ಮುಖ್ಯಮಂತ್ರಿ ಸಿದ್ದರಾಮಯ್ಯರೆಡೆ ಶಾಸಕ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?

ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತ್ನಿ ವೀಣಾ ಕಾಶಪ್ಪನವರ್ ಅವರಿಗೆ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಸಿಗದೇ ಹೋಗಿದ್ದು ಪತಿ-ಪತ್ನಿ ಇಬ್ಬರಲ್ಲಿ ಬಹಳ ಬೇಸರ ಮೂಡಿಸಿದೆ. ಟಿಕೆಟ್​ಗಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಪಾರವಾಗಿ ನೆಚ್ಚಿಕೊಂಡಿದ್ದು ಸುಳ್ಳಲ್ಲ. ಆದರೆ ಟಿಕೆಟ್ ಸಚಿವ ಶಿವಾನಂದ ಪಾಟೀಲ್ ಮಗಳಿಗೆ ಸಿಕ್ಕಿತು. ಆ ಬೇಸರ ವಿಜಯಾನಂದ್ ಅವರನ್ನು ಸಿಎಂ ಮೇಲೆ ಮುನಿಸಿಕೊಳ್ಳುವಂತೆ ಮಾಡಿದೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯರೆಡೆ ಶಾಸಕ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
|

Updated on: Jul 02, 2024 | 8:17 PM

ಬಾಗಲಕೋಟೆ: ಈ ರಾಜಕಾರಣವೇ ಹೀಗೆ ಮಾರಾಯ್ರೇ, ಯಾರನ್ನೂ ನಂಬಲಾಗಲ್ಲ. ಲೋಕಸಭಾ ಚುನಾವಣೆಗೆ ಮೊದಲು ಸಿಎಂ ಬದಲಾವಣೆ ಬಗ್ಗೆ ಮಾತಾಡಿದರೆ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಉರಿದು ಬೀಳುತ್ತಿದ್ದರು. ಆದರೆ, ಇವತ್ತು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವರಸೆ ಮತ್ತು ಧೋರಣೆ ಎರಡರಲ್ಲೂ ಬದಲಾವಣೆ ಕಂಡಿತು. ಸಿಎಂ ಬದಲಾವಣೆ ಬಗ್ಗೆ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗಳು, ಪಕ್ಷದ ಶಾಸಕರು ಮಂತ್ರಿಗಳು ನಡೆಸುತ್ತಿರುವ ಹುನ್ನಾರಗಳ ಬಗ್ಗೆ ಅವರನ್ನು ಕೇಳಿದಾಗ, ಇದು ಕೇವಲ ಮಾಧ್ಯಮಗಳ ಸೃಷ್ಟಿ ತಮ್ಮ ಪಕ್ಷದ ಶಾಸಕರಲ್ಲಿ ನಾಯಕತ್ವದ ಬಗ್ಗೆ ಯಾವುದೇ ಗೊಂದಲವಿಲ್ಲ, ಯಾವುದೇ ಶಾಸಕನಲ್ಲಿ ಸಿಎಂ ಬದಲಾಗಬೇಕೆಂಬ ಭಾವನೆ ಮೂಡಿಲ್ಲ ಎಂದು ಕಾಶಪ್ಪನವರ್ ಹೇಳಿದರು. ಅಂದರೆ ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆಯೇ ಅಂತ ಪತ್ರಕರ್ತರು ಕೇಳಿದಾಗ ತಟ್ಟನೆ ಉತ್ತರಿಸುವ ಅವರು ಅದು ನನಗೆ ಗೊತ್ತಿಲ್ಲ, ಸಿಎಂ ಆಗಬೇಕೆಂಬ ಆಸೆ ಬಹಳಷ್ಟು ಜನರಲ್ಲಿದೆ, ಆ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಚಿವ ಶಿವಾನಂದ ಪಾಟೀಲ್ ಲಾಬಿ ಎದುರು ಶಾಸಕ ವಿಜಯಾನಂದ ಕಾಶಪ್ಪನವರ್ ಲಾಬಿ ಮುರುಟಿ ಹೋಯಿತೇ?

Follow us
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಶಾಲಾ ಮಕ್ಕಳೊಂದಿಗೆ ಮೆಟ್ಟಿಲ ಮೇಲೆ ಕುಳಿತು ಉಪಹಾರ ಸೇವಿಸಿದ ಸಂತೋಷ ಲಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಯಡಿಯೂರಪ್ಪ, ವಿಜಯೇಂದ್ರ ಸತ್ಯ ಹರಿಶ್ಚಂದ್ರನ ವಂಶಸ್ಥರೇ? ಮೊಹಮ್ಮದ್ ನಲಪಾಡ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಮುಡಾ ಹಗರಣ ಬಿಜೆಪಿಯ ಸೃಷ್ಟಿ, ಅಧಿವೇಶನದಲ್ಲಿ ಉತ್ತರಿಸಲು ರೆಡಿ; ಶಿವಕುಮಾರ್
ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಲೇಟೆಸ್ಟ್​ ಗ್ಯಾಲಕ್ಸಿ ಫೋಲ್ಡ್​ ಫೋನ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಮಂಗಳೂರು: ಸಾಕು ನಾಯಿಯನ್ನ ಹೊತ್ತೊಯ್ದ ಚಿರತೆ; ವಿಡಿಯೋ ಸೆರೆ
ಮಂಗಳೂರು: ಸಾಕು ನಾಯಿಯನ್ನ ಹೊತ್ತೊಯ್ದ ಚಿರತೆ; ವಿಡಿಯೋ ಸೆರೆ
ತುಮಕೂರಿನ ಅಂಗನವಾಡಿಯಲ್ಲಿ ಕುಕ್ಕರ್ ಸಿಡಿತ: ತಪ್ಪಿದ ಭಾರೀ ಅನಾಹುತ
ತುಮಕೂರಿನ ಅಂಗನವಾಡಿಯಲ್ಲಿ ಕುಕ್ಕರ್ ಸಿಡಿತ: ತಪ್ಪಿದ ಭಾರೀ ಅನಾಹುತ
ಮಜಾ ಟಾಕೀಸ್​​ನಿಂದ ಅಪರ್ಣಾ ಕರೀಯರ್​ನಲ್ಲಿ ಭಾರೀ ಬದಲಾವಣೆ: ಇಂದ್ರಜಿತ್
ಮಜಾ ಟಾಕೀಸ್​​ನಿಂದ ಅಪರ್ಣಾ ಕರೀಯರ್​ನಲ್ಲಿ ಭಾರೀ ಬದಲಾವಣೆ: ಇಂದ್ರಜಿತ್
‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ
‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ
ಮಗನ ಮದುವೆಯ ಶುಭ ಸಂದರ್ಭದಲ್ಲಿ ವಾರಣಾಸಿಗೆ ಗೌರವ ಸಲ್ಲಿಸಿದ ನೀತಾ ಅಂಬಾನಿ
ಮಗನ ಮದುವೆಯ ಶುಭ ಸಂದರ್ಭದಲ್ಲಿ ವಾರಣಾಸಿಗೆ ಗೌರವ ಸಲ್ಲಿಸಿದ ನೀತಾ ಅಂಬಾನಿ
ಮಜಾ ಟಾಕೀಸ್ ನಲ್ಲಿ ಕೆಲಸ ಮಾಡುವಂತೆ ಅಪರ್ಣಾಗೆ ನಾನೇ ಹೇಳಿದ್ದೆ: ಗ್ರೀಷ್ಮಾ
ಮಜಾ ಟಾಕೀಸ್ ನಲ್ಲಿ ಕೆಲಸ ಮಾಡುವಂತೆ ಅಪರ್ಣಾಗೆ ನಾನೇ ಹೇಳಿದ್ದೆ: ಗ್ರೀಷ್ಮಾ