AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 22ರ ದಿನಭವಿಷ್ಯ

Daily Numerology February 22: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 22ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 22ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Feb 22, 2026 | 12:10 AM

Share

ಓಂ ನಮೋ ಭಗವತೇ ವಾಸುದೇವಾಯ ಎಂದು ನೂರಾ ಎಂಟು ಬಾರಿ ಜಪ ಮಾಡಿ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇರುವವರಲ್ಲಿನ ಆತಂಕ ದೂರವಾಗಿ, ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮದೇ ಬದುಕಿನಲ್ಲಿ ಆಗುವಂಥ ಕೆಲವು ಬದಲಾವಣೆಗಳಿಂದ ಮುಖ್ಯ ತೀರ್ಮಾನವನ್ನು ಮಾಡಲಿದ್ದೀರಿ. ಆನ್ ಲೈನ್ ಮೂಲಕ ಖರೀದಿ ಮಾಡಿದ್ದ ವಸ್ತುಗಳು ಕೆಲವನ್ನು ಕಳಪೆ ಗುಣಮಟ್ಟ ಎಂಬ ಕಾರಣಕ್ಕೋ ಅಥವಾ ಮನಸ್ಸಿಗೆ ಹಿಡಿಸಲಿಲ್ಲ ಎಂಬ ಕಾರಣಕ್ಕೋ ಹಿಂತಿರುಗಿಸುವುದಕ್ಕೆ ನಿರ್ಧರಿಸುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ನಿಮ್ಮಲ್ಲಿ ಯಾರಿಗೆ ಈಗಾಗಲೇ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ ಅಂಥವರಿಗೆ ತೊಂದರೆ ಉಲ್ಬಣಿಸಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಬಂಡವಾಳ ಹೂಡಿಕೆ ಮಾಡಬೇಕು ಎಂದು ಆಲೋಚಿಸುತ್ತಿರುವವರಿಗೆ ಎಲ್ಲಿ ಮಾಡಬೇಕು ಹಾಗೂ ಯಾರನ್ನು ಜತೆಗೆ ಸೇರಿಸಿಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳನ್ನು ಈ ದಿನ ಆಖೈರು ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ದೀರ್ಘಾವಧಿಗೆ ಪ್ರಾಜೆಕ್ಟ್ ಒಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಜ್ಯೋತಿಷ್ಯ, ಪೌರೋಹಿತ್ಯ, ಅಧ್ಯಾತ್ಮ ಪ್ರವಚನ ಇವುಗಳನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೋ ಅಂಥವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಕುಟುಂಬಕ್ಕಾಗಿ ಯೋಜನೆಯನ್ನು ರೂಪಿಸುವ ಸಾಧ್ಯತೆ ಸಹ ಇದೆ. ಈ ದಿನ ನೀವು ಎಚ್ಚರಿಕೆ ಅಂತ ವಹಿಸಬೇಕಾಗಿರುವುದು ಕಣ್ಣಿನ ಬಗ್ಗೆ. ಕಣ್ಣಿನ ಪವರ್ ಸಮಸ್ಯೆ ಉದ್ಭವಿಸಬಹುದು ಅಥವಾ ಈಗಾಗಲೇ ಇದ್ದಲ್ಲಿ ಅದು ಉಲ್ಬಣಿಸುವ ಸಾಧ್ಯತೆಗಳಿವೆ. ಹೊಸ ಬಟ್ಟೆ ಅಥವಾ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುತ್ತೀರಿ ಎಂದಾದಲ್ಲಿ ಬಜೆಟ್ ಮೇಲೆ ಗಮನವಿಟ್ಟುಕೊಳ್ಳಿ.

ಲೇಖನ- ಸ್ವಾತಿ ಎನ್.ಕೆ.