AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ ಉಂಟೇ! ಗಂಡ ಗಡ್ಡ ಶೇವ್​ ಮಾಡಿಲ್ಲ ಎಂದು ಮೈದುನನ ಜತೆ ಓಡಿ ಹೋದ ಮಹಿಳೆ

ಮಹಿಳೆಯೊಬ್ಬಳು ಗಂಡ ಗಡ್ಡ ಶೇವ್ ಮಾಡಿಲ್ಲ ಅನ್ನೋ ಕಾರಣಕ್ಕೆ ಮೈದುನನ ಜತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಂಡ ಗಡ್ಡ ತೆಗೆಯಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆ ಮೈದುನನೊಂದಿಗೆ ಓಡಿ ಹೋಗಿದ್ದಾಳೆ. ಈ ವಿವಾಹೇತರ ಸಂಬಂಧದ ಹಿಂದಿನ ಕಾರಣ ಸಾಕಷ್ಟು ಕುತೂಹಲಕಾರಿಯಾಗಿದೆ.

ಹೀಗೂ ಉಂಟೇ! ಗಂಡ ಗಡ್ಡ ಶೇವ್​ ಮಾಡಿಲ್ಲ ಎಂದು ಮೈದುನನ ಜತೆ ಓಡಿ ಹೋದ ಮಹಿಳೆ
ಮಹಿಳೆImage Credit source: India Today
ನಯನಾ ರಾಜೀವ್
|

Updated on: May 01, 2025 | 2:20 PM

Share

ಮೀರತ್, ಮೇ 1: ಗಂಡ-ಹೆಂಡತಿ(Wife) ನಡುವೆ ಹಲವು ವಿಚಾರಗಳಿಗೆ ಮನಸ್ತಾಪಗಳಾಗುತ್ತಿರುತ್ತವೆ. ಆದರೆ ಗಡ್ಡ ತೆಗೆಯುವ ವಿಚಾರದಲ್ಲಾದ ಜಗಳದ ಬಳಿಕ ಮಹಿಳೆ ಗಂಡನ ಬಿಟ್ಟು ಮೈದುನನೊಟ್ಟಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಹಾಸಿಗೆ ಮೇಲೆ ಒದ್ದೆ ಟವೆಲ್ ಎಸೆಯುವುದು, ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಹೀಗೆ ಹಲವು ವಿಚಾರಗಳು ಪತ್ನಿಗೆ ಕೋಪ ತರಿಸುತ್ತವೆ. ಕೆಲವೊಮ್ಮೆ ಹೆಂಡತಿಯ ಶಾಪಿಂಗ್ ಹುಚ್ಚು ಕೂಡ ಜಗಳಕ್ಕೆ ಕಾರಣವಾಗುತ್ತದೆ.

ಆದರೆ ಇಲ್ಲಿ ನಡೆದಿರುವುದೇ ಬೇರೆ, ಗಂಡ ಗಡ್ಡ ತೆಗೆಯಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆ ಮೈದುನನೊಂದಿಗೆ ಓಡಿ ಹೋಗಿದ್ದಾಳೆ. ಈ ವಿವಾಹೇತರ ಸಂಬಂಧದ ಹಿಂದಿನ ಕಾರಣ ಸಾಕಷ್ಟು ಕುತೂಹಲಕಾರಿಯಾಗಿದೆ.

ಮಹಿಳೆ ಮೀರತ್​ನಲ್ಲಿ ಮೌಲಾನಾ ಒಬ್ಬರನ್ನು ವಿವಾಹವಾಗಿದ್ದಳು, ಮದುವೆಯ ಸಮಯದಲ್ಲಿ ಗಂಡನಿಗಿದ್ದ ಗಡ್ಡ ಆಕೆಗೆ ಇಷ್ಟವಾಗಲಿಲ್ಲ. ಆಕೆ ತನ್ನ ಮನಸ್ಸಿನಲ್ಲಿರುವುದನ್ನು ಗಂಡನ ಬಳಿ ಹೇಳಿಕೊಂಡು ಗಡ್ಡವನ್ನು ಬೋಳಿಸಲು ಕೇಳಿದ್ದಾಳೆ. ಆದರೆ ಆತ ಅದನ್ನು ನಿರಾಕರಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.

ಇದನ್ನೂ ಓದಿ
Image
ವಿಶ್ವದಲ್ಲೇ ಈ ವಿಮಾನ ನಿಲ್ದಾಣವು ದುಬಾರಿಯಾಗಲು ಕಾರಣಗಳು ಇವೆ ನೋಡಿ
Image
ಹೆಂಡತಿ-ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಅಪಾಯಕಾರಿ ಸ್ಟಂಟ್
Image
ಚಲಿಸುತ್ತಿದ್ದ ಬೈಕ್ ನಲ್ಲಿ ಸ್ಟಂಟ್‌ ಮಾಡಲು ಹೋಗಿ ರಸ್ತೆಗೆ ಬಿದ್ದ ಯುವಕ
Image
ಮಾಲ್​​​ನಲ್ಲಿ ಅಗ್ನಿಅವಘಡ, ಜೀವ ಉಳಿಸಿಕೊಳ್ಳಲು ಕಿಟಕಿಯಲ್ಲಿ ನೇತಾಡಿದ ಜನ

ಆದರೆ ಸ್ವಲ್ಪ ಸಮಯದ ನಂತರ ಆಕೆ ಜಗಳವಾಡುವುದನ್ನು ನಿಲ್ಲಿಸಿದ್ದಳು, ಅದು ಬಿರುಗಾಳಿ ಬರುವುದಕ್ಕೂ ಮುನ್ನ ಇರುವ ಶಾಂತತೆಯ ರೀತಿ ಅನಿಸುತ್ತಿತ್ತು. ಆಕೆ ತನ್ನ ಗಂಡನ ತಮ್ಮನನ್ನು ಪ್ರೀತಿಸಲು ಪ್ರಾರಂಭಿಸಿದ್ದಳು. ಬಳಿಕ ಆಕೆ ಮೈದುನನ ಜತೆ ಓಡಿ ಹೋಗಿದ್ದಾಳೆ. ಆತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆಕೆಯನ್ನು ಹುಡುಕಲಾಗುತ್ತಿದೆ.

ಮತ್ತಷ್ಟು ಓದಿ: ಮದುವೆ ಕಾರ್ಡ್ ನಲ್ಲಿ ಫಿಸಿಕಲ್ ಕ್ವಾಲಿಫೈಡ್ ಎಂದು ಅರ್ಹತೆ ಉಲ್ಲೇಖಿಸಿದ ಮದುಮಗ

ಮೀರತ್‌ನ ಲಿಸಾಡಿ ಗೇಟ್‌ನ ಉಜ್ವಲ್ ಗಾರ್ಡನ್‌ನಲ್ಲಿ ಇಬ್ಬರು ವಾಸವಿದ್ದರು. ಏಳು ತಿಂಗಳ ಹಿಂದೆ ಇಂಚೌಲಿಯ ಯುವತಿಯನ್ನು ವಿವಾಹವಾಗಿದ್ದರು. ಅವನು ತನ್ನೊಂದಿಗೆ ವಾಸಿಸಲು ಬಯಸಿದರೆ, ಅವನು ತನ್ನ ಗಡ್ಡವನ್ನು ಬೋಳಿಸಿಕೊಳ್ಳಬೇಕು ಎಂದು ಆ ಮಹಿಳೆ ಹೇಳಿದಳು. ಆದರೆ ಇದಾದ ನಂತರವೂ ಪತಿ ಕೇಳದಿದ್ದಾಗ, ಮಹಿಳೆ ತನ್ನ ಮೈದುನನ ಜತೆ ಓಡಿ ಹೋಗಿದ್ದಾಳೆ. ದೂರಿನಲ್ಲಿ ಪತಿ ಇಬ್ಬರ ನಡುವಿನ ಪ್ರೇಮ ಸಂಬಂಧವನ್ನು ಉಲ್ಲೇಖಿಸಿದ್ದಾರೆ.

ತನಿಖೆಯಿಂದ ಮಹಿಳೆ ಲುಧಿಯಾನದಲ್ಲಿದ್ದಾಳೆಂದು ತಿಳಿದುಬಂದಿದೆ. ಮಹಿಳೆಯನ್ನು ಕರೆತರಲು ಪೊಲೀಸರು ಒಂದು ತಂಡವನ್ನು ರಚಿಸಿದ್ದು, ಮಹಿಳೆ ನಿರ್ದಿಷ್ಟ ಸ್ಥಳಕ್ಕೆ ತೆರಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ