Viral : ಮಾಲ್ನಲ್ಲಿ ಭೀಕರ ಅಗ್ನಿ ಅವಘಡ, ತುರ್ತು ನಿರ್ಗಮನ ಮಾರ್ಗವಿಲ್ಲದೆ ಕಿಟಕಿಯಲ್ಲಿ ನೇತಾಡಿದ ಜನ
ಕೆಲವೊಮ್ಮೆ ಅವಘಡಗಳು ಸಂಭವಿಸುತ್ತವೆ. ಈ ವೇಳೆಯಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಾಡುವುದಿದೆ. ಇಂತಹ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಿದೆ. ಇದೀಗ ಬಹುಮಹಡಿಯ ಕಟ್ಟಡಕ್ಕೆ ಬೆಂಕಿ ಹೊತ್ತಿ ಕೊಂಡಿದ್ದು, ಈ ವೇಳೆಯಲ್ಲಿ ಜೀವ ಉಳಿಸಿಕೊಳ್ಳುವ ಸಲುವಾಗಿ ಕಿಟಕಿ ಹಿಡಿದು ವ್ಯಕ್ತಿಗಳು ನೇತಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯ ನೋಡಿ ಆತಂಕಗೊಂಡಿದ್ದಾರೆ.

ಗಾಜಿಯಾಬಾದ್, ಏ 30: ಯಾವಾಗ ಹೇಗೆ ಬೆಂಕಿ ಅವಘಡಗಳು ಹಾಗೂ ಅಪಘಾತಗಳು ಸಂಭವಿಸುತ್ತದೆ ಎಂದು ಹೇಳಲು ಆಗದು. ಈ ರೀತಿ ಘಟನೆ (incident) ಗಳು ನಡೆದಾಗ ಪ್ರಾಣಹಾನಿ ಮಾತ್ರವಲ್ಲದೇ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತದೆ. ಅದರಲ್ಲಿಯೂ ಬೆಂಕಿ ಅವಘಡಗಳು ಸಂಭವಿಸಿದಾಗ ಜೀವ ಉಳಿದರೆ ಸಾಕು ಎಂದು ಎಲ್ಲೆಂದರಲ್ಲಿ ಓಡುವವರನ್ನು ನೋಡಬಹುದು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮಾಲ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಲ್ಲಿದ್ದ ಜನರು ಜೀವ ಉಳಿಸಿಕೊಳ್ಳಲು ಕಟ್ಟಡದ ಕಿಟಕಿಗಳ ಮೇಲೆ ನೇತಾಡಿದ್ದು ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯವನ್ನು ನೋಡಬಹುದು. ಉತ್ತರ ಪ್ರದೇಶದ ಗಾಜಿಯಾಬಾದ್ (Ghaziabad of Uttar Pradesh)ನ ರಾಜನಗರದ ಮಾಲ್ (a mall in Rajnagar) ವೊಂದರಲ್ಲಿ ಈ ಘಟನೆಯೂ ನಡೆದಿದೆ ಎನ್ನಲಾಗಿದೆ.
Lokesh Rai ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಕಟ್ಟಡವೊಂದರಲ್ಲಿ ಕಪ್ಪು ಹೊಗೆ ಹೊರಬರುತ್ತಿರುವುದನ್ನು ಕಾಣಬಹುದು. ಇತ್ತ ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಕೆಲವರು ಬಾಲ್ಕನಿಗಳ ಮೇಲೆ ನಿಂತುಕೊಂಡಿದ್ದರೆ, ಇನ್ನು ಕೆಲವರು ಕಿಟಕಿಗಳ ಮೇಲೆ ನೇತಾಡುತ್ತಿರುವುದನ್ನು ನೋಡಬಹುದು. ಅದಲ್ಲದೇ, ಕರವಸ್ತ್ರದಲ್ಲಿ ತಮ್ಮ ಮೂಗು ಮುಚ್ಚಿಕೊಂಡು ನಿಂತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
#गाजियाबाद के आरडीसी के आदित्य बिल्डिंग के आग गाने के बाद रस्ता न होने के कारण कुछ लोग खिड़की पर निकलकर लटकते नजर आए इस दौरान लोग खिड़कियों और छज्जों पर खड़े नजर आए, आग को घंटों की मशक्कत के बाद लोगों को रेस्क्यू कराया गया है। आग लगने के बाद कमर्शियल बिल्डिंग्स का क्या हालात है… pic.twitter.com/INVU6k5auP
— Lokesh Rai (@lokeshRlive) April 28, 2025
ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಈ ಅಪಾಯಕಾರಿ ವಿಡಿಯೋ ನೋಡಿದ ಬಳಕೆದಾರರೊಬ್ಬರು, ‘ಗಾಜಿಯಾಬಾದ್ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಯಾವುದೇ ಜೀವಹಾನಿಯಾಗಿಲ್ಲ, ಅಪಾಯಕ್ಕೆ ಸಿಲುಕಿಕೊಂಡಿದ್ದ ಎಲ್ಲ ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಮೆಟ್ರೋ ನಿಲ್ದಾಣದಲ್ಲಿ ಪ್ರೇಯಸಿಯ ಕಾಲಿಗೆ ಬಿದ್ದು ನಮಸ್ಕರಿಸಿದ ಯುವಕ, ಕುಣಿದು ಕುಪ್ಪಳಿಸಿದ ಯುವತಿ
ಇನ್ನೊಬ್ಬರು, ‘ಈ ವಿಡಿಯೋ ನೋಡಲು ಭಯಾನಕವಾಗಿದೆ, ಆ ಕ್ಷಣವನ್ನು ನೆನೆಸಿಕೊಂಡರೇನೇ ಮೈ ಜುಮ್ಮ್ ಎನ್ನುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ರೀತಿ ಅವಘಡಗಳು ಸಂಭವಿಸಿದಾಗ ಆ ಕ್ಷಣ ಏನು ಮಾಡಬೇಕೆಂದು ತಿಳಿಯುವುದಿಲ್ಲ, ಜೀವ ಉಳಿದರೆ ಸಾಕು ಎನ್ನುವುದೊಂದೇ ಇರುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದರೆ ಈ ಘಟನೆಯಲ್ಲಿ ಯಾವುದೇ ಗಾಯ ಹಾಗೂ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








