AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನಿಗೆ ಭಯ, ಆದ್ರೆ ಅದು ನನ್ನ ಕನಸು: ಕೊನೆಗೂ ತಾಯಿಯನ್ನು ಆಕಾಶದಲ್ಲಿ ಹಾರಾಡಿಸಿದ ಮಗ

ಮನೀಶ್ ಎಂಬ ಯುವಕ ತನ್ನ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದು ಅವರ ಕನಸನ್ನು ನನಸು ಮಾಡಿದ್ದಾರೆ. ತಾಯಿಯ ಮುಗ್ಧ ಸಂತೋಷ, ವಿಮಾನದಲ್ಲಿನ ಅವರ ಕುತೂಹಲ ಮತ್ತು ಆನಂದವನ್ನು ಮನೀಶ್ ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾಯಿ-ಮಗನ ಅವಿನಾಭಾವ ಸಂಬಂಧವನ್ನು ಸಾರುತ್ತಿದೆ. ನೆಟ್ಟಿಗರು ಇದನ್ನು ಅತ್ಯುತ್ತಮ ಉಡುಗೊರೆ ಎಂದು ಕೊಂಡಾಡಿದ್ದಾರೆ.

ಅಮ್ಮನಿಗೆ ಭಯ, ಆದ್ರೆ ಅದು ನನ್ನ ಕನಸು: ಕೊನೆಗೂ ತಾಯಿಯನ್ನು ಆಕಾಶದಲ್ಲಿ ಹಾರಾಡಿಸಿದ ಮಗ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Feb 27, 2026 | 12:35 PM

Share

ನವದೆಹಲಿ, ಫೆ.27: ಪ್ರತಿಯೊಬ್ಬ ಮಗನಿಗೂ ತನ್ನ ಪೋಷಕರ ಆಸೆಗಳನ್ನು ಪೂರೈಸಬೇಕೆಂಬ ಹಂಬಲವಿರುತ್ತದೆ. ಅಂತಹದ್ದೇ ಒಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದೆ ಮನೀಶ್ ಎಂಬ ಯುವಕ ಹಂಚಿಕೊಂಡ ವಿಡಿಯೋ. ತಮ್ಮ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ಮನೀಶ್, ಅವರ ಮುಖದಲ್ಲಿನ ಮುಗ್ಧ ಸಂತೋಷವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮನೀಶ್ ಹಂಚಿಕೊಂಡಿರುವ ವಿಡಿಯೋದಲ್ಲಿರುವಂತೆ, ಇಡೀ ಕುಟುಂಬದಲ್ಲೇ ವಿಮಾನ ಪ್ರಯಾಣ ಮಾಡಿದ ಮೊದಲ ಮಹಿಳೆ ಇವರ ತಾಯಿಯಾಗಿದ್ದಾರೆ. ವಿಮಾನ ಏರುವ ಮೊದಲಿನ ಕುತೂಹಲದಿಂದ ಹಿಡಿದು, ಆಕಾಶದಲ್ಲಿ ಹಾರುವಾಗ ಕಿಟಕಿಯ ಮೂಲಕ ಹೊರಗಿನ ಪ್ರಪಂಚವನ್ನು ನೋಡಿ ಬೆರಗಾಗುವವರೆಗಿನ ಕ್ಷಣಗಳು ವಿಡಿಯೋದಲ್ಲಿದೆ.

ವಿಡಿಯೋದಲ್ಲೇನಿದೆ?

ವಿಮಾನದೊಳಗೆ ಕುಳಿತ ತಾಯಿ ಅತ್ಯಂತ ಉತ್ಸಾಹದಿಂದ ಸುತ್ತಮುತ್ತಲಿನ ಸೌಂದರ್ಯವನ್ನು ಗಮನಿಸುತ್ತಿರುವುದು ಕಾಣಬಹುದು. ವಿಮಾನದಲ್ಲಿ ನೀಡಿದ ಆಹಾರವನ್ನು ಸವಿಯುವಾಗ ಅವರು ತೋರುವ ನಾಚಿಕೆ ಮತ್ತು ನಗು ನೋಡುಗರ ಮನ ಗೆಲ್ಲುತ್ತಿದೆ. ಮಗ ಮನೀಶ್ ಅವರು ತಮ್ಮ ತಾಯಿಯ ಪ್ರತಿಯೊಂದು ಹಾವಭಾವವನ್ನು ಪ್ರೀತಿಯಿಂದ ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ: ಬೆಡ್​​​​​ ರೂಮ್​​ನಲ್ಲಿ ಹೆಂಡತಿ ಜತೆ ಮತ್ತೊಬ್ಬ ಗಂಡಸನ್ನು ನೋಡಿ ಪ್ರಜ್ಞೆ ತಪ್ಪಿದ ಪತಿ: ಕ್ಷಮಿಸು ಎಂದು ಗೋಳಾಡಿದ ಪತ್ನಿ

ಇಲ್ಲಿದೆ ನೋಡಿ ವಿಡಿಯೋ:

View this post on Instagram

A post shared by MK (@manishh_mk_)

ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದೇನು?

ಮನೀಶ್​​ ಅವರು ಹಂಚಿಕೊಂಡಿರುವ ವಿಡಿಯೋದ ಬಗ್ಗೆ ನೆಟ್ಟಗರು ಕೂಡ ಕಮೆಂಟ್​ ಮಾಡಿದ್ದಾರೆ. ಇದು ಮಗ ತನ್ನ ತಾಯಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ನಾವು ಜೀವನದಲ್ಲಿ ಏನೇ ಸಾಧಿಸಿದರೂ, ನಮ್ಮ ಪೋಷಕರ ಮುಖದಲ್ಲಿ ಇಂತಹ ನಗು ನೋಡುವುದೇ ಅಂತಿಮ ಯಶಸ್ಸು ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಈ ವಿಡಿಯೋವನ್ನು ನೋಡಿ. ಈ ವಿಡಿಯೋ ಕೇವಲ ಪ್ರವಾಸದ ಕಥೆಯಲ್ಲ, ಬದಲಿಗೆ ತಾಯಿ-ಮಗನ ನಡುವಿನ ಅವಿನಾಭಾವ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು