ಮದ್ಯವನ್ನು ಕಿರಾಣಾ ಅಂಗಡಿಗಳಿಗೆ ಮಾರದಂತೆ ನಂಜನಗೂಡು ವೈನ್ ಶಾಪ್ ಮಾಲೀಕರಿಗೆ ಕಟು ಎಚ್ಚರಿಕೆ
ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮಾರಾಟದ ಪ್ರವರ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಊರಲ್ಲಿರುವ ಮದ್ಯದ ಅಂಗಡಿಯಿಂದ ಮದ್ಯ ಖರೀದಿಸುವ ಕಿರಣಾ ಅಂಗಡಿ ಮಾಲೀಕರು ಪ್ರತಿ ಬಾಟಲ್ ಅಥವಾ ಟೆಟ್ರಾ ಪ್ಯಾಕ್ ಹಿಂದೆ ತಮ್ಮ ₹20-30 ಅಥವಾ ₹50 ಮಾರ್ಜಿನ್ (ಲಾಭಾಂಶ) ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ಕುಡಿಯವವನಿಗೆ ಖೋತಾ ಬಿಟ್ಟರೆ ಉಳಿದವರಿಗೆಲ್ಲ ಲಾಭ!
ಮೈಸೂರು, ಏಪ್ರಿಲ್ 4: ರಾಜ್ಯದ ನಾನಾಭಾಗಗಳಲ್ಲಿ ಮದ್ಯ ಖರೀದಿಸಬೇಕಾದರೆ ವೈನ್ ಶಾಪ್, ಬಾರ್ ಗೆ ಹೋಗುವ ಅವಶ್ಯಕತೆಯಿಲ್ಲ, ಅದು ಈಗ ಕಿರಾಣಿ ಅಂಗಡಿ ಮತ್ತು ಚಿಲ್ಲರೆ ಅಂಗಡಿಗಳಲ್ಲೂ ಸಿಗುತ್ತಿದೆ. ವಿಷಯ ಮೊನ್ನೆ ಅಧಿವೇಶನದಲ್ಲೂ ಚರ್ಚೆಯಾಯಿತು. ಇದೇ ಹಿನ್ನೆಲೆಯಲ್ಲಿ ಮೈಸೂರು ಗ್ರಾಮಾಂತರ ಉಪ ಆಯುಕ್ತೆ ಡಾ ಮಾಹಾದೇವಿ ಬಾಯಿ (Dr Mahadevi bai) ನಂಜನಗೂಡಿನ ಬಾರ್ ಮತ್ತು ವೈನ್ ಶಾಪ್ ಮಾಲೀಕರೊಂದಿಗೆ ಸಭೆ ನಡೆಸಿ ಬೀರು ಬ್ರ್ಯಾಂಡಿಯನ್ನು ಗ್ರಾಹಕರಿಗೆ ಹೊರತುಪಡಿಸಿ ಕಿರಾಣಾ ಮತ್ತು ಚಿಲ್ಲರೆ ಅಂಗಡಿಗಳಿಗೆ ಮಾರಕೂಡದೆಂದು ಎಚ್ಚರಿಸಿದರು. ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಅವರು ಹೇಳಿದರು.
ಇದನ್ನೂ ಓದಿ: ವೈನ್ ಶಾಪ್ ಬದಲಿಗೆ ಸ್ವೀಟ್ ಅಂಗಡಿ ಸೀಲ್ ಡೌನ್! ಅಬ್ಕಾರಿ ಇಲಾಖೆ ಅಧಿಕಾರಿಗಳ ಎಡವಟ್ಟು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ