ವಕ್ಫ್ ಮಸೂದೆಯನ್ನು ರಾಜಕೀಯ ಉದ್ದೇಶಗಳಿಗೆ ಜಾರಿಗೊಳಿಸಲಾಗಿದೆ, ರಾಷ್ಟ್ರ ಹಿತಕ್ಕಾಗಿ ಅಲ್ಲ: ಪರಮೇಶ್ವರ್
ನಿನ್ನೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಕ್ಫ್ ಭೂಕಬಳಿಕೆಯ ಆರೋಪಗಳನ್ನು ಮಾಡಿರುವುದಕ್ಕೆ ಉತ್ತರಿಸಿದ ಪರಮೇಶ್ವರ್, ಅರೋಪಗಳಿಗೆ ಖರ್ಗೆಯವರೇ ಸದನದಲ್ಲಿ ಉತ್ತರಿಸಿದ್ದಾರೆ, ಅರೋಪ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಅವರು ಹೇಳಿರುವುದರಿಂದ ತಾನೇನೂ ಹೇಳುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು, ಏಪ್ರಿಲ್ 4: ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಗುರುವಾರ ರಾತ್ರಿ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಪಾಸಾಗಿರುವುದಕ್ಕೆ ತಾನು ನಿನ್ನೆಯೇ ಪ್ರತಿಕ್ರಿಯೆ ನೀಡಿಯಾಗಿದೆ ಎಂದು ಹೇಳಿದರು. ವಿಧೇಯಕದ ಪರವಾಗಿ 288 ಮತಗಳು ಬಿದ್ದಿವೆ, ಈ ಮಸೂದೆಯನ್ನು ರಾಜಕೀಯ ಕಾರಣಗಳಿಗಾಗಿ ಸಂಸತ್ತಿನಲ್ಲಿ ಮಂಡಿಸಿ ಪಾಸು ಮಾಡಿಸಲಾಗಿದೆಯೇ ವಿನಃ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಅಲ್ಲ, ಮಸೂದೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸುಪ್ರೀಮ್ ಕೋರ್ಟ್ ಕದ ತಟ್ಟುವುದಾಗಿ ಹೇಳಿದ್ದರೆ ಅದು ಅವರ ವಿವೇಚನೆಗೆ ಬಿಟ್ಟ ಸಂಗತಿಯಾಗಿದೆ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ರಾಜಣ್ಣ ಮನವಿ ನೀಡಿದ್ದಾರೆ, ಸಿಎಂ ಜೊತೆ ಚರ್ಚೆ ನಡೆಸಿ ಯಾವ ತನಿಖೆ ನಡೆಸಬೇಕೆಂದು ತೀರ್ಮಾನ: ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ