AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಾನಂದ ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ

ವಿಜಯಾನಂದ ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2024 | 8:41 PM

ರಾಜಕೀಯ ವಿಷಯಗಳಲ್ಲಿ ಸ್ವಾಮೀಜಿಗಳು, ಮಠಾಧೀಶರು, ಧಾರ್ಮಿಕ ಮುಖಂಡರು ಮಾತಾಡುತ್ತಿರುವ ಪ್ರಸಂಗಗಳು ಹೆಚ್ಚುತ್ತಿವೆ. ಎಲ್ಲ ಸಮುದಾಯಗಳ ಮಠಗಳಿರುತ್ತವೆ ಮತ್ತು ಮಠಾಧೀಶರಿರುತ್ತಾರೆ. ಅವರೆಲ್ಲ ತಮ್ಮ ತಮ್ಮ ಸಮುದಾಯದ ನೇತಾರ ಮುಖ್ಯಮಂತ್ರಿಯಾಗಲಿ ಅನ್ನಲಾರಂಭಿಸಿದರೆ ಹೆಚ್ಚುವರಿ ಡಿಸಿಎಂಗಳ ಬದಲು ಹೆಚ್ಚುವರಿ ಸಿಎಂಗಳ ಬೇಡಿಕೆ ಮುನ್ನೆಲೆಗೆ ಬರುತ್ತದೆ!

ಬಾಗಲಕೋಟೆ: ಸಿಎಂ ಯಾರಾಗಬೇಕೆಂಬ ಚರ್ಚೆಗೆ ಮತ್ತೊಬ್ಬ ಸ್ವಾಮಿಗಳ ಎಂಟ್ರಿಯಾಗಿದೆ. ಜಿಲ್ಲೆಯ ಇಳ್ಕಲ್ ತಾಲ್ಲ್ಲೂಕಿನ ನಂದವಾಡಗಿ ವೀರಶೈವ ಲಿಂಗಾಯತ ಮಠದ ಅಭಿನವ ಚನ್ನಬಸಬವ ಶಿವಾಚಾರ್ಯರು ಚರ್ಚೆಯಲ್ಲಿ ಧುಮುಕಿರುವ ಹೊಸ ಸ್ವಾಮೀಜಿ! ಇವರು ಹೇಳುವ ಪ್ರಕಾರ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ರಾಜ್ಯದ ಮುಖ್ಯಮಂತ್ರಿಯಾಗಲು ಎಲ್ಲ ಆಯಾಮಗಳಿಂದ ಅರ್ಹರು, ಅವರನ್ನೇ ಮುಂದಿನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಬೇಕು. ರಾಜ್ಯದ ಚಾಮರಾಜನಗರದಿಂದ ಬೀದರ್ ವರೆಗೆ ಕಾಶಪ್ಪನವರ್ ಅವರು ಸಂಘಟನಾ ಕೆಲಸವನ್ನು ಬಹಳ ಶ್ರಮವಹಿಸಿ ಮಾಡಿದ್ದಾರೆ ಮತ್ತು ರಾಜ್ಯದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ಅವರು ಸಮಾಜದ ಕಾರ್ಯಕ್ಕಾಗಿಯೂ ರಾಜ್ಯದೆಲ್ಲೆಡೆ ಓಡಾಡಿದ್ದಾರೆ. ಬೇರೆ ಬೇರೆ ಜಿಲ್ಲೆಗಳ ಜನ ಕಾಶಪ್ಪನವರ್ ಬಗ್ಗೆ ಮಾತಾಡುತ್ತಿದ್ದುದ್ದು ಕೇಳಿ ನಮಗೆ ಆಶ್ಚರ್ಯವಾಗುತಿತ್ತು ಎಂದು ಸ್ವಾಮೀಜಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಖ್ಯಮಂತ್ರಿ ಸಿದ್ದರಾಮಯ್ಯರೆಡೆ ಶಾಸಕ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?