BMRCL Namma Metro
ನಮ್ಮ ಮೆಟ್ರೋ ಎಂದು ಕರೆಯಲ್ಪಡುವ ಬೆಂಗಳೂರಿನ ಮೆಟ್ರೋ ರೈಲು ಸೇವೆಯನ್ನು ಸರ್ಕಾರಿ ಸ್ವಾಮ್ಯದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿರ್ವಹಣೆ ಮಾಡುತ್ತಿದೆ. 2011ರಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಮೊದಲಿಗೆ ಆರಂಭವಾಯಿತು. ಬಿಎಂಆರ್‌ಸಿಎಲ್ ಬೆಂಗಳೂರಿನಲ್ಲಿ ಮೆಟ್ರೋ ರೈಲು ವ್ಯವಸ್ಥೆಯ ಯೋಜನೆ, ನಿರ್ಮಾಣ ಮತ್ತು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ನಮ್ಮ ಮೆಟ್ರೋ ಬಹು ಮಾರ್ಗಗಳನ್ನು ಒಳಗೊಂಡಿದೆ. ಇವುಗಳಲ್ಲಿ ಪರ್ಪಲ್ ಲೈನ್ ಮತ್ತು ಗ್ರೀನ್ ಲೈನ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಮಾರ್ಗಗಳಾಗಿವೆ. ನಗರದ ವಿವಿಧ ಭಾಗಗಳಿಗೆ ಸುಧಾರಿತ ಸಂಪರ್ಕವನ್ನು ಒದಗಿಸುವ ಮೂಲಕ ಹೆಚ್ಚಿನ ಪ್ರದೇಶಗಳನ್ನು ಒಳಗೊಳ್ಳಲು ಮೆಟ್ರೋ ಜಾಲವು ನಿರಂತರವಾಗಿ ವಿಸ್ತರಿಸುತ್ತಿದೆ. ಬಿಎಂಆರ್‌ಸಿಎಲ್ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ಮೂಲಕ ಮೆಟ್ರೋ ಸೇವೆಗಳನ್ನು ಬಸ್ ಮತ್ತು ಇತರ ರೀತಿಯ ಸಾರಿಗೆಯೊಂದಿಗೆ ಸಂಯೋಜಿಸಿದೆ. ಈ ಮೂಲಕ ತಡೆರಹಿತ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ