ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಬಿಜೆಪಿ ನಾಯಕರಿಗೆ ಹೊಸದೇನೂ ಅಲ್ಲ: ಎಎಸ್ ಪೊನ್ನಣ್ಣ, ಶಾಸಕ
ಪ್ರಕರಣದಲ್ಲಿ ಈಗಾಗಲೇ ಎಫ್ಐರ್ ಆಗಿದೆ, ಪೊಲೀಸರು ತನಿಖೆ ಮಾಡುತ್ತಾರೆ ಮತ್ತು ಸತ್ಯವನ್ನು ಬಯಲಿಗೆಳೆಯುತ್ತಾರೆ, ಬಿಜೆಪಿ ನಾಯಕರು ಮಡಿಕೇರಿಯ ಡಿಸಿಪಿಯವರಿಗೆ ಫೋನ್ ಮಾಡುವ ಅವಶ್ಯಕತೆಯೇನಿದೆ? ತಾನು ಒಮ್ಮೆಯೂ ವಿನಯ್ ಸೋಮಯ್ಯ ಅವರೊಂದಿಗೆ ಮಾತಾಡಿಲ್ಲ, ಇನ್ನು ಅವರಿಗೆ ಮಾನಸಿಕ ಕಿರುಕುಳ ನೀಡುವ ಸಂದರ್ಭ ಹೇಗೆ ಸೃಷ್ಟಿಯಾಗುತ್ತದೆ ಎಂದು ಪೊನ್ನಣ್ಣ ಪ್ರಶ್ನಿಸಿದರು.
ಬೆಂಗಳೂರು, ಏಪ್ರಿಲ್ 4: ಬಿಜೆ;ಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮತ್ತು ಸಿಎಂ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಹೆಸರು ಡೆತ್ ನೋಟ್ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಸಾವಿನ ಮನೆಯಲ್ಲಿ ರಾಜಕಾರಣ ಬಿಜೆಪಿಗೆ ಹೊಸದೇನಲ್ಲ, ಜನರ ಭಾವನೆಗಳನ್ನು ಕೆರಳಿಸಿ ಬದುಕು ಕಟ್ಟಿಕೊಂಡಿರುವ ನಾಯಕರೆಂದರೆ ಬಿಜೆಪಿಯವರು, ವಿನಯ್ ಬೇರೆ ಪಕ್ಷದವರಾದರೂ ಅವರು ಕುಟುಂಬದವರ ಜೊತೆ ಮಾತಾಡಿ ಸಾಂತ್ವನ ಹೇಳಿದ್ದೇನೆ, ಕುಟುಂಬಕ್ಕೆ ಈಗ ಅಗತ್ಯವಿರೋದು ಅದು, ಬಿಜೆಪಿಯವರು ವಿನಾಕಾರಣ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಸಿಎಂ ಕಾನೂನು ಸಲಹೆಗಾರರ ವಿರುದ್ಧ ಗಂಭೀರ ಆರೋಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 04, 2025 06:31 PM