ಬೆಳಗಾವಿಯಲ್ಲಿ ರಾಜ್ಯಪಾಲರ ಹೆಸರಲ್ಲಿ ಖರೀದಿಯಾಗಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲಾಯಿತೇ?
ಭೂಕಬಳಿಕೆ ಆರೋಪದ ಬಗ್ಗೆ ಬೈಲಹೊಂಗಲ ವಿಭಾಗಾಧಿಕಾರಿ ಪ್ರಭಾವತಿ ಅವರನ್ನು ಕೇಳಿದಾಗ ತಾನು ಯಾವುದೇ ತಿದ್ದುಪಡಿಯನ್ನು ಮಾಡಿಲ್ಲ, ತಮ್ಮ ಕಚೇರಿಗೆ ಬಂದಿದ್ದ ಫೈಲನ್ನು 2023 ರಲ್ಲೇ ಜಿಲ್ಲಾಧಿಕಾರಿಯವರಿಗೆ ಕಳಿಸಿರುವುದಾಗಿ ಅವರು ಹೇಳುತ್ತಾರೆ. ಅಂದರೆ ಆಗ ಬೆಳಗಾವಿ ಡಿಸಿಯಾಗಿದ್ದ ನಿತೇಶ್ ಪಾಟೀಲ್ ರಾಜ್ಯಪಾಲರ ಹೆಸರಲ್ಲಿದ್ದ ಜಮೀನನ್ನು ಕಾನೂನುಬಾಹಿರವಾಗಿ ಪೋಡಿ ಮಾಡಿದ್ರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಬೆಳಗಾವಿ, ಏಪ್ರಿಲ್ 4: ಜಮೀನು ಯಾರ ಹೆಸರಿಗಿದ್ದರೇನು, ಲ್ಯಾಂಡ್ ಶಾರ್ಕ್ಗಳಿಗೆ ಹೆಸರು ಅಡ್ಡಿಯಾಗದು ಅಥವಾ ಕಬಳಿಸಲು ಹೆದರಿಕೆಯಾಗದು. ವಿಷಯವೇನೆಂದರೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ (Mallammana Belavadi) ರಾಜ್ಯಪಾಲರ ಹೆಸರಲ್ಲಿ ಬಡಜನರಿಗೆ ನಿವೇಶನ ಮಾಡಿ ಹಂಚುವುದಕ್ಕೆ ಖರೀದಿಯಾಗಿದ್ದ ಕೋಟ್ಯಾಂತರ ರೂ. ಬೆಲೆಬಾಳುವ ಐದೂವರೆ ಎಕರೆ ಜಮೀನು ಪ್ರಭಾವಿ ವ್ಯಕ್ತಿಗಳು ಕಬಳಿಕೆ ಮಾಡಿಕೊಂಡಿದ್ದಾರೆಂದು ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಬಲವಾದ ಆರೋಪ ಮಾಡಿದ್ದಾರೆ. ಜಮೀನು ಪಹಣಿಯಲ್ಲಿ ತಿದ್ದುಪಡಿ ಮಾಡುವ ನೆಪದಲ್ಲಿ ಭೂಮಿಯನ್ನು ಕಬಳಿಸಲಾಗಿದೆ ಎಂದು ಗಡಾದ್ ಹೇಳುತ್ತಾರೆ.
ಇದನ್ನೂ ಓದಿ: ಕೇವಲ ವಕ್ಫ್ ಭೂಕಬಳಿಕೆ ವಿರುದ್ಧ ನಮ್ಮ ಹೋರಾಟ ಬೇರೆ ಯಾರ ವಿರುದ್ಧವೂ ಅಲ್ಲ: ಬಸನಗೌಡ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 04, 2025 10:44 AM
Latest Videos

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ

ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
