AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಹೆಸರಲ್ಲಿ ದೋಖಾ: ಅಶ್ಲೀಲ ವೆಬ್​​ಸೈಟ್​​ನಲ್ಲಿ ವಿಡಿಯೋ ಕಂಡು ಯುವತಿ ಶಾಕ್​​; ಮಾಜಿ ಲವರ್​​ ವಿರುದ್ಧ ದೂರು

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಾಜಿ ಪ್ರಿಯತಮನಿಂದ ಖಾಸಗಿ ವಿಡಿಯೋ ಲೀಕ್ ಮಾಡಿರುವ ಆರೋಪ ಕೇಳಿಬಂದಿದೆ. ಅಶ್ಲೀಲ ವೆಬ್​​ಸೈಟ್​​ನಲ್ಲಿ ವಿಡಿಯೋ ಕಂಡು ಯುವತಿ ಆಘಾತಗೊಂಡಿದ್ದು, ತಕ್ಷಣ ಪೊಲೀಸರ ಮೊರೆ ಹೋಗಿದ್ದಾಳೆ. ಸದ್ಯ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರೀತಿ ಹೆಸರಲ್ಲಿ ದೋಖಾ: ಅಶ್ಲೀಲ ವೆಬ್​​ಸೈಟ್​​ನಲ್ಲಿ ವಿಡಿಯೋ ಕಂಡು ಯುವತಿ ಶಾಕ್​​; ಮಾಜಿ ಲವರ್​​ ವಿರುದ್ಧ ದೂರು
ಪ್ರಾತಿನಿಧಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Edited By: |

Updated on: Nov 29, 2026 | 5:50 PM

Share

ಮುಖ್ಯಾಂಶಗಳು

  • ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ
  • ಪ್ರೀತಿಯ ಹೆಸರಿನಲ್ಲಿ ಯುವತಿಗೆ ದೋಖಾ
  • ಅಶ್ಲೀಲ ವೆಬ್​​ಸೈಟ್​​ನಲ್ಲಿ ವಿಡಿಯೋ ಕಂಡು ಯುವತಿ ಶಾಕ್

ಬೆಂಗಳೂರು, ನವೆಂಬರ್​​ 29: ಪ್ರೀತಿ ಹೆಸರಿನಲ್ಲಿ ಮಾಜಿ ಪ್ರಿಯತಮನಿಂದ ಯುವತಿಗೆ ಲೈಂಗಿಕ ದೋಖಾ ಎಸಗಿದ್ದು, ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್​​ಸೈಟ್​​ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತಾಗಿ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಡೆದಿದ್ದೇನು?

ಅಭ್ಯುದಯ್ ಪುರೋಹಿತ್​​ ಎಂಬಾತ ಲವ್​ ಮಾಡುವುದಾಗಿ ಹೇಳಿ ಯುವತಿಯ ನಂಬಿಕೆ ಗಳಿಸಿದ್ದ. ಇಬ್ಬರೂ 2023ರಿಂದ 2024ರವರೆಗೆ ಲಿವ್-ಇನ್ ರಿಲೇಷನ್‌ಶಿಪ್​​ನಲ್ಲಿದ್ದರು. ಈ ಅವಧಿಯಲ್ಲಿ ಇಬ್ಬರ ಖಾಸಗಿ ಕ್ಷಣಗಳ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಪ್ರೇಮ ಸಂಬಂಧ ಮುರಿದು ಬಿದ್ದಿತ್ತು.

ವಿಡಿಯೋ ಡಿಲೀಟ್ ಮಾಡುವಂತೆ ಮನವಿ

ಬ್ರೇಕಪ್ ಬಳಿಕ ತಮ್ಮ ಖಾಸಗಿ ವಿಡಿಯೋಗಳನ್ನು ಡಿಲೀಟ್​​ ಮಾಡುವಂತೆ ಯುವತಿ ಮಾಜಿ ಪ್ರಿಯತಮನಿಗೆ ಮನವಿ ಮಾಡಿದ್ದಾಳೆ. ಅದರಂತೆ ಆತ ಕೂಡ ವಿಡಿಯೋಗಳನ್ನು ಡಿಲೀಟ್ ಮಾಡುವುದಾಗಿ ಒಪ್ಪಿಕೊಂಡಿದ್ದ. ಆದರೆ ಆತ ವಿಡಿಯೋಗಳನ್ನು ಡಿಲೀಟ್ ಮಾಡದೆ ಅಶ್ಲೀಲ ವೆಬ್​​ಸೈಟ್​​ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

LIVE TV

ಅಶ್ಲೀಲ ವೆಬ್​​ಸೈಟ್​​ನಲ್ಲಿ ವಿಡಿಯೋ ಕಂಡು ಯುವತಿ ಆಘಾತ

ತನ್ನ ಖಾಸಗಿ ವಿಡಿಯೋಗಳು ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿರುವುದನ್ನು ಕಂಡ ಯುವತಿ ಆಘಾತಕ್ಕೊಳಗಾಗಿದ್ದಾಳೆ. ತಕ್ಷಣವೇ ವಿಡಿಯೋಗಳ ಲಿಂಕ್ ಸಮೇತ ಪೊಲೀಸರ ಮೊರೆ ಹೋಗಿದ್ದು, ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ: ಚಿಕ್ಕೋಡಿ: ಅಕ್ರಮ ಸಂಬಂಧ ಹೊಂದಿದ್ದ ಯುವಕನಿಂದಲೇ ವಿವಾಹಿತೆಯ ಕೊಲೆ, ಕಾರಣ ವಿಚಿತ್ರ

ಇನ್ನು ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ವಿಡಿಯೋಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿರುವ ಆರೋಪದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More
ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಅಡ್ಡಂಡ ಕಾರ್ಯಪ್ಪ ಆಕ್ರೋಶ
ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಅಡ್ಡಂಡ ಕಾರ್ಯಪ್ಪ ಆಕ್ರೋಶ
ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಮಲೆನಾಡಿಗೆ ಬಂದಿಳಿದ ನಟಿ ತ್ರಿಷಾ ಕೃಷ್ಣನ್: ತೀರ್ಥಹಳ್ಳಿ ಶೂಟಿಂಗ್
ಮಲೆನಾಡಿಗೆ ಬಂದಿಳಿದ ನಟಿ ತ್ರಿಷಾ ಕೃಷ್ಣನ್: ತೀರ್ಥಹಳ್ಳಿ ಶೂಟಿಂಗ್
ಡಿಲಿಮಿಟೇಶನ್ ಬಿಲ್ ಫ್ರಾಡ್ ಎಂದ ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಕೌಂಟರ್
ಡಿಲಿಮಿಟೇಶನ್ ಬಿಲ್ ಫ್ರಾಡ್ ಎಂದ ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಕೌಂಟರ್
13ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
13ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
ಆನೆ ದಂತ ಕಳ್ಳಸಾಗಣೆ: ತಮಿಳುನಾಡು ಮೂಲದ ಮೂವರು ಅರೆಸ್ಟ್
ಆನೆ ದಂತ ಕಳ್ಳಸಾಗಣೆ: ತಮಿಳುನಾಡು ಮೂಲದ ಮೂವರು ಅರೆಸ್ಟ್
ರಾಗಿಯಲ್ಲಿ ಕಲ್ಲು, ಮಣ್ಣು ಮಿಶ್ರಣ ಮಾಡ್ತಿದ್ದ ಘಟಕದ ಮೇಲೆ ದಾಳಿ
ರಾಗಿಯಲ್ಲಿ ಕಲ್ಲು, ಮಣ್ಣು ಮಿಶ್ರಣ ಮಾಡ್ತಿದ್ದ ಘಟಕದ ಮೇಲೆ ದಾಳಿ
ಬಿಗ್ ಬಾಸ್ ಮನೆಯಲ್ಲಿ ತಾಂಡವ್ ಡ್ಯಾನ್ಸ್; ಕ್ರೇಜಿಸ್ಟಾರ್ ಶೈಲಿಯಲ್ಲಿ ನೃತ್ಯ
ಬಿಗ್ ಬಾಸ್ ಮನೆಯಲ್ಲಿ ತಾಂಡವ್ ಡ್ಯಾನ್ಸ್; ಕ್ರೇಜಿಸ್ಟಾರ್ ಶೈಲಿಯಲ್ಲಿ ನೃತ್ಯ
ನವೆಂಬರ್ 30 ರಿಂದ ಡಿಸೆಂಬರ್ 6ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 30 ರಿಂದ ಡಿಸೆಂಬರ್ 6ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ರಾಶಿಯವರು ಹೊಸ ಸಂಬಂಧಗಳನ್ನು ಸ್ವಾಗತಿಸಿ
ಇಂದು ರಾಶಿಯವರು ಹೊಸ ಸಂಬಂಧಗಳನ್ನು ಸ್ವಾಗತಿಸಿ