ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ಪತ್ನಿ ಅಕ್ಷಿತಾ ಅವರು ಮಾರ್ಚ್ 24ರಂದು ಬಸವೇಶ್ವರನಗರ ಪೊಲೀಸ್ ಠಾಣೆಗೆ ಫೈಬರ್ ಮಚ್ಚು ತಂದುಕೊಟ್ಟಿದ್ದರು. ಅದು ನಕಲಿ ಮಚ್ಚು ಎಂಬುದು ತನಿಖೆ ವೇಳೆ ಗೊತ್ತಾಯಿತು. ಅಸಲಿ ಮಚ್ಚು ಪತ್ತೆ ಮಾಡುವ ಸಲುವಾಗಿ ಮತ್ತೆ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಗಿದೆ. ವಿಚಾರಣೆಯಲ್ಲಿ ಭಾಗಿಯಾದ ಅವರು ವಾಪಸ್ ತೆರಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮಾಜಿ ಸ್ಪರ್ಧಿ ರಜತ್ ಕಿಶನ್ (Rajath Kishan) ಮಾಡಿದ ತಪ್ಪಿಗೆ ಅವರ ಪತ್ನಿ ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ. ನಿಷೇಧಿತ ಮಾರಕಾಸ್ತ್ರ ಹಿಡಿದು ವಿನಯ್ ಗೌಡ (Vinay Gowda) ಜೊತೆ ರಜತ್ ಅವರು ರೀಲ್ಸ್ ಮಾಡಿದ್ದರು. ಅವರು ಈಗ ಪೊಲೀಸರ ಅತಿಥಿ ಆಗಿದ್ದಾರೆ. ರೀಲ್ಸ್ಗೆ ಬಳಸಿದ್ದ ಮಚ್ಚಿಗಾಗಿ ಪೊಲೀಸರು ಹುಡುಕಾಟ ನಡೆದಿದ್ದಾರೆ. ರಜತ್ ಪತ್ನಿ ಅಕ್ಷಿತಾ (Rajath Kishan wife Akshita) ಅವರು ಮಾ.24ರಂದು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಫೈಬರ್ ಮಚ್ಚನ್ನು ತಂದುಕೊಟ್ಟಿದ್ದರು. ಅದು ನಕಲಿ ಮಚ್ಚು ಎಂಬುದು ತನಿಖೆಯಿಂದ ಗೊತ್ತಾಯಿತು. ರೀಲ್ಸ್ಗೆ ಬಳಸಿದ ಅಸಲಿ ಮಚ್ಚು ಪತ್ತೆ ಮಾಡುವ ಸಲುವಾಗಿ ಅಕ್ಷಿತಾ ಅವರನ್ನು ಮತ್ತೆ ಪೊಲೀಸ್ ಠಾಣೆಗೆ ಕರೆಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

