AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cab Price Hike: ಕರ್ನಾಟಕದ ಜನರಿಗೆ ಶಾಕ್​ ಮೇಲೆ ಶಾಕ್​: ಇಂದಿನಿಂದ ಟ್ಯಾಕ್ಸಿ, ಕ್ಯಾಬ್​ ದರ ಹೆಚ್ಚಳ, ಇಲ್ಲಿದೆ ವಿವರ

ಬೆಂಗಳೂರು ಕ್ಯಾಬ್ ದರ ಏರಿಕೆ: ಕೇಂದ್ರ ಸರ್ಕಾರದ ಟೋಲ್ ದರ, ಕಾರು ತಯಾರಿಕಾ ಕಂಪನಿಗಳ ದರ ಏರಿಕೆ ಮತ್ತು ರಾಜ್ಯ ಸರ್ಕಾರದ ಡಿಸೇಲ್ ಮೇಲಿನ ತೆರಿಗೆ ಹೆಚ್ಚಳದಿಂದಾಗಿ ಟೂರ್ಸ್ ಮತ್ತು ಟ್ರಾವೆಲ್ಸ್ ಹಾಗೂ ಕ್ಯಾಬ್ ಸೇವೆಗಳ ದರ ಕೂಡ ಏರಿಕೆ ಆಗಿದ್ದು, ಪ್ರತಿ ಕಿ.ಮೀ 2 ರಿಂದ 5 ರೂ. ಹೆಚ್ಚಳ ಮಾಡಲಾಗಿದೆ. ಇದು ಜನರಿಗೆ ಮತ್ತೊಂದು ಶಾಕ್​ ಉಂಟುಮಾಡಿದೆ.

Cab Price Hike: ಕರ್ನಾಟಕದ ಜನರಿಗೆ ಶಾಕ್​ ಮೇಲೆ ಶಾಕ್​: ಇಂದಿನಿಂದ ಟ್ಯಾಕ್ಸಿ, ಕ್ಯಾಬ್​ ದರ ಹೆಚ್ಚಳ, ಇಲ್ಲಿದೆ ವಿವರ
ಪ್ರಾತಿನಿಧಕ ಚಿತ್ರ
Kiran Surya
| Edited By: |

Updated on:Apr 04, 2025 | 8:17 AM

Share

ಬೆಂಗಳೂರು, ಏಪ್ರಿಲ್​ 04: ಉಕ್ಕು ಮತ್ತು ಆಟೋ ಮೊಬೈಲ್ ದರ ಹೆಚ್ಚಳದ (Price Hike) ಹಿನ್ನೆಲೆ ಕಾರು ತಯಾರಿಕಾ ಕಂಪನಿಗಳ ದರ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರ ಟೋಲ್ ದರ ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರ ಡಿಸೇಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿದೆ. ಇದರ ಎಫೆಕ್ಟ್ ಇದೀಗ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್, ಕ್ಯಾಬ್​ಗಳ (cab) ಮೇಲೆ ಬಿದ್ದಿದ್ದು, ಇಂದಿನಿಂದಲೇ ಪ್ರತಿ ಕಿಮೀ ಮೇಲೆ 2 ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಾಗುತ್ತಿದೆ.

2025ನೇ ವರ್ಷವನ್ನು ದರ ಏರಿಕೆಯ ವರ್ಷ ಅಂದರೆ ತಪ್ಪಾಗಲ್ಲ. ಅದರಲ್ಲೂ ದುಬಾರಿ ದುನಿಯಾನೇ ಓಪನ್ ಆದ ತಿಂಗಳು ಅಂದರೆ ಏಪ್ರಿಲ್ ಎನ್ನಬಹುದು. ಈ ತಿಂಗಳಲ್ಲಿ ಸಾರಿಗೆಗೆ ಸಂಬಂಧಿಸಿದಂತೆ ಟೋಲ್, ಕಾರು ಕಂಪನಿಗಳ ದರ ಏರಿಕೆ, ರಾಜ್ಯ ಸಾರಿಗೆ ಇಲಾಖೆಯ ಕಾರಿನ ಮೇಲೆ ಟ್ಯಾಕ್ಸ್ ಹೆಚ್ಚಳ ಪ್ರಮುಖವಾಗಿ ಡಿಸೇಲ್ ಮೇಲೆ ಮಾರಾಟ ತೆರಿಗೆ ಹೆಚ್ವಳ, ನಾಲ್ಕು ನಾಲ್ಕು ಬೆಲೆ ಏರಿಕೆಯಿಂದ ಕಂಗಲಾಗಿರುವ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್ ಅಸೋಸಿಯೇಷನ್, ಕ್ಯಾಬ್ ಮಾಲೀಕರು ಮತ್ತು ಚಾಲಕರ ಅಸೋಸಿಯೇಷನ್​ಗಳು ಪ್ರತಿ ಕಿಮೀಗೆ 2 ರಿಂದ 5 ರೂ. ವರೆಗೆ ಹೆಚ್ಚಳ ಮಾಡಲಾಗಿದೆ ಇಲ್ಲಾಂದ್ರೆ ನಾವು ಉದ್ಯಮ ನಡೆಸೋದು ಕಷ್ಟ ಆಗುತ್ತದೆ ಅಂತಿದ್ದಾರೆ.

ಇದನ್ನೂ ಓದಿ: Coffee Tea Price in Bangalore: ಸಾಕಾ, ಬೇಕಾ… ಹಾಲಿನ ದರ 4 ರೂ. ಹೆಚ್ಚಾದ್ರೆ ಕಾಫಿ, ಚಹಾ ಬೆಲೆ 5 ರೂ.ವರೆಗೆ ದುಬಾರಿ

ಇದನ್ನೂ ಓದಿ
Image
ಕಲ್ಯಾಣ ಕರ್ನಾಟಕ ರೈತರ 7 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ
Image
ಹಾಲಿನ ಬೆಲೇಲಿ ರೈತರಿಗೆ ಸಿಗೋದೆಷ್ಟು, ಸರ್ಕಾರದ ಪಾಲೆಷ್ಟು? ಇಲ್ಲಿದೆ ವಿವರ
Image
ಮತ್ತೆ ಬೆಲೆ ಏರಿಕೆ ಬರೆ:ನಂದಿನಿ ಹಾಲಿನ ದರ ಏರಿಕೆಗೆ ಸಂಪುಟ ಗ್ರೀನ್ ಸಿಗ್ನಲ್
Image
ಜೇಬಿಗೆ ಬೀಳಲಿದೆ ಕತ್ತರಿ: ಒಂದು ಕಪ್ ಕಾಫಿ ಬೆಲೆ 5 ರೂ. ಏರಿಕೆ ಸಾಧ್ಯತೆ

ಇನ್ನೂ ಕ್ಯಾಬ್ಸ್ ಮತ್ತು ಟ್ರಾವೆಲ್ಸ್ ವಾಹನಗಳ ಕಿಮೀ ದರ ಏರಿಕೆಗೆ ಪ್ರಮುಖ ಕಾರಣ ಅಂದರೆ ಈಗಾಗಲೇ ‌ಕೇಂದ್ರ ಸರ್ಕಾರ ಟೋಲ್ ದರವನ್ನು 5% ರಷ್ಟು ಹೆಚ್ಚಳ ಮಾಡಿದೆ. ವಾಹನ ತಯಾರಿಕಾ ಕಂಪನಿಗಳು ಪ್ರತಿ ಕಾರಿನ ಮೇಲೆ 3% ರಿಂದ 4% ರಷ್ಟು ದರ ಹೆಚ್ಚಳ ಮಾಡಿದೆ. ಇತ್ತ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ಕಾರುಗಳಿಗೆ ಬರೋಬ್ಬರಿ 5% ರಷ್ಟು ಲೈಫ್ ಟೈಮ್ ಟ್ಯಾಕ್ಸ್ 1% ರಷ್ಟು ಸೆಸ್ ವಿಧಿಸಿದೆ. ಈ ಎಲ್ಲಾ ದರ ಏರಿಕೆಯಿಂದ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಅಸೋಸಿಯೇಷನ್ ತಮ್ಮ ಕ್ಯಾಬ್​ಗಳ ಕಿಮೀ ದರ ಏರಿಕೆ ಮಾಡಿದೆ.

ಹತ್ತು ಲಕ್ಷ ರೂ. ಕಾರು ಖರೀದಿ ಮಾಡಿದರೆ, ಹೆಚ್ಚುವರಿಯಾಗಿ 30 ರಿಂದ 40 ಸಾವಿರ ರೂ ಪಾವತಿ ಮಾಡಬೇಕು. 20 ಲಕ್ಷ ರೂ ಕಾರು ಖರೀದಿ ಮಾಡಿದರೆ ಹೆಚ್ಚುವರಿಯಾಗಿ 60 ರಿಂದ 80 ಸಾವಿರ ರೂ. ಪಾವತಿ ಮಾಡಬೇಕು. ಹತ್ತು ಲಕ್ಷ ರೂ. ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದರೆ ರಾಜ್ಯ ಸಾರಿಗೆ ಇಲಾಖೆಗೆ ಲೈಫ್ ಟೈಮ್ ಟ್ಯಾಕ್ಸ್ ಹೆಸರಲ್ಲಿ ಹೆಚ್ಚುವರಿಯಾಗಿ 50 ರಿಂದ 60 ಸಾವಿರ ರೂ ಪಾವತಿ ಮಾಡಬೇಕು.

ಪ್ರಯಾಣಿಕರು ಹೇಳುವುದೇನು?

ಈ ಬಗ್ಗೆ ಪ್ರಯಾಣಿಕ ಧನುಷ್ ಎಂಬುವವರು ಪ್ರತಿಕ್ರಿಯಿಸಿದ್ದು, ಎಲ್ಲಾ ದರ ಏರಿಕೆ ಆಗಿದೆ ಹಾಗಾಗಿ ಕ್ಯಾಬ್ ಮತ್ತು ಟ್ರಾವೆಲ್ಸ್ ಅವರು ದರ ಏರಿಕೆ ಮಾಡಿದ್ದಾರೆ. ಇದರಿಂದ ಬೆಂಗಳೂರಿನ ಜನರಿಗೆ ತುಂಬಾ ಸಮಸ್ಯೆ ಆಗಲಿದೆ. ಸರ್ಕಾರ ಡಿಸೇಲ್ ದರ ಕಡಿಮೆ ಮಾಡಿದರೆ ಒಳ್ಳೆಯದು ಎಂದಿದ್ದಾರೆ.

ಇದನ್ನೂ ಓದಿ: ನಂದಿನಿ ಹಾಲಿನ ಬೆಲೆ ಏರಿಕೆ: ರೈತರಿಗೆ ಸಿಗೋದೆಷ್ಟು, ಲಾಭದಲ್ಲಿ ಸರ್ಕಾರದ ಪಾಲೆಷ್ಟು? ಇಲ್ಲಿದೆ ಮಾಹಿತಿ

ಒಟ್ಟಿನಲ್ಲಿ ಡಿಸೇಲ್ ದರದ ಎಫೆಕ್ಟ್ ಎಲ್ಲಾ ವರ್ಗದ ಮೇಲೂ ತಟ್ಟುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಯಾವ ಯಾವ ವಸ್ತುಗಳ ಮೇಲೆ ದರ ಏರಿಕೆ ಆಗಲಿದೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:13 am, Fri, 4 April 25