AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಹೇಗೆ? ತನಿಖೆಯಲ್ಲಿ ಬಯಲಾದ ಸಂಗತಿಗಳಿವು

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನದ ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿತ್ತು. ಅಜಿತ್ ಪವಾರ್ ಅವರ ವಿಮಾನ ಅಪಘಾತದ ಪ್ರಾಥಮಿಕ ತನಿಖೆಯು ಹೊರಬಿದ್ದಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ VSR ಏವಿಯೇಷನ್ ​​ಚಾರ್ಟರ್ಡ್ ಜೆಟ್ ವಿಮಾನವು ಸಿಬ್ಬಂದಿ 3,000 ಮೀಟರ್ ಗೋಚರತೆಯಲ್ಲಿ ಇಳಿಯಲು ಪ್ರಯತ್ನಿಸಿದಾಗ ಅಪಘಾತಕ್ಕೀಡಾಗಿತ್ತು.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು ಹೇಗೆ? ತನಿಖೆಯಲ್ಲಿ ಬಯಲಾದ ಸಂಗತಿಗಳಿವು
Ajit Pawar Plane Crash
ಸುಷ್ಮಾ ಚಕ್ರೆ
|

Updated on: Feb 28, 2026 | 8:28 PM

Share

ಮುಂಬೈ, ಫೆಬ್ರವರಿ 28: ಜನವರಿ 28ರಂದು ಮಹಾರಾಷ್ಟ್ರದ ಬಾರಾಮತಿ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಾಜಿ ಡಿಸಿಎಂ ಅಜಿತ್ ಪವಾರ್ (Ajit Pawar) ಸಾವನ್ನಪ್ಪಿದ್ದರು. ಈ ಅಪಘಾತ ನಡೆದ ಒಂದು ತಿಂಗಳ ನಂತರ, ಅಪಘಾತದ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ಅಜಿತ್ ಪವಾರ್ ಅವರ ವಿಮಾನ ಏಕೆ ಅಪಘಾತಕ್ಕೀಡಾಯಿತು ಎಂಬುದರ ಕುರಿತು ಇದು ಮಾಹಿತಿಯನ್ನು ನೀಡಿದೆ. 22 ಪುಟಗಳ ಈ ವರದಿಯು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ವಿಮಾನವು ನೆಲಕ್ಕೆ ಅಪ್ಪಳಿಸುವ ಮೊದಲು ಮರಕ್ಕೆ ಡಿಕ್ಕಿ ಹೊಡೆದು ನಂತರ ನೆಲಕ್ಕೆ ಅಪ್ಪಳಿಸಿದೆ ಎಂದು ವರದಿ ಹೇಳಿದೆ.

ಅಜಿತ್ ಪವಾರ್ ಅವರ ವಿಮಾನದ ಅಪಘಾತದ ತನಿಖೆಯನ್ನು ವಾಯು ಅಪಘಾತ ತನಿಖಾ ಬ್ಯೂರೋ (AAIB) ನಡೆಸುತ್ತಿದೆ. ಈ ಸಂಸ್ಥೆ ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ಅಪಘಾತವು ಒಂದೇ ಕಾರಣದಿಂದ ಆಗಿಲ್ಲ. ಹವಾಮಾನ, ಮೂಲಸೌಕರ್ಯ, ಕಾರ್ಯಾಚರಣೆಯ ನಿರ್ಧಾರಗಳೆಲ್ಲವೂ ಸೇರೊ ಆಗಿರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. CVR/FDR ನ ವಿವರವಾದ ವಿಶ್ಲೇಷಣೆಯ ನಂತರ ಅಪಘಾತದ ಅಂತಿಮ ಕಾರಣಗಳು ಸ್ಪಷ್ಟವಾಗುತ್ತವೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಅಜಿತ್ ಪವಾರ್ ಇದ್ದ ವಿಮಾನ ಅಪಘಾತ: ಕೊನೇ ಸಮಯದಲ್ಲಿ ಪೈಲಟ್ ಬದಲಾವಣೆ ಮಾಡಲಾಗಿತ್ತೇ?

ಬಾರಾಮತಿಯಲ್ಲಿ ಪ್ರತ್ಯೇಕ MET (ಹವಾಮಾನ) ಸೌಲಭ್ಯವಿಲ್ಲ. ವಿಮಾನ ನಿಲ್ದಾಣದ ಗೋಪುರವು ಗೋಚರತೆಯನ್ನು 3000 ಮೀಟರ್ ಎಂದು ಹೇಳಿತ್ತು. ಆದರೆ VFR ಕಾರ್ಯಾಚರಣೆಗಳಿಗೆ ಕನಿಷ್ಠ 5000 ಮೀಟರ್ ಅಗತ್ಯವಿದೆ. ಆದರೆ, ವಿಮಾನ ಅಪಘಾತದ ಸಮಯದಲ್ಲಿ ಗೋಚರತೆ ಕೇವಲ 2000 ಮೀಟರ್ ಆಗಿತ್ತು. ಆದ್ದರಿಂದ, ಹವಾಮಾನ ಮತ್ತು ಗೋಚರತೆಯು ಈ ವಿಮಾನ ಅಪಘಾತಕ್ಕೆ ಹೆಚ್ಚಿನ ಕಾರಣವಾಗಿರಬಹುದು ಎಂದು ವರದಿ ಬಹಿರಂಗಪಡಿಸಿದೆ.

ಇದನ್ನೂ ಓದಿ: ಎನ್​ಸಿಪಿ ಮತ್ತೆ ವಿಲೀನವಾಗುತ್ತಾ? ಅಜಿತ್ ಪವಾರ್ ಕೊನೆಯ ಆಸೆಯ ಬಗ್ಗೆ ಶುರುವಾಯ್ತು ಚರ್ಚೆ

VFR ಮಿತಿಗಿಂತ ಕಡಿಮೆ ಗೋಚರತೆಯಲ್ಲಿ ಇಳಿಯಲು ಪ್ರಯತ್ನಿಸುವುದು ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಅಲ್ಲದೆ, ಅಜಿತ್ ಪವಾರ್ ಅವರ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವೈಫಲ್ಯದ ಯಾವುದೇ ನೇರ ಪುರಾವೆಗಳು ಇಲ್ಲಿಯವರೆಗೆ ಬೆಳಕಿಗೆ ಬಂದಿಲ್ಲ. ಆದ್ದರಿಂದ ಈಗ CVR/FDR ವಿಶ್ಲೇಷಣೆ ನಿರ್ಣಾಯಕವಾಗಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್
ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್
ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ
ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ
ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?
ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?
ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್
ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ
ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ
ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ
ರಾಗಿಣಿ ಪ್ರಜ್ವಲ್ ಡ್ಯಾನ್ಸ್​​​ಗೆ ಅವರೇ ಸರಿಸಾಟಿ
ರಾಗಿಣಿ ಪ್ರಜ್ವಲ್ ಡ್ಯಾನ್ಸ್​​​ಗೆ ಅವರೇ ಸರಿಸಾಟಿ
ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ
ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ