AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅದು ಬೆಕ್ಕಲ್ಲ ತಾಯಿ… ದೈತ್ಯ ಚೀತಾವನ್ನೇ ತಬ್ಬಿ ಮುದ್ದಾಡಿದ ಮಹಿಳೆ; ವಿಡಿಯೋ ವೈರಲ್‌

ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಭಯಾನಕವಾಗಿದ್ದರೆ, ಕೆಲವು ದೃಶ್ಯಗಳು ಅಚ್ಚರಿಯನ್ನು ಮೂಡಿಸುತ್ತದೆ. ಇದೀಗ ಅಂತಹದ್ದೊಂದು ಅಚ್ಚರಿಯ ವಿಡಿಯೋ ವೈರಲ್‌ ಆಗಿದ್ದು, ಮಹಿಳೆಯೊಬ್ಬಳು ಬೆಕ್ಕನ್ನು ಮುದ್ದಿಸುವಂತೆ ಚೀತಾವನ್ನು ಬಿಗಿದಪ್ಪಿ ಮುದ್ದಾಡಿದ್ದಾಳೆ. ಈ ದೃಶ್ಯ ವೈರಲ್‌ ಆಗುತ್ತಿದ್ದು, ಮಹಿಳೆ ಹಾಗೂ ಚೀತಾದ ಬಾಂಧವ್ಯವನ್ನು ಕಂಡು ನೆಟ್ಟಿಗರು ಮನ ಸೋತಿದ್ದಾರೆ.

Viral: ಅದು ಬೆಕ್ಕಲ್ಲ ತಾಯಿ… ದೈತ್ಯ ಚೀತಾವನ್ನೇ ತಬ್ಬಿ ಮುದ್ದಾಡಿದ ಮಹಿಳೆ; ವಿಡಿಯೋ ವೈರಲ್‌
ವೈರಲ್‌ ವಿಡಿಯೋ Image Credit source: Instagram
ಮಾಲಾಶ್ರೀ ಅಂಚನ್​
|

Updated on:May 03, 2025 | 1:56 PM

Share

ಚೀತಾ (Cheetah), ಚಿರತೆ, ಸಿಂಹ, ಹುಲಿ ಇತ್ಯಾದಿ ನರ ಭಕ್ಷಕ ಪ್ರಾಣಿಗಳೆಂದರೆ ಬಹುತೇಕ ಎಲ್ಲರೂ ಭಯಪಟ್ಟುಕೊಳ್ಳುತ್ತಾರೆ. ಅವುಗಳ ಘರ್ಜನೆ ಕೇಳಿದರೆ ಸಾಕು ಮೈಯೆಲ್ಲಾ ನಡುಗಿ ಹೋಗುತ್ತದೆ. ಹೀಗಿದ್ರೂ ಕೂಡಾ ಈ ಕಾಡು ಪ್ರಾಣಿಗಳನ್ನು (wild animals) ಸಾಕು ಪ್ರಾಣಿಗಳಂತೆ ಸಾಕುವವರೂ ಇದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಅದೇ ರೀತಿ  ಇಲ್ಲೊಬ್ಬಳು ಮಹಿಳೆ ಬೆಕ್ಕನ್ನು ಮುದ್ದಿಸುವಂತೆ ದೈತ್ಯ ಚೀತಾವನ್ನು ತಬ್ಬಿ ಮುದ್ದಿಸಿದ್ದಾಳೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ (Viral) ಆಗಿದ್ದು, ದೈತ್ಯ ಚೀತಾ ಬೆಕ್ಕಿನಂತೆ ವರ್ತಿಸಿದ್ದನ್ನು. ದೃಶ್ಯವನ್ನು ಕಂಡು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡ್ಡಿದ್ದಾರೆ.

ಚೀತಾವನ್ನು ಅಪ್ಪಿ ಮುದ್ದಾಡಿದ ಮಹಿಳೆ:

ಸಾಮಾನ್ಯವಾಗಿ ಜನ ನಾಯಿ, ಬೆಕ್ಕುಗಳನ್ನು ಮುದ್ದಾಡುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ದೈತ್ಯ ಚೀತಾವನ್ನು ಮುದ್ದಾಡಿದ್ದಾಳೆ. ಆ ಚೀತಾ ಕೂಡಾ ಅಷ್ಟೇ ಮಹಿಳೆಯೊಂದಿಗೆ ಬಹಳ ಪ್ರೀತಿ ಪೂರ್ವಕವಾಗಿ ಬೆಕ್ಕಿನ ಮರಿಯಂತೆ ವರ್ತಿಸಿದೆ. lisatorajaqueline ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ.

ಇದನ್ನೂ ಓದಿ
Image
ಮದುವೆ ಸಮಯದಲ್ಲೂ ಗ್ರಾಹಕನಿಗೆ ಸ್ಪಂದಿಸಿದ ವರ
Image
ಈ ಜನಪ್ರಿಯ ರೆಸ್ಟೋರೆಂಟ್ ನಲ್ಲಿ ಪಾನಿಪುರಿ ಜೊತೆಗೆ ಜಿರಳೆ ಫ್ರೀ ಸಿಗುತ್ತೆ
Image
ಹಲವು ವರ್ಷಗಳ ಬಳಿಕ ಬಾಲ್ಯವನ್ನು ಕಳೆದ ಮನೆಗೆ ಭೇಟಿ ನೀಡಿ ಭಾವುಕನಾದ ವಿದೇಶಿಗ
Image
ದುಡಿಯುವ ಕೈಗೆ ಆಸರೆಯಾದ, ಹಸಿದ ಗೋವಿಗೆ ಅನ್ನದಾತನಾದ, ನಿಜವಾದ ಪರಮಾತ್ಮ

ಇದನ್ನೂ ಓದಿ: ಮದುವೆ ಸಮಯದಲ್ಲೂ ಗ್ರಾಹಕನಿಗೆ ಸ್ಪಂದಿಸಿದ ವರ, ವಿಡಿಯೋ ವೈರಲ್

ವೈರಲ್‌ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ದೈತ್ಯ ಚೀತಾವೊಂದು ಬೆಕ್ಕಿನಂತೆ ಮಹಿಳೆಯ ಬಳಿ ಬರುವ ದೃಶ್ಯವನ್ನು ಕಾಣಬಹುದು. ಹೀಗೆ ಬಂದ ಚೀತಾವನ್ನು ಆ ಮಹಿಳೆ ತಬ್ಬಿ ಮುದ್ದಾಡಿದ್ದಾಳೆ.

ಏಪ್ರಿಲ್‌ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮಹಿಳೆಯ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜಕ್ಕೂ ಈ ದೃಶ್ಯ ತುಂಬಾನೇ ಸುಂದರವಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಹಿಳೆ ಹಾಗೂ ಚೀತಾದ ಬಾಂಧವ್ಯದ ಸುಂದರ ದೃಶ್ಯಕ್ಕೆ ಮನಸೋತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Sat, 3 May 25

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ