AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್‌ನ್ನು ಮನೆಗೆ ತಲುಪಿಸಿದ ಡೆಲಿವರಿ ಬಾಯ್‌ಗೆ 500 ರೂ ಟಿಪ್ಸ್ ಕೊಟ್ಟ ಯುವತಿ

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಡೆಲಿವರಿ ಬಾಯ್ಸ್ ಸರಿಯಾದ ಸಮಯಕ್ಕೆ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ಈ ಡೆಲಿವರಿ ಬಾಯ್ ಗಳಿಗೆ ಧನ್ಯವಾದ ತಿಳಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ಯುವತಿ ಬ್ಲಿಂಕಿಟ್ ಸವಾರನ ಮೊಗದಲ್ಲಿ ನಗು ಮೂಡಿಸಿದ್ದಾಳೆ. ತಾನು ಆರ್ಡರ್ ಮಾಡಿದ 15 ರೂ ಆಗಿದ್ರು, ಡೆಲಿವರಿ ಬಾಯ್ ಗೆ ಹೆಚ್ಚಿನ ಮೊತ್ತವನ್ನು ಟಿಪ್ಸ್ ಆಗಿ ನೀಡಿದ್ದಾಳೆ. ಈ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಆರ್ಡರ್‌ನ್ನು ಮನೆಗೆ ತಲುಪಿಸಿದ ಡೆಲಿವರಿ ಬಾಯ್‌ಗೆ 500 ರೂ ಟಿಪ್ಸ್ ಕೊಟ್ಟ ಯುವತಿ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on:Jul 03, 2026 | 11:33 AM

Share

ಈಗಿನ ಕಾಲದಲ್ಲಿ ಮಾನವೀಯತೆ, ಕಷ್ಟಕ್ಕೆ ಮಿಡಿಯುವವರೇ ಕಡಿಮೆ. ಈ ದುಡ್ಡಿನ ವಿಚಾರದಲ್ಲಿ ಎಲ್ಲವೂ ಲೆಕ್ಕಾಚಾರ. ಹೀಗಿರುವಾಗ ಯುವತಿಯೊಬ್ಬಳು ಹೃದಯ ಶ್ರೀಮಂತಿಕೆ ಮೆರೆದಿದ್ದಾಳೆ. ಕೇವಲ ಹದಿನೈದು ರೂಪಾಯಿ ಬೆಲೆ ವಸ್ತುವನ್ನು ಆರ್ಡರ್ ಮಾಡಿದ್ದು, ಮನೆಗೆ ತಲುಪಿಸಲು ಬಂದ ಡೆಲಿವರಿ ಬಾಯ್‌ಗೆ (delivery boy) 500 ರೂ ಟಿಪ್ಸ್ ನೀಡಿದ್ದಾಳೆ. ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ಆತನ ಸಂತೋಷಕ್ಕೆ ಪಾರಾವೇ ಇಲ್ಲದಂತಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಮ್‌ ಬ್ಲಿಂಕಿಟ್ ರೈಡರ್‌ (@im_blinkit_rider) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಡೆಲಿವರಿ ಬಾಯ್ 20 ರೂಪಾಯಿಗಿಂತ ಕಡಿಮೆ ಬೆಲೆಯ ಪ್ರಾಡಕ್ಟ್ ಆರ್ಡರ್ ಮಾಡಿದ ಯುವತಿ ನನಗೆ 500 ರೂಪಾಯಿ ಟಿಪ್ ನೀಡಿರುವುದಾಗಿ ಉಲ್ಲೇಖಿಸಿದ್ದಾನೆ. ಈ ಪೋಸ್ಟ್ ನೊಂದಿಗೆ ಯುವತಿಯ ಒಳ್ಳೆತನ ಮೆಚ್ಚಿಕೊಂಡಿದ್ದು, 500 ರೂ ನನಗೆ ಬಹಳ ಉಪಯೋಗಕ್ಕೆ ಬಂತು. ನಾನು ಎರಡು ದಿನ ದುಡಿದ್ರೆ ಇಷ್ಟು ಹಣ ಬರುತ್ತದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಆರ್ಡರ್ ಮಾಡಿದ್ದು ಸ್ಮಾರ್ಟ್‌ ಫೋನ್, ಆದ್ರೆ ಮನೆಗೆ ಬಂದ ಪಾರ್ಸೆಲ್ ನೋಡಿ ಯುವಕ ಫುಲ್ ಶಾಕ್

ಈ ಪೋಸ್ಟ್ 1.7 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಯುವತಿ ತನ್ನ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಿದ್ದೀರಬೇಕು. ಅದಕ್ಕಾಗಿಯೇ ಅವಳು ನಿನಗೆ ಸಹಾಯ ಮಾಡಲು ನಿರ್ಧರಿಸಿದಳು ಎಂದು ಹೇಳಿದ್ದಾರೆ. ಇನ್ನೊಬ್ಬರು, ಒಳ್ಳೆಯ ಮನಸ್ಸಿನಿಂದ ಸಹಾಯ ಮಾಡುವುದನ್ನು ಕಂಡಾಗ ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಯುವತಿಯ ಒಳ್ಳೆತನಕ್ಕೆ ನನ್ನದೊಂದು ಸಲಾಂ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:32 am, Fri, 3 July 26

Follow Us
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಆಷಾಢ ಮಾಸದ ಈ ಶುಕ್ರವಾರದಂದು ದೇವಿಗೆ ಕೆಂಪು ಹೂಗಳನ್ನು ಸಮರ್ಪಿಸಿ!
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ