AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಇದು ಅಪ್ಡೇಟೆಡ್ ಟೆಕ್ನಾಲಜಿ, ಟ್ರ್ಯಾಕ್ಟರ್ ಬದಲು ಉಳುಮೆ ಮಾಡಲು ಆಟೋ ಬಂತು

ಸಾಮಾನ್ಯವಾಗಿ ಆಟೋವನ್ನು ಓಡಾಡಲು ಸಲುವಾಗಿ ಬಳಸುತ್ತೇವೆ. ಕೆಲವರಂತೂ ಆಟೋ ಓಡಿಸಿ ಒಂದಿಷ್ಟು ಸಂಪಾದಿಸಿ, ಆ ದುಡ್ಡಿನಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಆಟೋವನ್ನು ವಿಭಿನ್ನವಾಗಿ ಬಳಸಿಕೊಂಡಿದ್ದಾನೆ. ಹೌದು, ಆಟೋವನ್ನು ಬಳಸಿ ಉಳುಮೆ ಮಾಡಿದ್ದು ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral : ಇದು ಅಪ್ಡೇಟೆಡ್ ಟೆಕ್ನಾಲಜಿ, ಟ್ರ್ಯಾಕ್ಟರ್ ಬದಲು ಉಳುಮೆ ಮಾಡಲು ಆಟೋ ಬಂತು
ವೈರಲ್ ವಿಡಿಯೋ Image Credit source: Instagram
ಸಾಯಿನಂದಾ
|

Updated on: Apr 28, 2025 | 12:14 PM

Share

ಭಾರತ ಕೃಷಿ (agriculture ) ಪ್ರಧಾನವಾದ ದೇಶ. ಇತ್ತೀಚೆಗಿನ ದಿನಗಳಲ್ಲಿ ಸ್ವ ಆಸಕ್ತಿಯಿಂದ ಕೃಷಿಯತ್ತ ಮುಖ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಈಗಾಗಲೇ ಈ ಕೃಷಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ರೈತರು ಕೃಷಿ ಸಂಬಂಧಿ ಕೆಲಸಗಳಿಗೆ ಆಧುನಿಕ ಯಂತ್ರ (mechine) ಗಳನ್ನೆ ಅವಲಂಬಿಸಿಕೊಂಡಿದ್ದಾರೆ. ಈ ಹಿಂದೆಯೆಲ್ಲಾ ಉಳುಮೆ ಮಾಡಲು ಎತ್ತು , ಕೋಣಗಳನ್ನು ಬಳಸಲಾಗುತ್ತಿತ್ತು. ಆದರೆ ಇದೀಗ ಸಾಂಪ್ರದಾಯಿಕ ವಿಧಾನದಿಂದ ಉಳುಮೆ ಮಾಡುವ ಬದಲು ಟ್ಯಾಕ್ಟರ್ (tractor)ಗಳನ್ನೇ ಹೆಚ್ಚಿನವರು ನೆಚ್ಚಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಇನ್ನು ಅಪ್ಡೇಟ್ ಆಗಿದ್ದು ಆಟೋ (auto) ಬಳಸಿ ಗದ್ದೆಯನ್ನು ಉಳುಮೆ ಮಾಡಿದ್ದು, ಈ ವಿಡಿಯೋವೊಂದು ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಈತನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

sajid hussain 786r ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಗದ್ದೆ ಉಳುಮೆ ಮಾಡಲು ಆಟೋವನ್ನು ಬಳಸಿಕೊಂಡಿರುವುದನ್ನು ನೋಡಬಹುದು. ಇಲ್ಲಿ ಆಟೋದ ಹಿಂಭಾಗಕ್ಕೆ ಹಲಗೆಯನ್ನು ಕಟ್ಟಲಾಗಿದ್ದು, ಈ ವ್ಯಕ್ತಿಯೊಬ್ಬನು ಆಟೋವನ್ನು ಓಡಿಸುತ್ತಿದ್ದಾನೆ. ಹಲಗೆಯನ್ನು ಕಟ್ಟಲಾಗಿರುವ ಕಾರಣ ಗದ್ದೆಯ ಮಣ್ಣು ಸಮತಟ್ಟಾಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ
Image
ಪೈಲಟ್ ಮೊಮ್ಮಗನ ಜೊತೆಯಲ್ಲಿ ಅಜ್ಜನ ಮೊದಲ ವಿಮಾನ ಪ್ರಯಾಣ, ವಿಡಿಯೋ ವೈರಲ್
Image
ಶಸ್ತ್ರಚಿಕಿತ್ಸೆಯ ಸಾಧನ ಬಳಸಿ ಹರಿದ ಚಪ್ಪಲಿ ಹೊಲಿದ ವೈದ್ಯಕೀಯ ವಿದ್ಯಾರ್ಥಿ
Image
ಇದು ಬಾಯಲ್ಲಿ ನೀರೂರಿಸುವ ಫ್ರೂಟ್ ಐಸ್ ಗೋಲಾ

ಇದನ್ನೂ ಓದಿ : Viral : ರೀಲ್ಸ್ ಹುಚ್ಚಿಗೆ ಮರದ ತುತ್ತ ತುದಿಯಲ್ಲಿ ನಿಂತು ಡಾನ್ಸ್ ಮಾಡಿದ ಮಹಿಳೆ, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಈಗಾಗಲೇ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಒಬ್ಬ ಬಳಕೆದಾರರು, ‘ಮನುಷ್ಯನು ಬುದ್ಧಿವಂತ ಎನ್ನುವುದೇನೋ ನಿಜ. ಆದರೆ ಇಷ್ಟು ಬುದ್ಧಿವಂತನೆಂದು ತಿಳಿದಿರಲಿಲ್ಲ’ ಎಂದಿದ್ದಾರೆ. ಇನ್ನೊಬ್ಬರು, ‘ಗದ್ದೆ ಉಳುಮೆ ಮಾಡಲು ಹೊಸ ಟೆಕ್ನಾಲಜಿ ಬಂತು’ ಎಂದಿದ್ದಾರೆ. ಮತ್ತೊಬ್ಬರು, ‘ಇದು ರೈತನ ಕೆಲಸವನ್ನು ಮತ್ತಷ್ಟು ವೇಗದಾಯಕವಾಗಿ ಮಾಡುತ್ತದೆ. ಈ ರೀತಿ ಐಡಿಯಾ ಬುದ್ಧಿವಂತರಿಗೆ ಮಾತ್ರ ಬರಲು ಸಾಧ್ಯ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್