಮ ಎನ್ನಬಹುದಾಗಿದೆ.
- ತ್ವರಿತ ಶಕ್ತಿಯನ್ನು ಒದಗಿಸುವಲ್ಲಿ ಬ್ಲಾಕ್ ಕಾಫಿಯು ಪ್ರಮುಖ ಪಾತ್ರವಹಿಸುತ್ತದೆ. ಒಂದು ಕಪ್ ಬ್ಲಾಕ್ ಕಾಫಿಯಲ್ಲಿ ಸುಮಾರು 95 ಮಿಲಿಗ್ರಾಂ ಕೆಫೀನ್ ಅಂಶ ಇರುತ್ತದೆ. ಅದೇ ಒಂದು ಕಪ್ ಬ್ಲಾಕ್ ಚಹಾದಲ್ಲಿ 26-48 ಮಿಲಿಗ್ರಾಂಗಳಷ್ಟು ಕೆಫೀನ್ ಅಂಶವಿರುತ್ತದೆ. ವಿಶೇಷವಾಗಿ ಬೆಳಗಿನ ಸಮಯದಲ್ಲಿ ಇಲ್ಲವಾದರೆ ಕೆಲಸದ ಸಮಯದಲ್ಲಿನ ಏಕಾಗ್ರತೆಯನ್ನು ಸುಧಾರಿಸಲು ಬಯಸುವವರಿಗೆ ಕಾಫಿಯು ಉತ್ತಮ ಪಾನೀಯವಾಗಿದೆ.
- ಕಾಫಿಗೆ ಸಕ್ಕರೆ ಅಥವಾ ಹಾಲು ಬೆರೆಸದೆ ಸೇವಿಸಿದಾಗ ಕ್ಯಾಲೋರಿ ಮುಕ್ತ ಪಾನೀಯವಾಗಿದ್ದು, ತೂಕ ಇಳಿಸುವವರಿಗೆ ಬೆಸ್ಟ್ ಎನ್ನಬಹುದು. ಆದರೆ ಈ ಚಹಾವು ಕಡಿಮೆ ಕ್ಯಾಲೋರಿ ಹೊಂದಿದ್ದರೂ, ಚಹಾಕ್ಕೆ ಸಕ್ಕರೆ, ಹಾಲು ಅಥವಾ ಜೇನುತುಪ್ಪವನ್ನು ಸೇರಿಸುತ್ತಾರೆ. ಇದು ತ್ವರಿತವಾಗಿ ಕ್ಯಾಲೋರಿ ಹೊಂದಿರುವ ಪಾನೀಯವಾಗುತ್ತದೆ. ಹೀಗಾಗಿ ಬ್ಲಾಕ್ ಕಾಫಿ ಸೇವನೆಯು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
- ಬ್ಲಾಕ್ ಕಾಫಿಯು ಕ್ಲೋರೊಜೆನಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ದೀರ್ಘಕಾಲದ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ. ಆದರೆ ಈ ಬ್ಲಾಕ್ ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದರೂ ಕೂಡ ಈ ಕಾಫಿಯ ಪಾಲಿಫಿನಾಲ್ ಗಳು ಸಾಕಷ್ಟು ವೈವಿಧ್ಯಮಯವಾಗಿರುವ ಕಾರಣ ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
- ನೆನಪಿನ ಶಕ್ತಿ, ಏಕಾಗ್ರತೆಯಂತಹ ಸಮಸ್ಯೆ ಪರಿಹರಿಸುವ ಸಾಮರ್ಥ್ಯವು ಬ್ಲಾಕ್ ಕಾಫಿಯಲ್ಲಿ ಅಧಿಕವಾಗಿದೆ. ನಿಯಮಿತವಾಗಿ ಬ್ಲಾಕ್ ಕಾಫಿ ಸೇವನೆಯು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಾದ ಆಲ್ಝೈಮರ್ ಮತ್ತು ಪಾರ್ಕಿನ್ಸನ್‌ಗಳ ಅಪಾಯದ ಮಟ್ಟವನ್ನು ಕಡಿಮೆ ಮಾಡುತ್ತದೆ. ಬ್ಲಾಕ್ ಟೀಯಲ್ಲಿ ಈ ಸಾಮರ್ಥ್ಯವಿದ್ದರೂ ಕಡಿಮೆ ಮಟ್ಟದ ಕೆಫೀನ್ ಅಂಶವಿರುವ ಕಾರಣ ಬ್ಲಾಕ್ ಕಾಫಿಗೆ ಹೋಲಿಸಿದರೆ ತಕ್ಷಣವೇ ಪರಿಣಾಮ ಬೀರುವುದಿಲ್ಲ.
- ಬ್ಲಾಕ್ ಕಾಫಿಯು ಕ್ರೀಡಾಪಟುಗಳ ಉತ್ತಮ ಪಾನೀಯವಾಗಿದೆ. ಇದು ದೈಹಿಕ ಕಾರ್ಯಕ್ಷಮತೆಗೆ ಉತ್ತೇಜಿಸುತ್ತದೆ. ವ್ಯಾಯಾಮದ ಮೊದಲು ಬ್ಲಾಕ್ ಕಾಫಿ ಕುಡಿಯುವುದರಿಂದ ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ದೇಹದ ಕೊಬ್ಬನ್ನು ಕರಗಿಸುವ ಮೂಲಕ ದೈಹಿಕ ಚಟುವಟಿಕೆಗೆ ಶಕ್ತಿಯಾಗಿ ಪರಿವರ್ತಿಸುತ್ತದೆ. ಆದರೆ ಈ ಬ್ಲಾಕ್ ಚಹಾ ಜಲಸಂಚಯನವಾಗಿದ್ದರೂ, ದೈಹಿಕ ಕಾರ್ಯಕ್ಷಮತೆ ವರ್ಧಿಸಸುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ