AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ? ಕತೆ ಕೇಳಿ ಮೋಸ ಹೋಗದಿರಿ

ಬೆಂಗಳೂರಿನ ಚಿನ್ಮಯ್ ಹೆಗಡೆ ಎಂಬ ಉದ್ಯಮಿ ಅನಿರೀಕ್ಷಿತವಾಗಿ ಅಂತಾರಾಷ್ಟ್ರೀಯ ಖಾತೆಯಿಂದ 50,000 ಪಡೆದಿದ್ದರು. ಇದರಿಂದ ಗೊಂದಲಕ್ಕೊಳಗಾದ ಅವರು ತನಿಖೆ ಮಾಡಲು ತಮ್ಮ ಬ್ಯಾಂಕ್‌ಗೆ ಭೇಟಿ ನೀಡಿದರು. ಅಲ್ಲಿ ಆ ಹಣ ಸೌದಿ ಅರೇಬಿಯಾದ ರಿಜ್ವಾನ್ ಎಂಬ ವ್ಯಕ್ತಿಯಿಂದ ಬಂದಿದೆ ಎಂದು ಅವರಿಗೆ ಗೊತ್ತಾಯಿತು. ಸಿನಿಮೀಯ ಕತೆಯೆಂಬಂತೆ ಆ ಹಣವನ್ನು ನೀಡಲು ಚಿನ್ಮಯ್ ಅವರ ಮನೆಗೆ ಹೋದರು, ಆ ಹಣದಿಂದ ರಿಜ್ವಾನ್​ನ ತಂಗಿಯ ಶಿಕ್ಷಣಕ್ಕೆ ಹೇಗೆಲ್ಲ ಸಹಾಯವಾಯಿತು ಎಂಬುದು ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಹರಿದಾಡುತ್ತಿರುವ ಸ್ಪೂರ್ತಿಯ ಕತೆ. ಆದರೆ, ಅದು ಕತೆಯಷ್ಟೇ. ಈ ರೀತಿ ಸುಳ್ಳು ಕತೆ ಕಟ್ಟಿ ಯಾಮಾರಿಸುವವರಿಂದ ನಾವು ಎಚ್ಚರಿಕೆಯಿಂದಿರಬೇಕು.

ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ? ಕತೆ ಕೇಳಿ ಮೋಸ ಹೋಗದಿರಿ
Chinmay Hegde X Account
ಸುಷ್ಮಾ ಚಕ್ರೆ
| Updated By: ವಿವೇಕ ಬಿರಾದಾರ|

Updated on:May 04, 2025 | 8:39 PM

Share

ಬೆಂಗಳೂರು, ಮೇ 3: ಸುಮಾರು 2 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ಮಯ್ ಹೆಗ್ಡೆ (Chinmay Hegde) ಎಂಬ ಉದ್ಯಮಿ, ಕ್ರೀಡಾಪಟುಗೆ ತಪ್ಪಾಗಿ ಬೇರಾವುದೋ ಅಕೌಂಟಿನಿಂದ 50 ಸಾವಿರ ರೂ. ಬಂದಿತ್ತಂತೆ. ಆ ಹಣದ ಮೂಲ ಹುಡುಕಿಕೊಂಡು ಹೋದ ಅವರಿಗೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಮುಸ್ಲಿಂ ವ್ಯಕ್ತಿಯೊಬ್ಬ ಬಹಳ ಕಷ್ಟದಲ್ಲಿರುವುದು ಗೊತ್ತಾಗಿ, ಮನಸು ಕರಗಿ ಆ ಹಣವನ್ನು ಅವರಿಗೆ ವಾಪಾಸ್ ನೀಡಿದ್ದು ಮಾತ್ರವಲ್ಲದೆ ತಾವೇ ಕೈಯಾರೆ 5 ಸಾವಿರ ರೂ. ನೀಡಿದ್ದರಂತೆ. ಇಂಥದ್ದೊಂದು ಕತೆ ಟ್ವಿಟ್ಟರ್​, ಫೇಸ್​ಬುಕ್​ನಲ್ಲಿ ನಿನ್ನೆಯಿಂದ ಓಡಾಡುತ್ತಿದೆ. ಆದರೆ, ಆ ಚಿನ್ಮಯ್ ಹೆಗ್ಡೆ ಹೇಳಿದ ಕತೆ ನಿಜವೇ ಎಂದು ಟಿವಿ9 ಡಿಜಿಟಲ್ ಪರಿಶೀಲಿಸಿದಾಗ ಅದೆಲ್ಲ ಕಟ್ಟುಕತೆ ಎಂಬುದು ಬಯಲಾಗಿದೆ.

ಚಿನ್ಮಯ್ ಹೆಗ್ಡೆ ಎಕ್ಸ್​ ಪೋಸ್ಟ್​ನಲ್ಲಿ ಬರೆದುಕೊಂಡ ಮಾಹಿತಿ ಹೀಗಿದೆ.

“ಎರಡು ವರ್ಷಗಳ ಹಿಂದೆ, ನನಗೆ ಅಂತಾರಾಷ್ಟ್ರೀಯ ಖಾತೆಯಿಂದ 50,000 ರೂ. ಬಂದಿತು. ನಾನು ಯಾವುದೇ ಹಣವನ್ನು ನಿರೀಕ್ಷಿಸಿರಲಿಲ್ಲ, ಆದ್ದರಿಂದ ನಾನು ಬ್ಯಾಂಕಿಗೆ ಹೋಗಿ ಪರಿಶೀಲಿಸಿದೆ. ಹಣದ ವರ್ಗಾವಣೆ ಸೌದಿಯಲ್ಲಿ ಕೆಲಸ ಮಾಡುತ್ತಿರುವ ರಿಜ್ವಾನ್ ಎಂಬ ವ್ಯಕ್ತಿಯಿಂದ ಆಗಿದೆ ಎಂದು ತಿಳಿದುಬಂದಿತು. ಖಾತೆ ಸಂಖ್ಯೆಯಲ್ಲಿನ ಸಣ್ಣ ದೋಷದಿಂದಾಗಿ ಆ ಹಣ ನನ್ನ ಖಾತೆಗೆ ಬಂದಿತ್ತು. ನಾನು ಅವರನ್ನು ಸಂಪರ್ಕಿಸಿದೆ. ಅವರು ಫೋನ್‌ನಲ್ಲಿ ಅಳುತ್ತಿದ್ದರು. “ದಯವಿಟ್ಟು ನನ್ನ ಕುಟುಂಬಕ್ಕಾಗಿ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಆ ಹಣವನ್ನು ವಾಪಾಸ್ ಕೊಡಿ” ಎಂದು ಹೇಳಿದರು. ನಾನು ಆ ಹಣ ನೀಡುವುದಾಗಿ ಅವರಿಗೆ ಭರವಸೆ ನೀಡಿದ್ದೆ.

ನಾನು ಅವರ ವಿಳಾಸವನ್ನು ತೆಗೆದುಕೊಂಡು ಅವರ ಕುಟುಂಬವನ್ನು ಭೇಟಿ ಮಾಡಲು ಹೋದೆ. ಅವರ ಮನೆ ಭೀಕರ ಸ್ಥಿತಿಯಲ್ಲಿತ್ತು. ಅದು ಯಾವಾಗ ಬೇಕಾದರೂ ಕುಸಿಯಬಹುದು ಎಂದು ತೋರುತ್ತಿತ್ತು. ವೀಲ್‌ಚೇರ್‌ನಲ್ಲಿದ್ದ ಅವರ ತಂದೆ ಕಟ್ಟಡ ನಿರ್ಮಾಣ ಕೆಲಸಗಾರರಾಗಿದ್ದರು. ಆದರೆ 3 ನೇ ಮಹಡಿಯಿಂದ ಬಿದ್ದು ಕಾಲುಗಳ ಸ್ವಾಧೀನ ಕಳೆದುಕೊಂಡರು ಎಂದು ನನಗೆ ಹೇಳಿದರು. ರಿಜ್ವಾನ್ ಇತ್ತೀಚೆಗೆ ಶೇ. 92 ಅಂಕ ಪಡೆದು ಬಿಕಾಂ ಮುಗಿಸಿ ಕುಟುಂಬವನ್ನು ಪೋಷಿಸಲು ವಿದೇಶಕ್ಕೆ ಹೋಗಿದ್ದರು. ಒಂದು ಕಾಲದಲ್ಲಿ ಖಾಸಗಿ ಶಾಲೆಯಲ್ಲಿ ಟಾಪರ್ ಆಗಿದ್ದ ಅವರ ತಂಗಿ, ಶಾಲೆಯ ಶುಲ್ಕವನ್ನು ಭರಿಸಲು ಸಾಧ್ಯವಾಗದ ಕಾರಣ ಸರ್ಕಾರಿ ಶಾಲೆಗೆ ಹೋಗಬೇಕಾಯಿತು. ಅವರ ಕಷ್ಟವನ್ನು ನೋಡಿ ನಾನು ಅವರ 50 ಸಾವಿರ ರೂ. ಹಣವನ್ನು ಕೊಟ್ಟು ಅದರ ಜೊತೆಗೆ ನನ್ನ 5 ಸಾವಿರ ರೂ. ಹಣ ಸೇರಿಸಿ ಕೊಟ್ಟೆ.

ನನ್ನ ತಂದೆಗೆ ಅವರ ಕಥೆ ಹೇಳಿದಾಗ ಅವರು ತುಂಬಾ ಭಾವುಕರಾದರು. ಮರುದಿನವೇ ಅವರು ಬಾ ನಾನೂ ಬರುತ್ತೇನೆ, ಅವರ ಮನೆಗೆ ಹೋಗೋಣ ಎಂದರು. ನಾವು ಮತ್ತೆ ಅವರನ್ನು ಭೇಟಿ ಮಾಡಿದೆವು. ನನ್ನ ತಂದೆ ಅವರಿಗೆ, “ನಿಮ್ಮ ಮಗಳ ಪೂರ್ಣ ಶಿಕ್ಷಣವನ್ನು ನಾವು ನೋಡಿಕೊಳ್ಳುತ್ತೇವೆ. ಅವಳು ಎಲ್ಲಿ ಓದಬೇಕೋ ಅಲ್ಲಿಯೇ ಓದಲಿ” ಎಂದು ಹೇಳಿದರು. ಅಪ್ಪ ಆಕೆಯ ಆ ವರ್ಷದ ಶುಲ್ಕವನ್ನು ಪಾವತಿಸಿದರು ಮತ್ತು ಪ್ರತಿ ತಿಂಗಳು ಹಣ ಹಾಕಲು ನನಗೆ ಹೇಳಿದ್ದರು.

ಇಂದು, ಅವಳ 10ನೇ ತರಗತಿಯ ಬೋರ್ಡ್ ಫಲಿತಾಂಶಗಳು ಬಂದವು. ಅವಳು 97% – 606/625 ಅಂಕಗಳನ್ನು ಗಳಿಸಿದ್ದಾಳೆ. ಅವಳು ಕರೆ ಮಾಡಿ “ನನ್ನ ನಿಜವಾದ ಸಹೋದರನಿಗಿಂತ ಮೊದಲು ನಿಮಗೆ ಫೋನ್ ಮಾಡಿದ್ದೇನೆ. ನೀನು ನನಗೆ ನಿಜವಾದ ಅಣ್ಣನಂತೆ.” ಎಂದಳು. ಅದು ನನಗೆ ಎಷ್ಟು ಭಾವನಾತ್ಮಕ ಭಾವನೆಯನ್ನುಂಟುಮಾಡಿತು ಎಂಬುದನ್ನು ನಾನು ವರ್ಣಿಸಲು ಸಾಧ್ಯವಿಲ್ಲ. ಬ್ಯಾಂಕ್ ಖಾತೆಯ ಎಡವಟ್ಟಿನಿಂದ ಆದ ಒಂದು ತಪ್ಪಿನಿಂದ ಆಕೆಯ ಜೀವನ ಸುಂದರವಾಯಿತು” ಎಂದು ಚಿನ್ಮಯ್ ಬರೆದುಕೊಂಡಿದ್ದಾರೆ.

ಚಿನ್ಮಯ್ ಹೆಗ್ಡೆ

ಅಸಲಿ ಕತೆಯೇನು?:

ಈ ಕತೆ ಕೇಳಿದಾಗ ಚಿನ್ಮಯ್ ಹೆಗ್ಡೆಯಂತಹ ಸಹಾಯ ಮಾಡುವ ಮನಸ್ಥಿತಿ ಎಲ್ಲರಿಗೂ ಇದ್ದರೆ ಎಷ್ಟು ಚೆನ್ನಾಗಿರುತ್ತದೆ! ಎಂಬ ಭಾವನೆ ಮೂಡುವುದು ಸಹಜ. ಟಿವಿ9 ಕೂಡ ಇದೇ ಕಾರಣಕ್ಕೆ ಚಿನ್ಮಯ್ ಹೆಗ್ಡೆಯನ್ನು ಎಕ್ಸ್​ ಖಾತೆಯ ಮೂಲಕ ಸಂಪರ್ಕಿಸಿದಾಗ ಅವರು ಸರಿಯಾಗಿ ಸ್ಪಂದಿಸಲಿಲ್ಲ. ಎಸ್​ಎಸ್​ಎಲ್​ಸಿಯಲ್ಲಿ ಅಷ್ಟು ಅಂಕ ಪಡೆದ ಆ ಬಾಲಕಿಯ ಫೋನ್ ನಂಬರ್ ಕೊಡಿ, ನಾವು ಆಕೆಯ ಸಂದರ್ಶನ ಮಾಡುತ್ತೇವೆ ಎಂದಾಗ ಅದಕ್ಕೂ ಒಪ್ಪದೆ ನಮ್ಮ ಖಾತೆಯನ್ನೇ ಬ್ಲಾಕ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಎಂಬ ಮಾಯೆಯಲ್ಲಿ ಬರುವುದೆಲ್ಲ ನಿಜವೆಂದು ನಂಬಿ ಹಣ ಕಳೆದುಕೊಂಡವರು ಕೂಡ ಬಹಳಷ್ಟು ಜನರಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:07 pm, Sat, 3 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ