Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Karaga: ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಶುರು, ಯಾವಾಗ ಏನೇನು ಕಾರ್ಯಕ್ರಮ? ಇಲ್ಲಿದೆ ವಿವರ

ಬೆಂಗಳೂರು ಕರಗ ಮಹೋತ್ಸವ: ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಇಂದು ರಾತ್ರಿ ಚಾಲನೆ ದೊರೆಯಲಿದೆ. ಇಂದು ರಾತ್ರಿ 10 ಗಂಟೆಗೆ ಧ್ವಜಾರೋಹಣ, ರಥೋತ್ಸವ ಮೂಲಕ ಚಾಲನೆ ದೊರೆಯಲಿದೆ. ಕರಗ ಮಹೋತ್ಸವ ಎಷ್ಟು ದಿನ ನಡೆಯಲಿದೆ? ಏನೆಲ್ಲ ಕಾರ್ಯಕ್ರಮಗಳು ಇರಲಿವೆ? ಎಲ್ಲ ವಿವರಗಳನ್ನು ಇಲ್ಲಿ ನೀಡಲಾಗಿದೆ.

Bangalore Karaga: ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಶುರು, ಯಾವಾಗ ಏನೇನು ಕಾರ್ಯಕ್ರಮ? ಇಲ್ಲಿದೆ ವಿವರ
ಬೆಂಗಳೂರು ಕರಗ (ಸಂಗ್ರಹ ಚಿತ್ರ)
Follow us
Kiran Surya
| Updated By: Ganapathi Sharma

Updated on: Apr 04, 2025 | 7:51 AM

ಬೆಂಗಳೂರು, ಏಪ್ರಿಲ್ 4: ಇತಿಹಾಸ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ಬೆಂಗಳೂರು (Bengaluru) ಕರಗ ಮಹೋತ್ಸವಕ್ಕೆ (Bangalore Karaga 2025) ಇಂದು ರಾತ್ರಿ ಚಾಲನೆ ದೊರೆಯಲಿದೆ. 11 ದಿನಗಳ ಕರಗ ಮಹೋತ್ಸವಕ್ಕೆ ಸಕಲ ತಯಾರಿ ನಡೆದಿದ್ದು, ಈ ಬಾರಿಯೂ ಎ. ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಇದರೊಂದಿಗೆ ಅವರು 15 ಬಾರಿ ಕರಗ ಹೊತ್ತಂತಾಗಲಿದೆ. ಬೆಂಗಳೂರಿನ ಇತಿಹಾಸ ಸಾರುವ ಐತಿಹಾಸಿಕ ಕರಗ ಏಪ್ರಿಲ್ 14 ರವರೆಗೆ, ಅಂದರೆ ಒಟ್ಟು 11 ದಿನಗಳ ಕಾಲ ನಡೆಯಲಿದೆ. ಹೀಗಾಗಿ ದೇವಸ್ಥಾನದಲ್ಲಿ ಬಿರುಸಿನಿಂದ ತಯಾರಿಗಳು ಸಾಗಿವೆ. ಧರ್ಮರಾಯ ಸ್ವಾಮಿ ದೇವಸ್ಥಾನದ ಕರಗ ಮಹೋತ್ಸವಕ್ಕೆ ರಾತ್ರಿ10 ಗಂಟೆಗೆ ಧ್ವಜರೋಹಣ ಮಾಡುವುದರ ಮೂಲಕ ಚಾಲನೆ ದೊರೆಯಲಿದೆ.

ಬೆಂಗಳೂರು ಕರಗ ಕಾರ್ಯಕ್ರಮ ವೇಳಾಪಟ್ಟಿ

  • ಏಪ್ರಿಲ್ 4 – ರಥೋತ್ಸವ ಹಾಗೂ ಧ್ವಜಾರೋಹಣ.
  • ಏಪ್ರಿಲ್ 5 ರಿಂದ ಏಪ್ರಿಲ್ 8 ರ ತನಕ ಪ್ರತಿದಿನ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ.
  • ಏಪ್ರಿಲ್ 9ರಂದು ಆರತಿ ದೀಪಗಳು.
  • ಏಪ್ರಿಲ್ 10ರ ಗುರುವಾರ ಹಸಿ ಕರಗ.
  • ಏಪ್ರಿಲ್ 11ರಂದು ಪೋಂಗಲ್ ಸೇವೆ.
  • ಏಪ್ರಿಲ್ 12 ಶನಿವಾರದಂದು ಕರಗ ಶಕ್ತ್ಯೋತ್ಸವ & ಧರ್ಮರಾಯಸ್ವಾಮಿ ರಥೋತ್ಸವ.
  • ಏಪ್ರಿಲ್ 13ರಂದು ಪುರಾಣ ಪ್ರವಚನ ಹಾಗೂ ದೇವಸ್ಥಾನದಲ್ಲಿ ಗಾವು ಶಾಂತಿ.
  • ಏಪ್ರಿಲ್ 14ರ ಸೋಮವಾರ ವಸಂತೋತ್ಸವ ಧ್ವಜಾರೋಹಣ.

ಕಳೆದ ಬಾರಿಗಿಂತ ಈ ಬಾರಿ ಕರಗಕ್ಕೆ ತಡವಾಗಿ ತಯಾರಿ ಮಾಡಿಕೊಳ್ಳಲಾಗಿದೆ.ಇದಕ್ಕೆ ಪ್ರಮುಖ ಕಾರಣ ಅಂದರೆ, ಕಳೆದ 4 ತಿಂಗಳಿಂದಲೂ ನಿಧಾನಗತಿಯಲ್ಲಿ ನಡೆಯುತ್ತಿದ್ದ ವೈಟ್ ಟಾಪಿಂಗ್ ಕಾಮಾಗಾರಿ. ಈ ಬಗ್ಗೆ ಜನವರಿ- 30 ರಂದು, ‘‘ಕರಗ ರಥೋತ್ಸವಕ್ಕೆ ಕಾಮಗಾರಿ ಅಡ್ಡಿಯಾಗಲಿದೆ’’ ಎಂದು ‘ಟಿವಿ9’ ಸುದ್ದಿ ಪ್ರಸಾರ ಮಾಡಿತ್ತು. ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿಸಿ ಇದೀಗ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಫುಟ್ ಪಾತ್ ಕಾಮಗಾರಿ ಮಾತ್ರ ಬಾಕಿಯಿದ್ದು ಒಂದು ವಾರದಲ್ಲಿ ಆ ಕಾಮಗಾರಿಯು ಪೂರ್ಣವಾಗುವ ನಿರೀಕ್ಷೆ ಇದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಮಾತನಾಡಿದ್ದು, ನಾವು ಮೊದಲು ‘ಟಿವಿ9’ಗೆ ಧನ್ಯವಾದಗಳನ್ನು ತಿಳಿಸಬೇಕು. ವರದಿ ಪ್ರಸಾರವಾದ ಮೇಲೆ ಇಷ್ಟು ವೇಗವಾಗಿ ಕಾಮಗಾರಿ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕರಗ ಮೆರವಣಿಗೆಯಲ್ಲಿ ಸಾಗುತ್ತಾ ತಪ್ಪದೆ ದರ್ಗಾಗೆ ಹೋಗುವುದೇಕೆ ಗೊತ್ತಾ!?

ಇದನ್ನೂ ಓದಿ
Image
ಸಾಕಾ, ಬೇಕಾ... ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ, ಚಹಾ ದರ ಹೆಚ್ಚಳ
Image
ಕಲ್ಯಾಣ ಕರ್ನಾಟಕ ರೈತರ 7 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ
Image
ಹಾಲಿನ ಬೆಲೇಲಿ ರೈತರಿಗೆ ಸಿಗೋದೆಷ್ಟು, ಸರ್ಕಾರದ ಪಾಲೆಷ್ಟು? ಇಲ್ಲಿದೆ ವಿವರ
Image
ಜೇಬಿಗೆ ಬೀಳಲಿದೆ ಕತ್ತರಿ: ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆ ಸಾಧ್ಯತೆ

ಒಟ್ಟಿನಲ್ಲಿ ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಈ ಬಾರಿ ದ್ರೌಪದಿ ದೇವಿ ಕರಗ ಎಲ್ಲರಿಗೂ ಅದ್ಭುತವಾದ ದರ್ಶನ ನೀಡುವುದರಲ್ಲಿ ನೋ ಡೌಟ್.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ