AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು!

ಬೆಂಗಳೂರಿನ ಯೆಲ್ಲೋ ಲೈನ್‌ನಲ್ಲಿ ಚಲಿಸುತ್ತಿದ್ದ ಚಾಲಕರಹಿತ ಮೆಟ್ರೋ ರೈಲು ಜನವರಿ 15ರಂದು ಹೆಬ್ಬಗೋಡಿ ಡಿಪೋದಲ್ಲಿ ಹಳಿ ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಅವಘಡವು ಎಲಿವೇಟೆಡ್ ಕಾರಿಡಾರ್ ಮೇಲೆ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂಬ ಆತಂಕ ಸೃಷ್ಟಿಸಿದೆ. BMRCL ಆರು ಸದಸ್ಯರ ತನಿಖಾ ಸಮಿತಿ ರಚಿಸಿದ್ದು, ಮೆಟ್ರೋ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆಗಳು ಮೂಡಿವೆ.

Namma Metro: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು!
ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು!
ಕಿರಣ್​ ಸೂರ್ಯ
| Edited By: |

Updated on:Feb 20, 2026 | 2:56 PM

Share

ಬೆಂಗಳೂರು, ಫೆಬ್ರವರಿ 20: ಯೆಲ್ಲೋ ಲೈನ್‌ನಲ್ಲಿ ಸಂಚರಿಸುತ್ತಿದ್ದ ಡ್ರೈವರ್ಲೆಸ್ ಮೆಟ್ರೋ (Namma Metro) ರೈಲು ಹಳಿ ತಪ್ಪಿದ ಘಟನೆ ಜನವರಿ- 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಬ್ಬಗೋಡಿ ಡಿಪೋದಲ್ಲಿ ಈ ಅವಘಡ ಸಂಭವಿಸಿದ್ದು, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಡ್ರೈವರ್ಲೆಸ್ ರೈಲು ಹಳಿ ತಪ್ಪಿರುವುದು ತಿಳಿದುಬಂದಿದೆ.

ಘಟನೆಗೆ ಕಾರಣವೇನು?

ಯೆಲ್ಲೋ ಲೈನ್‌ನ ಹೆಬ್ಬಗೋಡಿ ಡಿಪೋದಲ್ಲಿ ಸಂಭವಿಸಿದ ಡ್ರೈವರ್ಲೆಸ್ ರೈಲು ಹಳಿ ತಪ್ಪಿದ ಘಟನೆಗೆ ಸಂಬಂಧಿಸಿದಂತೆ ಹಳಿ ತಪ್ಪಿದ ಪರಿಣಾಮ ಟ್ರ್ಯಾಕ್ ಸ್ಲೀಪರ್‌ಗಳು (ಹಳಿ ಆಧಾರಗಳು), ಮೂರನೇ ರೇಲ್‌, ಟ್ರ್ಯಾಕ್ಷನ್ ಹಾಗೂ ರೋಲಿಂಗ್ ಸ್ಟಾಕ್ ಘಟಕಗಳಿಗೆ ಹಾನಿಯಾಗಿದೆ. ಈ ಅವಘಡಕ್ಕೆ ಕಾರಣ ಮಾನವನ ಅಜಾಗರೂಕತೆಯೇ, ವ್ಯವಸ್ಥಾತ್ಮಕ ದೌರ್ಬಲ್ಯವೇ ಅಥವಾ ಸಿಗ್ನಲಿಂಗ್ ವ್ಯವಸ್ಥೆಯ ದೋಷವೇ ಎಂಬುದನ್ನು ಪರಿಶೀಲಿಸುತ್ತಿದೆ. ರೈಲು ಆಪರೇಟರ್‌, ಡಿಪೋ ಕಂಟ್ರೋಲರ್ ಹಾಗೂ ಇತರ ಸಿಬ್ಬಂದಿಗಳೂ ತನಿಖೆಗೆ ಒಳಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಎಲಿವೇಟೆಡ್ ಕಾರಿಡಾರ್ ಮೇಲೆ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಆರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿ ತನಿಖೆ ಆರಂಭಿಸಿದೆ. ಆರ್.ವಿ. ರೋಡ್–ಬೊಮ್ಮಸಂದ್ರವರೆಗೆ 19.15 ಕಿಮೀ ಉದ್ದದ ಯೆಲ್ಲೋ ಲೈನ್‌ನಲ್ಲಿ ಸದ್ಯ 8 ರೈಲುಗಳಿದ್ದು, 7 ರೈಲುಗಳು ಕಾರ್ಯಾಚರಣೆಯಲ್ಲಿವೆ. 8ನೇ ರೈಲಿನ ಪರೀಕ್ಷಾ ಓಡಾಟ ನಡೆಯುತ್ತಿದೆ. ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10ರಂದು ನರೇಂದ್ರ ಮೋದಿ ಚಾಲನೆ ನೀಡಿದ್ದು, ಆಗಸ್ಟ್ 11ರಿಂದ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲಿನ ಸುರಕ್ಷತೆ ಕುರಿತು ಇದೀಗ ಪ್ರಶ್ನೆಗಳು ಉದ್ಭವಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:57 pm, Fri, 20 February 26

Follow Us
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಸೂರತ್‌ನಲ್ಲಿ ಗೋಮಯ ರಾಖಿಗಳ ಮೂಲಕ ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆ
ಲೋಕಾ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ!
ಲೋಕಾ ದಾಳಿಗೆ ಹೆದರಿ ರಾಜೀನಾಮೆ ಕೊಟ್ಟಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ!
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ