AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಡೇ ಕೇರ್ ಕ್ರೌರ್ಯ: ಸಿಸಿಟಿವಿ ದೃಶ್ಯ ಆಧರಿಸಿ ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿ ಇಬ್ಬರು ಅರೆಸ್ಟ್!

ಬೆಂಗಳೂರು ಡೇ ಕೇರ್ ದೌರ್ಜನ್ಯ: ಬೆಂಗಳೂರಿನ ಬ್ರೂಕ್​ಫೀಲ್ಡ್​​ನ ಸೊಸೈಟಿ ಜನರಲ್ ಬೇಬಿ ಡೇ ಕೇರ್ ಸೆಂಟರ್‌ನಲ್ಲಿ ಮಕ್ಕಳ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಎಎಲ್ ಪೊಲೀಸರು ಪ್ರಮುಖ ಆರೋಪಿ ವಿಜಯಲಕ್ಷ್ಮೀಯನ್ನು ಬಂಧಿಸಿದ್ದಾರೆ. ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಜುವೆನೈಲ್ ಜಸ್ಟೀಸ್ (JJ Act) ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಬೆಂಗಳೂರು ಡೇ ಕೇರ್ ಕ್ರೌರ್ಯ: ಸಿಸಿಟಿವಿ ದೃಶ್ಯ ಆಧರಿಸಿ ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿ ಇಬ್ಬರು ಅರೆಸ್ಟ್!
ಸಿಸಿಟಿವಿ ದೃಶ್ಯಗಳು
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Jul 03, 2026 | 11:47 AM

Share

ಮುಖ್ಯಾಂಶಗಳು

  • ಬ್ರೂಕ್​​ಫೀಲ್ಡ್​​ ಡೇ ಕೇರ್ ಮಕ್ಕಳ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿ ವಿಜಯಲಕ್ಷ್ಮೀ ಬಂಧನ.
  • ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಪೊಲೀಸರಿಂದ ಜೆಜೆ ಕಾಯ್ದೆಯಡಿ ಎಫ್‌ಐಆರ್ ದಾಖಲು ಮಾಡಲಾಗಿದೆ.
  • ನಿಯಮ ಉಲ್ಲಂಘಿಸಿದ ಈ ಡೇ ಕೇರ್ ಸೆಂಟರ್ ಅನ್ನು ಈಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಬೆಂಗಳೂರು, ಜುಲೈ 03: ನಗರದ ಪ್ರತಿಷ್ಠಿತ ಬ್ರೂಕ್​ಫೀಲ್ಡ್​​ನಲ್ಲಿರುವ ಸೊಸೈಟಿ ಜನರಲ್ ಬೇಬಿ ಡೇ ಕೇರ್ (Day care case) ಸೆಂಟರ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಎಎಲ್‌ (HAL) ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಆರೋಪಿಗಳ ಉಡಾಫೆ ಉತ್ತರ

ಡೇ ಕೇರ್‌ನಲ್ಲಿ ಮಕ್ಕಳ ಮೇಲೆ ನಡೆದಿರುವ ಹಲ್ಲೆಯ ಸಿಸಿಟಿವಿ ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಿಡಿಯೋದಲ್ಲಿದ್ದ ಮೂವರು ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದ್ದು, ತನಿಖೆ ವೇಳೆ ನಮಗೇನೂ ಗೊತ್ತಿಲ್ಲ ಎಂದು ಆರೋಪಿಗಳು ಉಡಾಫೆಯ ಉತ್ತರ ನೀಡಿದ್ದರು ಎನ್ನಲಾಗಿದೆ. ಆದರೆ, ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಜುವೆನೈಲ್ ಜಸ್ಟೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಿನ್ನೆ ಮೂವರು ಪೋಷಕರಿಂದಲೂ ಪೊಲೀಸರು ದೂರಿಗೆ ಪೂರಕವಾದ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಇನ್ನುಳಿದ ಸಿಬ್ಬಂದಿ ಸ್ಥಳದಲ್ಲಿದ್ದರಾ ಮತ್ತು ಅವರ ಪಾತ್ರವೇನು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ನಡೆದಿದ್ದೇನು?

ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯ ಆವರಣದಲ್ಲಿದ್ದ ಡೇ ಕೇರ್ ಸೆಂಟರ್‌ನಲ್ಲಿ ಎರಡು ವರ್ಷದ ಪುಟ್ಟ ಮಕ್ಕಳ ಮೇಲೆ ನಡೆದಿರುವ ಕ್ರೌರ್ಯ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಅಳುವ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗೆ ಕೂರಿಸಿ ವಾಟರ್ ಜೆಟ್ ಸ್ಪ್ರೇ ಮಾಡುವುದು ಹಾಗೂ ಬಾತ್‌ರೂಮ್‌ನಲ್ಲಿ ಕೂಡಿಹಾಕಿ ವಿಕೃತ ಆನಂದ ಪಡುವಂತಹ ಅಮಾನವೀಯ ದೌರ್ಜನ್ಯ ಇಲ್ಲಿ ದೀರ್ಘಕಾಲದಿಂದ ನಡೆಯುತ್ತಿತ್ತು. ಈ ಬಗ್ಗೆ ಈ ಹಿಂದೆ ಧ್ವನಿ ಎತ್ತಿದ್ದ ಸಿಬ್ಬಂದಿಯನ್ನೇ ಕೆಲಸದಿಂದ ವಜಾಗೊಳಿಸಿ ಸತ್ಯ ಮುಚ್ಚಿಹಾಕಲು ಯತ್ನಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತನಿಖೆಯಿಂದ ಬಯಲಾಗಿದೆ. ಸದ್ಯ ಐದು ಮಂದಿ ಕೇರ್‌ಟೇಕರ್‌ಗಳ ವಿರುದ್ಧ ಕೇಸ್ ದಾಖಲಾಗಿದ್ದು, ಸೆಂಟರ್ ಅನ್ನು ಮುಚ್ಚಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಕುರಿತು ಸಿಎಂಗೆ ಪತ್ರ ಬರೆದು ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ಇದನ್ನೂ ಓದಿ ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯ ವಜಾಗೊಳಿಸಿದ್ದ ಡೇ ಕೇರ್ ಸೆಂಟರ್

‘ಬ್ರ್ಯಾಂಡ್ ಬೆಂಗಳೂರಿಗೂ ಧಕ್ಕೆ’: ಗೃಹ ಸಚಿವರ ಆಕ್ರೋಶ

ಈ ಅಮಾನವೀಯ ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವರು, ಡೇ ಕೇರ್ ಸೆಂಟರ್‌ಗಳ ನಿರ್ವಹಣೆ ಹಾಗೂ ಸುರಕ್ಷತೆಗೆ ಕಟ್ಟುನಿಟ್ಟಾದ ನಿಯಮ ಮತ್ತು ಮಾರ್ಗಸೂಚಿಗಳಿವೆ. ಆದರೆ ಈ ಸೆಂಟರ್‌ನಲ್ಲಿ ಅದನ್ನು ಪಾಲಿಸಿಲ್ಲ. ಇಂತಹ ಘಟನೆಗಳು ಕೇವಲ ಆಯಾ ಕಂಪನಿಯ ಶ್ರೇಯಸ್ಸಿಗೆ ಮಾತ್ರವಲ್ಲ, ಇಡೀ ‘ಬ್ರ್ಯಾಂಡ್ ಬೆಂಗಳೂರು’ ಹೆಸರಿಗೂ ಧಕ್ಕೆ ತರುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:41 am, Fri, 3 July 26

Follow Us
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ