ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಕಾವಿ ಸಾಕಾಗಿದೆ, ಖಾದಿ ಬೇಕಾಗಿದೆ: ವಿಜಯಾನಂದ್ ಕಾಶಪ್ಪನವರ್
ಮೃತ್ಯುಂಜಯ ಸ್ವಾಮೀಜಿಯವರಿಗೆ ಕಾವಿ ತೊಟ್ಟು ಸಾಕಾಗಿದೆ ಮತ್ತು ಖಾದಿ ತೊಡುವ ಗುರಿ ಇಟ್ಟುಕೊಂಡಂತಿದೆ, ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೂಡಿ ಅವರು ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ, ಸಮಾಜಕ್ಕೆ ಪಕ್ಷಾತೀತ ಗುರುಗಳು ಬೇಕಾಗಿದ್ದಾರೆ, ಒಂದು ಪಕ್ಷದ ಹಿಂದೆ ಒಬ್ಬ ರಾಕಾರಣಿಯ ಹಿಂದೆ ನಿಂತುಕೊಳ್ಳುವ ಸ್ವಾಮೀಜೀ ಸಮಾಜಕ್ಕೆ ಬೇಡ ಎಂದು ಕಾಶಪ್ಪನವರ್ ಹೇಳಿದರು.
ಹುಬ್ಬಳ್ಳಿ, ಏಪ್ರಿಲ್ 11: ಕೂಡಲಸಂಗಮದ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಮತ್ತು ಪಂಚಾಮಸಾಲಿ ಸಮಾಜ ನಡುವಿನ ತಿಕ್ಕಾಟ ಮುಂದುವರಿದಿದೆ. ನಗರದಲ್ಲಿಂದು ಸಮಾಜದವರಿಂದು ಸಭೆ ನಡೆಸಿ ಕೆಲ ನಿರ್ಣಯಗಳನ್ನು ತೆಗೆದುಕೊಂಡ ಬಳಿಕ ಮಾತಾಡಿದ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಮಠಾಧೀಶರು ಸಮಾಜಕ್ಕಿಂತ ದೊಡ್ಡವರಲ್ಲ, ಸಮಾಜದವರು ಸೇರಿ ಅವರನ್ನು ಪೀಠಾಧ್ಯಾಕ್ಷ ಮಾಡಿರುತ್ತಾರೆ ಅನ್ನೋದನ್ನು ಮರೆಯಬಾರದು, 2008 ರಲ್ಲಿ ಮೃತ್ಯುಂಜಯ ಸ್ವಾಮೀಜಿಯವರನ್ನು ಒಂದು ಉದ್ದೇಶದೊಂದಿಗೆ ಕೂಡಲಸಂಗಮ ಪೀಠಕ್ಕೆ ತರಲಾಯಿತು, ಈ ಸಭೆಯಲ್ಲಿ ಹಾಜರಿರುವ ಅನೇಕರು ಸ್ವಾಮೀಜಿಯವರನ್ನು ಮಠಾಧೀಶರಾಗಿ ಮಾಡಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಯತ್ನಾಳ್ಗೆ ಬೆಂಬಲ: ಜಯ ಮೃತ್ಯುಂಜಯ ಸ್ವಾಮೀಜಿಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ