ರಾಜಣ್ಣ ಮನವಿ ನೀಡಿದ್ದಾರೆ, ಸಿಎಂ ಜೊತೆ ಚರ್ಚೆ ನಡೆಸಿ ಯಾವ ತನಿಖೆ ನಡೆಸಬೇಕೆಂದು ತೀರ್ಮಾನ: ಪರಮೇಶ್ವರ್
ರಾಜಣ್ಣ ನೀಡಿರುವ ಲಿಖಿತ ಅರ್ಜಿಯನ್ನು ಪರಮೇಶ್ವರ್ ಮನವಿ ಅಂತ ಹೇಳಿದ್ದು ಆಶ್ಚರ್ಯ ಮೂಡಿಸಿತು. ಆದರೆ ಅದಕ್ಕೆ ಅವರು ಸ್ಪಷ್ಟನೆ ನೀಡಿದರು. ರಾಜಣ್ಣ ಅವರು ತಮ್ಮ ದೂರನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲೇ ಸಲ್ಲಿಸಬೇಕು, ತನಗೆ ನೀಡಲಾಗದು, ಹಾಗಾಗಿ ಅವರು ತನಗೆ ಮನವಿಯನ್ನು ನೀಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ಮನವಿಯಲ್ಲಿ ಏನಿದೆ ಅನ್ನೋದನ್ನು ಹೇಳಲಿಲ್ಲ!
ಬೆಂಗಳೂರು, 25 ಮಾರ್ಚ್: ಹನಿ ಟ್ರ್ಯಾಪ್ ಮಾಡಲು ನಡೆದಿರುವ ಪ್ರಯತ್ನಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಇಂದು ಸಾಯಂಕಾಲ ಗೃಹ ಸಚಿವ ಜಿ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ ಮನವಿಯೊಂದನ್ನು ಸಲ್ಲಿಸಿದರು. ಅವರು ಮನವಿ ಕೊಟ್ಟಾದ ಮೇಲೆ ಇಬ್ಬರೂ ಸಚಿವರು ಮಾಧ್ಯಮಗಳ ಮುಂದೆ ಹಾಜರಾದರು. ರಾಜಣ್ಣ ನೀಡಿರುವ ಮನವಿಯಲ್ಲಿ ಏನಿದೆ ಅಂತ ಸಾರ್ವಜನಿಕಗೊಳಿಸಲಾಗಲ್ಲ, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನ ತಜ್ಞರ ಜೊತೆ ಸಮಾಲೋಚನೆ ನಡೆಸಿ ಪ್ರಕರಣವನ್ನು ಯಾವ ಹಂತದ ಮತ್ತು ಯಾವ ಮಟ್ಟದ ತನಿಖೆಗೆ ಒಪ್ಪಿಸಬೇಕೆನ್ನುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪೋನ್ ಟ್ಯಾಪ್ ಆಗುತ್ತಿದೆಯೆಂದು ವಿಪಕ್ಷ ನಾಯಕ ಅಶೋಕ ಇದುವರೆಗೆ ದೂರು ದಾಖಲಿಸಿಲ್ಲ: ಪರಮೇಶ್ವರ್
Latest Videos