AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮೆಟ್ರೋ ಟಿಕೆಟ್ ದರ ಏರಿಕೆ ಶಾಕ್ ನಿಶ್ಚಿತ! ಖರ್ಚು ವೆಚ್ಚಗಳ ಆಡಿಟ್ ಮುಕ್ತಾಯ, ಡಿಸಿಎಂಗೆ ವರದಿ ಸಲ್ಲಿಸಿದ ಬಳಿಕ ದರ ನಿಗದಿ

Namma Metro ticket price: ಮೆಟ್ರೋ ಪ್ರಯಾಣ ದರ ಏರಿಕೆಗೆ ಇತ್ತೀಚೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಆದರೆ ಈಗ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮೆಟ್ರೋ ಟಿಕೆಟ್ ದರ ಹೆಚ್ಚಳ ಆದರೆ ಎಷ್ಟು ಶೇಕಡಾ ಏರಿಕೆ ಆಗಬಹುದು? ಮಾಹಿತಿ ಇಲ್ಲಿದೆ.

ಮತ್ತೆ ಮೆಟ್ರೋ ಟಿಕೆಟ್ ದರ ಏರಿಕೆ ಶಾಕ್ ನಿಶ್ಚಿತ! ಖರ್ಚು ವೆಚ್ಚಗಳ ಆಡಿಟ್ ಮುಕ್ತಾಯ, ಡಿಸಿಎಂಗೆ ವರದಿ ಸಲ್ಲಿಸಿದ ಬಳಿಕ ದರ ನಿಗದಿ
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)Image Credit source: tv9
ಕಿರಣ್​ ಸೂರ್ಯ
| Edited By: |

Updated on: Feb 24, 2026 | 7:35 AM

Share

ಬೆಂಗಳೂರು, ಫೆಬ್ರವರಿ 24: ಕಳೆದ ಬಾರಿ ಮೆಟ್ರೋ ಟಿಕೆಟ್ ದರ (Metro Ticket Fare) ಶೇ 5 ರಷ್ಟು ಏರಿಕೆ ಮಾಡಿ ನಂತರ ತಾತ್ಕಾಲಿಕವಾಗಿ ತಡೆ ನೀಡಲಾಗಿತ್ತು. ನಂತರ, ಮೆಟ್ರೋ ಖರ್ಚು ವೆಚ್ಚಗಳ ಬಗ್ಗೆ ಆಡಿಟ್ ಮಾಡಿ ಎಂದು ಬಿಎಂಆರ್​ಸಿಎಲ್​​ಗೆ (BMRCL) ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದರು‌. ಅದರಂತೆ, ಬಿಎಂಆರ್​ಸಿಎ ಆಂತರಿಕ ಅಡಿಟ್ ಮಾಡಿದೆ. ಮೆಟ್ರೋ ನಿರ್ವಹಣೆ, ಖರ್ಚು ವೆಚ್ಚ, ಸಿಬ್ಬಂದಿ ಸಂಬಳ, ಇಂಧನ ವೆಚ್ಚ ಎಲ್ಲದರ ಬಗ್ಗೆ ಆಡಿಟ್ ಮುಗಿದಿದ್ದು, ಡಿಸಿಎಂ ಅವರ ಗಮನಕ್ಕೆ ತರಲು ಬಿಎಂಆರ್​ಸಿಎ ಮುಂದಾಗಿದೆ. ಆಡಿಟ್ ಮುಗಿದ ಹಿನ್ನೆಲೆ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ದರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ‌. ಈಗಾಗಲೇ ನಿಗದಿಯಾಗಿದ್ದ ಶೇ 5 ರ ದರದ ಬದಲು ತುಸು ಕಡಿಮೆ ಏರಿಕೆ ಮಾಡಬಹುದು ಅಥವಾ ಹೆಚ್ಚೇ ಏರಿಕೆ ಆದರೂ ಆಗಬಹುದು ಎನ್ನಲಾಗುತ್ತಿದೆ. ಆದರೆ, ಮೆಟ್ರೋ ಪ್ರಯಾಣಿಕರು ಟಿಕೆಟ್ ದರ ಏರಿಕೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ನಿಗದಿ ಆಗಿದ್ದ ಶೇ 5 ರ ದರದಲ್ಲಿ ಶೇ 1 ಅಥವಾ 2 ರ ದರ ಹೆಚ್ಚಳ ನಿಗದಿ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅಥವಾ ನಿಗದಿ ಮಾಡಿದ್ದಕ್ಕಿಂತ ಜಾಸ್ತಿ ಆದರೂ ಆಗಬಹುದು ಎಂಬ ಕೂಡ ಚರ್ಚೆ ಇದೆ. ಆದರೆ ದರ ಇಳಿಕೆ ಅಥವಾ ಏರಿಕೆ ಆಗಬೇಕು ಅಂದರೆ ಹೊಸ ದರ ನಿಗದಿ ಸಮಿತಿ ರಚನೆ ಆಗಬೇಕು. ಇದೀಗ ಆಡಿಟ್ ಮುಕ್ತಾಯ ಆದ ಹಿನ್ನೆಲೆ, ಮೆಟ್ರೋ ಬೋರ್ಡ್ ಮೀಟಿಂಗ್ ಸಮಯ ನಿಗದಿ ಮಾಡುವ ವಿಚಾರದ ಬಗ್ಗೆ ಬಿಎಂಆರ್​ಸಿಎಲ್ ಎಂಡಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಲಿದ್ದಾರೆ. ಬೋರ್ಡ್ ಮೀಟಿಂಗ್ ಬಳಿಕ ಎಷ್ಟು ದರ ಏರಿಕೆ ಅಗುತ್ತದೆ ಎಂಬ ಸ್ಪಷ್ಟತೆ ಸಿಗಲಿದೆ. ಒಟ್ಟಿನಲ್ಲಿ ದರ ಏರಿಕೆ ಆಗುವುದು ನಿಶ್ಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹೇಗೆ ನಿಗದಿಯಾಗುತ್ತೆ ನಮ್ಮ ಮೆಟ್ರೋ ಟಿಕೆಟ್ ದರ? ಯಾರು ಹೆಚ್ಚಳ ಮಾಡ್ತಾರೆ? ಇಲ್ಲಿದೆ ವಿವರ

ಒಟ್ಟಿನಲ್ಲಿ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯಿಂದ ರಿಲೀಫ್ ಸಿಗುತ್ತದೆ ಎಂದುಕೊಂಡಿದ್ದವರಿಗೆ ಇದು ಶಾಕ್. ಟಿಕೆಟ್ ದರ ಏರಿಕೆ ಆದರೆ ಮತ್ತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಏರ್ಪಡುವುದಂತೂ ಗ್ಯಾರಂಟಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ