AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMRCL ಜೊತೆಗೆ ಪ್ರೆಸ್ಟೀಜ್ ಗ್ರೂಪ್ 90 ಕೋಟಿ ಒಪ್ಪಂದ: ಬೆಳ್ಳಂದೂರು ಮೆಟ್ರೋ ಇನ್ಮುಂದೆ ‘ಪ್ರೆಸ್ಟೀಜ್ ಬೆಳ್ಳಂದೂರು ಸ್ಟೇಷನ್’

ಬಿಎಂಆರ್‌ಸಿಎಲ್ ಮತ್ತು ಪ್ರೆಸ್ಟೀಜ್ ಗ್ರೂಪ್, ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ನೀಲಿ ಮಾರ್ಗದಲ್ಲಿರುವ ಈ ನಿಲ್ದಾಣವು 30 ವರ್ಷಗಳ ಕಾಲ 'ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ' ಎಂದು ಕರೆಯಲ್ಪಡಲಿದೆ. ಒಟ್ಟು 90 ಕೋಟಿ ರೂ. ಮೊತ್ತದ ಒಪ್ಪಂದವಾಗಿದೆ.

BMRCL ಜೊತೆಗೆ ಪ್ರೆಸ್ಟೀಜ್ ಗ್ರೂಪ್ 90 ಕೋಟಿ ಒಪ್ಪಂದ: ಬೆಳ್ಳಂದೂರು ಮೆಟ್ರೋ ಇನ್ಮುಂದೆ ‘ಪ್ರೆಸ್ಟೀಜ್ ಬೆಳ್ಳಂದೂರು ಸ್ಟೇಷನ್'
ಬಿಎಂಆರ್ಸಿಎಲ್ ಜೊತೆ ಒಪ್ಪಂದ ಮಾಡಿಕೊಂಡ ಪ್ರೆಸ್ಟೀಜ್ ಗ್ರೂಪ್
ಕಿರಣ್​ ಸೂರ್ಯ
| Edited By: |

Updated on: Feb 21, 2026 | 10:37 PM

Share

ಬೆಂಗಳೂರು, ಫೆಬ್ರವರಿ 21: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಇಂದು ಪ್ರೆಸ್ಟೀಜ್ ಬೀಟಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಜೊತೆ ಹಂತ-2ಎ ಹೊರ ವರ್ತುಲ ರಸ್ತೆ (ORR) ಕಾರಿಡಾರ್‌ನ ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಂತೆ, ವಾಣಿಜ್ಯ ಕಾರ್ಯಾಚರಣೆ ಪ್ರಾರಂಭವಾದ ದಿನಾಂಕದಿಂದ 30 ವರ್ಷಗಳ ಕಾಲ ಈ ನಿಲ್ದಾಣವನ್ನು “ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ” ಎಂದು ಕರೆಯಲಾಗುತ್ತದೆ.

90 ಕೋಟಿ ರೂ ವ್ಯವಹಾರ

ಈ ಬಗ್ಗೆ ಬಿಎಂಆರ್​​ಸಿಎಲ್​​ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ‘ನಾಮಕರಣ ಹಕ್ಕುಗಳು ಮತ್ತು ಇತರೆ ಅನುಕೂಲಗಳಿಗೆ ಸಂಬಂಧಿಸಿದ ಒಪ್ಪಂದದ ಮೌಲ್ಯ 80 ಕೋಟಿ ರೂ ಆಗಿದ್ದು, ಮೆಟ್ರೋ ನಿಲ್ದಾಣದಿಂದ ಅವರ ಆವರಣಕ್ಕೆ ಸಂಪರ್ಕಿಸುವ ವಿಶೇಷ ಪಾದಚಾರಿ ಮೇತುವೆ (ಸೈವಾಕ್) ಆಯ್ಕೆ ಮಾಡಿದಲ್ಲಿ ಹೆಚ್ಚುವರಿ 10 ಕೋಟಿ ರೂ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ಸಹಭಾಗಿತ್ವದ ಮೌಲ್ಯ 90 ಕೋಟಿ ರೂ ಆಗುತ್ತದೆ.

ನಮ್ಮ ಮೆಟ್ರೋ ಟ್ವೀಟ್​​

ನಾನ್ ಫೇರ್ ಬಾಕ್ಸ್ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮೆಟ್ರೋ ಜಾಲದ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ವ್ಯವಸ್ಥೆಯ ಭಾಗವಾಗಿ, ಪ್ರಯಾಣಿಕರ ಸೌಕರ್ಯಗಳು ಮತ್ತು ಒಳಾಂಗಣ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಬಿಎಂಆರ್​ಸಿಎಲ್ ನೊಂದಿಗೆ ಸಮನ್ವಯದಿಂದ, ನಿಗದಿತ ಸುರಕ್ಷತೆ ಮತ್ತು ವಿನ್ಯಾಸ ಮಾನದಂಡಗಳನ್ನು ಅನುಸರಿಸುವ ಮೂಲಕ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಪ್ರೆಸ್ಟೀಜ್ ಗ್ರೂಪ್ ವಹಿಸಿಕೊಳ್ಳಲಿದೆ.

ಇದನ್ನೂ ಓದಿ: Namma Metro: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು!

ಈ ನಿಲ್ದಾಣವು ನಿಗಮದ ಸ್ವಾಮ್ಯದಲ್ಲಿ ಹಾಗೂ ನಿಯಂತ್ರಣದಲ್ಲಿರುವ ಸಾರ್ವಜನಿಕ ಆಸ್ತಿಯಾಗಿಯೇ ಉಳಿಯುತ್ತದೆ. ಈ ಒಪ್ಪಂದದಲ್ಲಿ ನಿಲ್ದಾಣದ ನಾಮಕರಣ ಹಕ್ಕುಗಳು, ಗರಿಷ್ಠ 1 ಸಾವಿರ ಚದರ ಅಡಿ ಒಳಾಂಗಣ ಜಾಹೀರಾತು ಹಕ್ಕುಗಳು ಹಾಗೂ ನಿಲ್ದಾಣದ ಆವರಣದಲ್ಲಿ 3 ಸಾವಿರ ಚದರ ಅಡಿ ವಾಣಿಜ್ಯ ಸ್ಥಳದ ಹಂಚಿಕೆ ಸೇರಿವೆ.

ನಿಯಂತ್ರಿತ ಅನುಮೋದನೆಗಳು ಮತ್ತು ಹೆಚ್ಚುವರಿ 10 ಕೋಟಿ ರೂ ಪಾವತಿಗೆ ಒಳಪಟ್ಟು, ನಿಲ್ದಾಣವನ್ನು ಸಂಪರ್ಕಿಸುವ ವಿಶೇಷ ಪಾದಚಾರಿ ಮೇಲ್ ಸೇತುವೆಯ ಸಾಧ್ಯತೆಯನ್ನು ಒಪ್ಪಂದವು ಒದಗಿಸಿರುತ್ತದೆ. ಭವಿಷ್ಯದಲ್ಲಿ ಯೋಜನಾ ಹಂತದಲ್ಲಿ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತಹ ಸಂಪರ್ಕಕ್ಕಾಗಿ ವಿನ್ಯಾಸ ನಿಬಂಧನೆಗಳನ್ನು ಸೇರಿಸಲಾಗಿದೆ.

ಸಾರ್ವಜನಿಕ ಮಾಲೀಕತ್ವದ ಸಂಸ್ಥೆ ಯೊಂದಿಗೆ ಖಾಸಗಿ ಭಾಗವಹಿಸುವಿಕೆಯನ್ನು ಬಳಸಿಕೊಳ್ಳುವಲ್ಲಿ ಆಯಾ ಕಾರ್ಯಾಚರಣೆಯ ಸಮಗ್ರತೆಗೆ ಧಕ್ಕೆಯಾಗದಂತೆ ಮೆಟ್ರೋ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಪಾಲುದಾರಿಕೆಯು ಒಂದು ಮೈಲಿಗಲ್ಲು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ಪ್ರೆಸ್ಟೀಜ್ ಗ್ರೂಪ್​​​ನ ಜಗ್ಗಿ ಮರ್ವಾಹಾ ಹೇಳಿದ್ದಿಷ್ಟು 

ಈ ಕುರಿತು ಪ್ರತಿಕ್ರಿಯಿಸಿದ ಪ್ರೆಸ್ಟೀಜ್ ಗ್ರೂಪ್​​​ನ ಜಗ್ಗಿ ಮರ್ವಾಹಾ ಅವರು, ಬೆಂಗಳೂರು ನಗರದ ವೇಗವಾಗಿ ಬೆಳೆಯುತ್ತಿರುವ ಸಾರಿಗೆ-ಆಧಾರಿತ ಅಭಿವೃದ್ಧಿ ವಲಯಗಳಲ್ಲಿ ನಗರ ಚಲನವಲನ ಮೂಲಸೌಕರ್ಯಕ್ಕೆ ಬೆಂಬಲ ನೀಡುವ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಸಂಸ್ಥೆಯ ಬದ್ಧತೆಯನ್ನು ಈ ಸಹಕಾರ ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಖಾಲಿ ಟ್ರಂಕ್ ಹಿಡಿದು ಬಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಸಂಕಷ್ಟ

ಬೆಳ್ಳಂದೂರು ಮೆಟ್ರೋ ನಿಲ್ಯಾಣವು ಹೊರ ವರ್ತುಲ ರಸ್ತೆಯ ಕಾರಿಡಾರ್‌ನ ಪ್ರಮುಖ ನಿಲ್ದಾಣವಾಗಿದ್ದು, ಬೆಂಗಳೂರಿನ ಐಟಿ ಮತ್ತು ವಾಣಿಜ್ಯ ಕೇಂದ್ರ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ