ವಿನಯ್ ಸೋಮಯ್ಯ ಸಾವಿಗೆ ನ್ಯಾಯ ಸಿಗೋವರೆಗೆ ಹೋರಾಟ, ಶಾಸಕರ ವಿರುದ್ಧ ಎಫ್ಐಅರ್ ದಾಖಲಾಗಬೇಕು: ಅಶೋಕ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಪೊಲೀಸ್ ಠಾಣೆಗಳೆಲ್ಲ ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ, ಪೊಲೀಸರು ನಿರಂತರವಾಗಿ ಒತ್ತಡದಲ್ಲಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಿದೆ, ಯಾದಗಿರಿಯ ಪರಶುರಾಮ್, ಕಲಬುರಗಿಯ ಸಚಿನ್, ಬೆಳಗಾವಿಯ ರುದ್ರಣ್ಣ, ವಾಲ್ಮೀಕಿ ನಿಗಮದ ಚಂದ್ರಶೇಖರ್ ಮೊದಲಾದವರ ಅತ್ಮಹತ್ಯೆ ಪ್ರಕರಣಗಳು ಕಣ್ಣ ಮುಂದಿವೆ ಎಂದು ಅಶೋಕ ಹೇಳಿದರು.
ಬೆಂಗಳೂರು, ಏಪ್ರಿಲ್ 4: ವಿನಯ್ ಸೋಮಯ್ಯ ಅತ್ಮಹತ್ಯೆ ಪ್ರಕರಣ ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ ಮತ್ತು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ನಗರದಲ್ಲಿಂದು ಮಾತಾಡಿದ ವಿಪಕ್ಷ ನಾಯಕ ಅರ್ ಅಶೋಕ (R Ashoka) ಇಬ್ಬರು ಶಾಸಕರು, ಶಾಸಕನ ಆಪ್ತ ತನ್ನೆರಾ ಮಹೀನ್ ಮತ್ತು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಸಾವಿಗೆ ಕಾರಣ ಡೆತ್ ನೋಟ್ನಲ್ಲಿ ವಿನಯ್ ಬರೆದಿದ್ದಾರೆ. ವಿನಯ್ ಮತ್ತು ಅವರ ಪತ್ನಿ-ಇಬ್ಬರೂ ವಿದ್ಯಾವಂತರು, ಕೊಡಗಿನ ಎಸ್ಪಿ ಬೆಂಗಳೂರುವರೆಗೆ ಬಂದು ವಿನಯ್ಗೆ ಮಾನಸಿಕ ಕಿರುಕುಳ ನೀಡಿದ್ದಾನೆ, ಸುಮಾರು ಎರಡು ತಿಂಗಳು ಹಿಂದೆ ವಿನಯ್ ಅವರು ಅಭಿವೃದ್ಧಿ ಕಾಮಗಾರಿಯೊಂದನ್ನು ಸೋಶಿಯಲ್ ಮೀಡಿಯದಲ್ಲಿ ಅಪ್ಲೋಡ್ ಮಾಡಿದಾಗಿನಿಂದ ಶಾಸಕ, ಶಾಸಕನ ಆಪ್ತ ಮತ್ತು ಎಸ್ ಪಿ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಅಶೋಕ ಹೇಳಿದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಸಿಎಂ ಕಾನೂನು ಸಲಹೆಗಾರರ ವಿರುದ್ಧ ಗಂಭೀರ ಆರೋಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ