ಕರಡಿ ಘರ್ಜನೆಗೆ ಬೆದರಿದ ಹುಲಿರಾಯ, ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಅದರಲ್ಲಿಯೂ ಈ ಕ್ರೂರ ಪ್ರಾಣಿಗಳ ನಡುವಿನ ಭೀಕರ ಕಾಳಗ ದೃಶ್ಯಗಳನ್ನು ಕಂಡಾಗ ಮೈ ಜುಮ್ಮ್ ಎನ್ನುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕರಡಿ ಹಾಗೂ ಹುಲಿರಾಯನ ಕಾಳಗವು ತಾರಕಕ್ಕೇರಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಮಧ್ಯ ಪ್ರದೇಶ, ಮೇ 1: ಕ್ರೂರಪ್ರಾಣಿ (quarrel animal) ಗಳ ಸಾಲಿಗೆ ಸೇರಿಕೊಂಡಿರುವ ಹುಲಿವು ಬೇಟೆಯಲ್ಲಿ ಪಳಗಿದ ಪ್ರಾಣಿ. ಹೀಗಾಗಿ ತನ್ನ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಸಾಧುಪ್ರಾಣಿಗಳ ಮೇಲೆ ಹುಲಿಯೂ ದಾಳಿ ಮಾಡುತ್ತವೆ. ಇಂತಹ ಭಯಾನಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹುಲಿ ಹಾಗೂ ಕರಡಿಯೂ ಮುಖಾಮುಖಿಯಾಗಿದೆ. ಆದರೆ ಈ ವೇಳೆಯಲ್ಲಿ ಕರಡಿಯ ಆರ್ಭಟಕ್ಕೆ ಹೆದರಿ ಹುಲಿಯೂ ಅಲ್ಲಿಂದ ಓಡಿ ಹೋಗಿದೆ. ಇದು ನಡೆದದ್ದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆ (seoni district of madhya pradesh) ಯ ಪೆಂಚ್ ಹುಲಿ ಅಭಯಾರಣ್ಯ (pench tiger reserve) ದಲ್ಲಿ ಎನ್ನಲಾಗಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
Free press madhya pradesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಪ್ರಾರಂಭದಲ್ಲಿ ಹುಲಿರಾಯ ಹಾಗೂ ಕರಡಿ ಮುಖಾಮುಖಿಯಾಗುತ್ತಿರುವುದನ್ನು ನೋಡಬಹುದು. ಹುಲಿಯೂ ಕರಡಿಯ ಹತ್ತಿರಕ್ಕೆ ಮೆಲ್ಲನೆ ಹೆಜ್ಜೆ ಇಡುತ್ತ ಬರುತ್ತಿದ್ದು, ಆದರೆ ಕರಡಿ ಮಾತ್ರ ಯಾವುದೇ ಭಯವಿಲ್ಲದೆ ಎದ್ದು ನಿಲ್ಲುವುದನ್ನು ಕಾಣಬಹುದು. ಆ ಬಳಿಕ ಕರಡಿಯೂ ಜೋರಾಗಿ ಘರ್ಜಿಸಿದ್ದು ಭಯಗೊಂಡ ಹುಲಿಯೂ ಹಿಂದಕ್ಕೆ ಸರಿದಿದ್ದು, ತಕ್ಷಣವೇ ಅಲ್ಲಿಂದ ಓಡಿ ಹೋಗಿದೆ.
ಇದನ್ನೂ ಓದಿ : ಮದುವೆ ಕಾರ್ಡ್ ನಲ್ಲಿ ಫಿಸಿಕಲ್ ಕ್ವಾಲಿಫೈಡ್ ಎಂದು ಅರ್ಹತೆ ಉಲ್ಲೇಖಿಸಿದ ಮದುಮಗ
ವೈರಲ್ ವಿಡಿಯೋ ಇಲ್ಲಿದೆ ನೋಡಿ
#WATCH | Hilarious! Bear Scares Away Roaring Tiger At Pench Tiger Reserve #MPvideos #MadhyaPradesh #viralvideo pic.twitter.com/FETb4JpEIs
— Free Press Madhya Pradesh (@FreePressMP) April 28, 2025
ಈ ವಿಡಿಯೋವೊಂದು ಈಗಾಗಲೇ ಏಳು ನೂರಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದ್ದು, ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರೊಬ್ಬರು, ‘ಹುಲಿಯೂ ಧೈರ್ಯವಂತ ಪ್ರಾಣಿ ಎಂದು ಕೇಳಿದ್ದೆ,ಆದರೆ ಈ ವಿಡಿಯೋ ನೋಡಿದ ಬಳಿಕ ಹುಲಿಗೆ ಧೈರ್ಯ ಎಷ್ಟಿದೆ ಎಂದು ತಿಳಿಯಿತು’ ಎಂದಿದ್ದಾರೆ. ಇನ್ನೊಬ್ಬರು, ‘ಇಂತಹ ದೃಶ್ಯಗಳನ್ನು ನೋಡಲು ಮಜಾ ಇರುತ್ತದೆ’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಈ ಹುಲಿಗೆ ಧೈರ್ಯ ಅನ್ನೋದೇ ಇಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








