ಇಬ್ಬರಿಗೂ ಹಸಿವು, ದೇವರಂತೆ ಬಂದು ಅಜ್ಜಿ, ಗೋವಿನ ಹಸಿವು ನೀಗಿಸಿದ ವ್ಯಕ್ತಿ
ಕೆಲವರು ಏನು ಪ್ರತಿಫಲ ಅಪೇಕ್ಷಿಸದೇ ಇನ್ನೊಬ್ಬರಿಗೆ ಸಹಾಯ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಇಂತಹ ಕೆಲವು ವಿಡಿಯೋಗಳು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ದುಡಿಯುವ ಕೈಗೆ ಆಸರೆಯಾಗದ್ದು, ಹಸಿದ ಗೋವಿಗೆ ಅನ್ನದಾತನಾಗಿದ್ದು, ಅದರಲ್ಲೇ ಸಂತೋಷ ಕಂಡುಕೊಂಡಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯ ಹೃದಯಶ್ರೀಮಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗಿನ ಕಾಲದಲ್ಲಿ ಮಾನವೀಯತೆ (humanity) ಹಾಗೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ವ್ಯಕ್ತಿಗಳನ್ನು ನೋಡುವುದೇ ಕಷ್ಟ. ಒಬ್ಬರ ಹಸಿವನ್ನು ನೀಗಿಸುವುದು ಹಾಗೂ ಮುಖದಲ್ಲಿ ನಗು ತರಿಸುವುದು ಅಷ್ಟು ಸುಲಭವಲ್ಲ. ಈಗಿನ ಕಾಲದಲ್ಲಿ ಎಲ್ಲರಿಗೂ ಇಂತಹ ಮನಸ್ಸು ಇರುವುದಿಲ್ಲ. ಆದರೆ ಕಷ್ಟಕ್ಕೆ ಮರುಗುವ, ಇನ್ನೊಬ್ಬರಿಗೆ ಸಾಹಸ ಮಾಡುವ ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗಿದ್ದು ಇಲ್ಲೊಬ್ಬ ಮಹಾನುಭಾವ ಗೋವಿ (cow) ನ ಹಸಿವನ್ನು ನೀಗಿಸಿ, ಹಿರಿ ಜೀವಕ್ಕೆ ಆಸರೆಯಾಗುವ ಮೂಲಕ ಅಜ್ಜಿಯ ಮುಖದಲ್ಲಿ ನಗುವನ್ನು ಮೂಡಿಸಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯೂ ಗುಣವನ್ನು ಕೊಂಡಾಡಿದ್ದಾರೆ.
iamhussainmansuri ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಕ್ಯಾರೆಟ್ ತಿನ್ನುತ್ತಾ ನಿಂತಿರುವುದನ್ನು ನೋಡಬಹುದು. ಆ ಬಳಿಕ ಗೋವೊಂದು ಈತನ ಬಳಿ ಬಂದು ಕೈಯಲ್ಲಿದ್ದ ಕ್ಯಾರೆಟ್ ತಿಂದಿದೆ. ತದನಂತರದಲ್ಲಿ ರಸ್ತೆಯ ಬಳಿ ಕ್ಯಾರೆಟ್ ಮಾರಾಟ ಮಾಡುತ್ತಿದ್ದ ಅಜ್ಜಿಯ ಬಳಿ ಹೋಗಿದ್ದು ಆಕೆಯ ಬಳಿಯಿದ್ದ ಎಲ್ಲಾ ಕ್ಯಾರೆಟನ್ನು ತಾನೇ ಖರೀದಿಸಿದ್ದಾನೆ. ಅಜ್ಜಿಯ ಕೈಗೆ ಒಂದಿಷ್ಟು ಹಣವನ್ನು ಇಟ್ಟು ಅಲ್ಲಿಂದ ಹೊರಟಿದ್ದಾನೆ. ತದನಂತರದಲ್ಲಿ ತಾನು ಖರೀದಿಸಿರುವ ಕ್ಯಾರೆಟ್ ಎಲ್ಲವನ್ನು ಅಲ್ಲೇ ಇದ್ದ ಹಸುಗಳಿಗೆ ತಿನ್ನಲು ಇಟ್ಟು ಅವುಗಳ ಹಸಿವನ್ನು ನೀಗಿಸಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ :ಹೀಗೂ ಉಂಟೇ! ಗಂಡ ಗಡ್ಡ ಶೇವ್ ಮಾಡಿಲ್ಲ ಎಂದು ಮೈದುನನ ಜತೆ ಓಡಿ ಹೋದ ಮಹಿಳೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು ಈತನ ಮಾಡಿದ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಪ್ರಾಣಿಗಳು ಒಳ್ಳೆಯ ವ್ಯಕ್ತಿಗಳನ್ನು ಬಹುಬೇಗನೇ ಗುರುತಿಸುತ್ತವೆ’ ಎಂದಿದ್ದಾರೆ. ಇನ್ನೊಬ್ಬರು, ‘ಇಂತಹ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಸ್ವಾರ್ಥಿಗಳ ಪ್ರಪಂಚದಲ್ಲಿ ಈ ವ್ಯಕ್ತಿ ಮಾಡುವ ಕೆಲಸಗಳು ಎಲ್ಲರಿಗೂ ಮಾದರಿ’ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊರ್ವ ಬಳಕೆದಾರರು, ‘ಈ ಜಗತ್ತಿನ ಎಲ್ಲಾ ಗೌರವವು ನಿಮ್ಮಂತಹ ವ್ಯಕ್ತಿಗೆ ಸಿಗಬೇಕು’ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








