ಅಂಧ ವ್ಯಕ್ತಿಯ ಗಾಯನಕ್ಕೆ ಮನಸೋತ ರೈಲ್ವೆ ಸಹಪ್ರಯಾಣಿಕರು, ವಿಡಿಯೋ ವೈರಲ್
ಅಂಗವಿಕಲತೆ ದೇಹಕ್ಕೆ ಸಂಬಂಧಿಸಿದ್ದು ಮನಸ್ಸಿಗೆ ಅಲ್ಲವೇ ಅಲ್ಲ, ನಮ್ಮ ಬಳಿ ಏನು ಇದ್ದರೂ, ಇಲ್ಲದಿದ್ದರೂ, ನಮಗೆಂದು ಇರುವ ನಾಲ್ಕು ದಿನವನ್ನು ಸಂತೋಷದಿಂದ ಕಳೆಯಬೇಕು. ಇದಕ್ಕೆ ಇಲ್ಲೊಬ್ಬರು ಅಂಧ ವ್ಯಕ್ತಿಯೂ ಉದಾಹರಣೆಯಂತಿದ್ದಾರೆ. ಕಣ್ಣಿಲ್ಲದೇ ಇದ್ದರೂ ರೈಲಿನಲ್ಲಿ ಪ್ರಯಾಣಿಸುತ್ತಾ ತನ್ನ ಅದ್ಭುತ ಕಂಠದಿಂದ ಹಿಂದಿ ಹಾಡನ್ನು ಹಾಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಪ್ರತಿಭೆ (talent) ಯಾರ ಸ್ವತ್ತು ಇಲ್ಲ, ನಿಮ್ಮಲ್ಲಿ ಪ್ರತಿಭೆಯಿದ್ದರೆ ಎಲ್ಲರೂ ಕೂಡ ತಿರುಗಿ ನೋಡುವಂತೆ ಬೆಳೆಯಬಹುದು. ಇದೀಗ ಅಂಗವಿಕಲತೆ, ವೈಯಕ್ತಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ಅದೆಷ್ಟೋ ವ್ಯಕ್ತಿಗಳನ್ನು ನೀವು ನೋಡಿರಬಹುದು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವ ಅಂಧ ವ್ಯಕ್ತಿ (blind person) ಯೂ ತನ್ನ ಪ್ರತಿಭೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಣ್ಣಿಲ್ಲದಿದ್ದರೂ ರೈಲ್ವೆ ಪ್ರಯಾಣವನ್ನು ಎಂಜಾಯ್ ಮಾಡುತ್ತಾ ಬಾಲಿವುಡ್ ಹಾಡ (bollywood song) ನ್ನು ಅತ್ಯದ್ಭುತವಾಗಿ ಹಾಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಈ ವಿಡಿಯೋವನ್ನು ಖೇಡ್ಕರ್ ಹರೀಶ್ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅಂಧ ವ್ಯಕ್ತಿಯೊಬ್ಬರು, ರೈಲ್ವೆ ಬೋಗಿಯಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ರೈಲು ಚಲಿಸುತ್ತಿದ್ದು, ಕಿಟಕಿ ಪಕ್ಕ ಕುಳಿತುಕೊಂಡಿರುವ ಈ ವ್ಯಕ್ತಿಯೂ ಬಾಲಿವುಡ್ ಹಿಟ್ ಹಾಡಲ್ಲಿ ಒಂದಾದ ಯೇ ತುನೇ ಕ್ಯಾ ಕಿಯಾ ತಮ್ಮ ಧ್ವನಿಯಲ್ಲಿ ಹಾಡಿದ್ದಾರೆ. ಇವರ ಅತ್ಯದ್ಭುತ ಕಂಠಕ್ಕೆ ಅಲ್ಲೇ ಇದ್ದ ಸಹಪ್ರಯಾಣಿಕರು ಇವರನ್ನು ಹುರಿದುಂಬಿಸುವ ಮೂಲಕ ಸಾಥ್ ನೀಡಿರುವುದನ್ನು ನೋಡಬಹುದು. ಹೌದು, ಸಹಪ್ರಯಾಣಿಕರು ಪ್ಲಾಸ್ಟಿಕ್ ಬಾಟಲಿಯನ್ನು ಹಾಡಿಗೆ ತಕ್ಕಂತೆ ಬಾರಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋದ ಕೊನೆಗೆ ಅಂಧ ವ್ಯಕ್ತಿಯೂ ರಾಗ ಬದ್ದವಾಗಿ ಹಾಡುತ್ತಿದ್ದು ಅವರ ಜೊತೆಗೆ ಸಹಪ್ರಯಾಣಿಕರು ಹಾಡು ಹಾಡಿ ಸಾಥ್ ನೀಡಿದ್ದಾರೆ.
ಇದನ್ನೂ ಓದಿ : ಕನ್ನಡ ಅದ್ಭುತ ಭಾಷೆ, ಕಲಿತು ಮಾತನಾಡಿ: ಕ್ಯಾಲಿಫೋರ್ನಿಯಾ ಬುರೀಟೊ ಸ್ಥಾಪಕ ಬರ್ಟ್ ಮುಲ್ಲರ್ ಕರೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಎಪ್ಪತ್ತೇಳು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಅಂಧ ವ್ಯಕ್ತಿಯ ಗಾಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು, ‘ನಿಮ್ಮ ಗಾಯನ ನಿಜಕ್ಕೂ ಅತ್ಯದ್ಭುತ, ನಿಮ್ಮ ಪ್ರತಿಭೆ ನಾನು ಗೌರವ ಸಲ್ಲಿಸುತ್ತೇನೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಅಣ್ಣ ಈ ಹಾಡಿನ ಫುಲ್ ವಿಡಿಯೋ ಅಪ್ಲೋಡ್ ಮಾಡಿ’ ಎಂದು ಕೇಳಿಕೊಂಡಿದ್ದಾರೆ. ಮತ್ತೊಬ್ಬರು, ‘ಅತ್ಯದ್ಭುತ ಧ್ವನಿ, ನಿಮ್ಮ ಪ್ರತಿಭೆಗೆ ನನ್ನದೊಂದು ಸೆಲ್ಯೂಟ್’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹೃದಯದ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








